ಬೆಂಗಳೂರು: ಸ್ಪೋಟಕ ವಸ್ತುಗಳ ಮಾರಾಟ ಪರವಾನಗಿ ಪಡೆದವರ ಬಳಿ ಕೆಲಸ ಮಾಡುವ ನೌಕರ, ಮಾಲೀಕರ ಅರಿವಿಗೆ ಬಾರದಂತೆ ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನು ಮಾರಾಟ ಮಾಡಿದರೇ, ಅದಕ್ಕೆ ಪರವಾನಗಿದಾರರನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ಪಟ್ಟಿದೆ. ಈ ಮೂಲಕ ಸ್ಪೋಟ ಪ್ರಕರಣದಲ್ಲಿ ಸಿಲುಗಿದ್ದವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಈ ಸಂಬಂಧ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಎಸ್ ಎಲ್ ಎನ್ ಕಂಪನಿಯ ಪಿ ಸುನೀಲ್ ಕುಮಾರ್ ಹಾಗೂ ಅವರ ತಂದೆ ಎಂ ಪ್ರಕಾಶ್ ರಾವ್ ಸಲ್ಲಸಿದ್ದಂತ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ನಡೆಸಿತು.
ಪಿ.ಸುನೀಲ್ ಕುಮಾರ್ ಹಾಗೂ ಎಂ ಪ್ರಕಾಶ್ ರಾವ್ ಅವರು ಕ್ವಾರಿ ಗುತ್ತಿಗೆದಾರರಿಗೆ ಸ್ಪೋಟಕ ಮಾರಾಟ ಮಾಡುವಂತ ಪರವಾನಗಿ ಹೊಂದಿದ್ದರು. ಕಳೆದ ಆಗಸ್ಟ್ 16, 2021ರಂದು ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಂತಿದ್ದ ಕಾರೊಂದು ಸ್ಪೋಟಗೊಂಡು, ವ್ಯಕ್ತಿಯೊಬ್ಬ ಮೃತಪಟ್ಟಿದ್ದನು.
ಈ ಪ್ರಕರಣದಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಂತ ಪೊಲೀಸರು, ವಿಚಾರಣೆಯ ಸಂದರ್ಭದಲ್ಲಿ ಕಾರ್ ನಲ್ಲಿ ಜಿಲೆಟಿನ್ ಕಡ್ಡಿಗಳನ್ನು ಸಾಗಿಸುತ್ತಿದ್ದ ಕಾರಣ, ಸ್ಪೋಟ ಸಂಭವಿಸಿದೆ ಎಂಬುದಾಗಿ, ಈ ಘಟನೆಯಲ್ಲಿ ಮಹೇಶ್ ಎಂಬ ವ್ಯಕ್ತಿ ಸಾವೀಗೀಡಾಗಿರೋದಾಗಿ ಪತ್ತೆ ಹಚ್ಚಿದ್ದರು.
ಈ ಹಿನ್ನಲೆಯಲ್ಲಿ ಮೃತ ಮಹೇಶ್ ಅರ್ಜಿದಾರರ ಮಳಿಗೆಯಿಂದ ಜಿಲೆಟಿನ್ ಕಡ್ಡಿಗಳನ್ನು ಖರೀದಿಸಿದ್ದ ವಿಚಾರವಾಗಿ ತಿಳಿದು, ಪೊಲೀಸರು ಸುನೀಲ್ ಕುಮಾರ್ ಹಾಗೂ ಪ್ರಕಾಶ್ ರಾವ್ ಅನ್ನು ಪ್ರಕರಣದಲ್ಲಿ 4, 5ನೇ ಆರೋಪಿಗಳನ್ನಾಗಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣ ರದ್ದುಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನು ವಿಚಾರಣೆ ನಡೆಸಿದಂತ ನ್ಯಾಯಾಲಯವು, ಕಾರ್ ನಲ್ಲಿದ್ದ ಜಿಲೆಟಿನ್ ಸ್ಪೋಟಗೊಂಡ ಪ್ರಕರಣವೊಂದರಲ್ಲಿ ಮೃತವ್ಯಕ್ತಿಗೆ ಅಕ್ರಮವಾಗಿ ಸ್ಪೋಟಕ ಮಾರಾಟ ಮಾಡಿದ ಆರೋಪದಲ್ಲಿ ದಾಖಲಾಗಿದ್ದಂತ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿದೆ. ಅಲ್ಲದೇ ಸ್ಪೋಟಕಗಳ ಮಾರಾಟ ಪರವಾನಗಿ ಪಡೆದವರ ಬಳಿ ಕೆಲಸ ಮಾಡುವ ನೌಕರ ಮಾಲೀಕರ ಅರಿವಿಗೆ ಬಾರದಂತೆ ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನು ಮಾರಾಟ ಮಾಡಿದರೇ, ಅದಕ್ಕೆ ಪರವಾನಗಿದಾರರನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಆದೇಶಿಸಿದೆ.
ಮಾನಸಿಕ ಅಸ್ವಸ್ಥನ ಮಾತು ಕೇಳಿ 1 ತಾಸು ಚರಂಡಿ ಜಾಲಾಡಿದ ಪೊಲೀಸರು: ಯಾಕೆ ಅಂತ ಈ ಸುದ್ದಿ ಓದಿ
BIGG NEWS : ರೈತರೇ ಗಮನಿಸಿ : ಪಿಎಂ ಕಿಸಾನ್ ಯೋಜನೆ `ಇ-ಕೆವೈಸಿ’ ಹಾಗೂ ಹೊಸ ನೋಂದಣಿಗೆ ಅವಕಾಶ