ಬೆಂಗಳೂರು: ಸಾರಿಗೆ ಇಲಾಖೆಯಿಂದ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳ ವಿರುದ್ಧ ಹೆಚ್ಚುವರಿ ದರ ವಸೂಲಿ ಬಗ್ಗೆ ಸಮರ ಸಾರಲಾಗಿತ್ತು. ಆದ್ರೇ ಆಪ್ ಆಧಾರಿತ ಟ್ಯಾಕ್ಸಿ ಸೇವೆಗಳ ಸಂಸ್ಥೆಗಳು ಹೈಕೋರ್ಟ್ ಮೊರೆ ಹೋಗಿದ್ದವು. ಹೈಕೋರ್ಟ್ ಸರ್ಕಾರ ಹಾಗೂ ಸಂಸ್ಥೆಗಳು ಚರ್ಚಿಸಿ ಸಮಸ್ಯೆ ಬಗೆ ಹರಿಸಿಕೊಳ್ಳೋದಕ್ಕೆ 15 ದಿನಗಳ ಡೆಡ್ ಲೈನ್ ನಿಗದಿ ಪಡಿಸಿತ್ತು. ಇದೀಗ ಡೆಡ್ ಲೈನ್ ಮುಗಿದರೂ ಸರ್ಕಾರ ದರ ಪರಿಷ್ಕರಣೆ ಮಾಡದ ಕಾರಣ, ಇಂದು ಆಪ್ ಆಧಾರಿತ ಕಂಪನಿಗಳಿಂದಲೇ ದರ ಹೆಚ್ಚಳದ ಸಾಧ್ಯತೆ ಇದೆ. ಈ ಮೂಲಕ ಆಪ್ ಆಧಾರಿತ ಟ್ಯಾಕ್ಸಿ ಸೇವೆ ಬಳಸುವವರಿಗೆ ಬಿಗ್ ಶಾಕ್ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಸಂಬಂಧ ಸಾರಿಗೆ ಇಲಾಖೆಯಿಂದ ಆಪ್ ಆಧಾರಿತ ಟ್ಯಾಕ್ಸಿ ಸೇವೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ರಾಜ್ಯ ಸರ್ಕಾರದ ಈ ಕ್ರಮದ ವಿರುದ್ಧ ಆಪ್ ಆಧಾರಿತ ಟ್ಯಾಕ್ಸಿ ಸೇವೆಗಳ ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಈ ಅರ್ಜಿಯ ವಿಚಾರಣೆ ನಡೆಸಿದ್ದಂತ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, 15 ದಿನಗಳಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಿತ್ತು.
ಇಂದಿನ ಇಡಿ ವಿಚಾರಣೆಗೆ ‘ಡಿ.ಕೆ ಶಿವಕುಮಾರ್’ ಗೈರು, ‘ಸಂಸದ ಡಿ.ಕೆ ಸುರೇಶ್’ ಹಾಜರ್ | DK Brothers
ಹೈಕೋರ್ಟ್ ಸೂಚನೆಯಂತೆ ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿಗಳು ಓಲಾ, ಉಬರ್, Rapido ಟ್ಯಾಕ್ಸಿ ಕಂಪನಿಗಳ ಜೊತೆಗೆ ಸಭೆ ನಡೆಸಿ, ದರ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಸಿದ್ದರು. ಈ ಸಭೆಯಲ್ಲಿ ಕನಿಷ್ಠ 2 ಕಿಲೋಮೀಟರ್ ಗೆ 100 ರೂ ದರ ನಿಗದಿ ಪಡಿಸುವಂತೆ ಆಪ್ ಆಧಾರಿತ ಟ್ಯಾಕ್ಸಿ ಸೇವೆಯ ಕಂಪನಿಗಳು ಬೇಡಿಕೆ ಮುಂದಿಟ್ಟಿದ್ದವು.
ರಾಜ್ಯದ ‘ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ಶೀಘ್ರವೇ ‘ವೇತನ ಆಯೋಗ ರಚನೆ’
ಈ ಕಾಟಾಚಾರದ ಸಭೆಯ ಬಳಿಕ, ಈವರೆಗೆ ಸಾರಿಗೆ ಇಲಾಖೆಯಿಂದ ದರ ಪರಿಷ್ಕರಣೆಯ ಬಗ್ಗೆ ಯಾವುದೇ ನಿರ್ಧಾರ ಪ್ರಕಟಗೊಂಡಿರಲಿಲ್ಲ. ಅಲ್ಲದೇ ಹೈಕೋರ್ಟ್ ನೀಡಿದ್ದಂತ ಡೆಡ್ ಲೈನ್ ಕೂಡ ಕೊನೆಗೊಂಡಿತ್ತು. ಈ ಹಿನ್ನಲೆಯಲ್ಲಿ ಇಂದು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುತ್ತಿರುವಂತ ಕಂಪನಿಗಳಿಂದಲೇ ದರ ಪರಿಷ್ಕರಣೆ ಮಾಡಲಿವೆ ಎನ್ನಲಾಗುತ್ತಿದೆ. ಒಂದು ವೇಳೆ ದರ ಪರಿಷ್ಕರಣೆ ಆದ್ರೇ ಈ ಸೇವೆ ಬಳಸುವಂತ ಪ್ರಯಾಣಿಕರಿಗೆ ದರ ಹೆಚ್ಚಳದ ಬಿಗ್ ಶಾಕ್ ಸಿಗಲಿದೆ.