ಬೆಂಗಳೂರು : ನಿನ್ನೆ ಬೆಂಗಳೂರು ಸೇರಿದಂತೆ ರಾಜ್ಯದ ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 8 ಜನರು ಸಾವನ್ನಪ್ಪಿದ್ದಾರೆ. ಹೊಸಕೋಟೆ ಬಳಿ ಬೆಂಜ್ ಕಾರು ಅಪಘಾತದಲ್ಲಿ ಇಬ್ಬರು ಸಾವನಪ್ಪಿದ್ದರೆ, ಇನ್ನೂ ಕೆಂಗೇರಿ ಬಳಿ ರಸ್ತೆ ಬದಿಯ ದಿವೈಡರ್ ಗೆ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಅದೇ ರೀತಿಯಾಗಿ ಶಾಲಾ ಬಸ್ ಹರಿದು ಓರ್ವ ಮಹಿಳೆ ಸಾವನಪ್ಪಿದ್ದರೆ, ಇನ್ನೊಂದು ಘಟನೆಯಲ್ಲಿ ಇಕೋ ಕಾರು ಪಲ್ಟಿಯಾಗಿ ಇನ್ನೊರ್ವ ವ್ಯಕ್ತಿ ಸಾವನಪ್ಪಿದ್ದಾನೆ.
ಬೆಂಜ್ ಕಾರು ಅಪಘಾತ : ಇಬ್ಬರು ಸಾವು
ನಿನ್ನೆ ಹೊಸಕೋಟೆ ಬಳಿ ಬೆಂಜ್ ಕಾರು ಅಪಘಾತ ಸಂಭವಿಸಿ ಇಬ್ಬರು ಸಾವನಪ್ಪಿದ್ದಾರೆ, ಕಳೆದ ರಾತ್ರಿ ಚೆನ್ನೈ ಎಕ್ಸ್ಪ್ರೆಸ್ ವೇನಲ್ಲಿ ಭೀಕರ ಅಪಘಾತ ಸಂಭವಿಸಿ ಓರ್ವ ಯುವತಿ ಹಾಗು ಕಾರು ಚಾಲಕ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಇದ್ದ 28 ವರ್ಷದ ಯುವತಿ ಶಹಜಾನ್ ಶೇಕ್ ಹಾಗು ಚಾಲಕ ರಿಜ್ವಾನ್ ಸಾವನಪ್ಪಿದ್ದಳು. ಬಳಿಕ ಕಾರು ಚಾಲಕ ನಾಪತ್ತೆಯಾಗಿದ್ದ ಕಾರು ಮತ್ತು ಚಾಲಕ ರಿಜ್ವನ್ ಶವ ಕಾಲುವೆಯಲ್ಲಿ ಪತ್ತೆಯಾಗಿದೆ. ಅಪಘಾತದ ರಭಸಕ್ಕೆ ರಿಜ್ವಾನ್ 20 ಅಡಿಯಿಂದ ಕೆಳಗೆ ಕಾಲುವೆ ಕೆಳಗೆ ಬಿದ್ದಿದ್ದ ಇದೀಗ ಆತನ ಶವ್ ಪಕ್ಕದ ಕಾಲುವೆಯಲ್ಲಿ ಪತ್ತೆಯಾಗಿದೆ.
ದೊಡ್ಡ ಹಲ್ಲೂರು ಬಳಿ ಚೆನ್ನೈ ಎಕ್ಸ್ಪ್ರೆಸ್ ನಲ್ಲಿ ಈ ಒಂದು ಅಪಘಾತ ಸಂಭವಿಸಿದೆ ತಡರಾತ್ರಿ ರಿಜ್ವಾನ್ ಮತ್ತು ಷಹಜಾನ್ ಲಾಂಗ್ ಡ್ರೈವ್ಗೆ ಬಂದಿದ್ದರು. ರಾತ್ರಿ ಸುರಿದ ಮಳೆಗೆ ಹೆದ್ದಾರಿ ಕಾಣದೆ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ ಪರಿಣಾಮವಾಗಿ ಕಾರು ಚಾಲಕ ರಿಜ್ವಾನ್ ಮತ್ತು ಷಹಜಾನ್ ಸ್ಥಳದಲ್ಲಿ ಸಾವನಪ್ಪಿದ್ದಾರೆ. ಮೃತ ಯುವತಿ ಶಹಜಾನ್ ಬೆಂಗಳೂರಿನ ಬಾಣಸವಾಡಿ ನಿವಾಸಿ ಅಪಘಾತಗರ ಸಭೆ ನಡೆದ ಸ್ಥಳದಲ್ಲಿಯೇ ಕಾಲುವೆಯಲ್ಲಿ ರಿಜ್ವಾನ ಶವ ಪತ್ತೆಯಾಗಿದೆ.
ಇನ್ನು ಮೈಸೂರು ರೋಡಿನಲ್ಲಿ ಇದೇ ರೀತಿ ಭೀಕರವಾದ ಅಪಘಾತ ಸಂಭವಿಸಿದೆ ಕಾರಿನ ಅಡಿಯಲ್ಲಿ ಸಿಲುಕಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ . ರಸ್ತೆಯಲ್ಲಿ ಇಕೋ ಕಾರು ಅಡ್ಡಾದಿಡ್ಡಿ ಆಗಿ ಚಾಲನೆ ನಡೆಸಿದ್ದು, ಈಗ ಏಕೆ ಎಡಕ್ಕೆ ಚಲಿಸಿ 2 ಬೈಕ್ಗಳಿಗೆ ಕಾರುಡಿಕೆ ಹೊಡೆದಿದೆ. ರಸ್ತೆಗೆ ಎರಡು ಬೈಕುಗಳು ಡಿಕ್ಕಿ ಹೊಡೆದಿದ್ದು ಆ ವೇಳೆ ಬೈಕ್ ನಲ್ಲಿದ್ದ ನಾಲ್ವರು ಸವಾರರು ಜಲಪಿಲಿಯಾಗಿ ಬಿದ್ದಿದ್ದು ಈ ವೇಳೆ ಕಾರಿನ ಅಡಿ ಓರ್ವ ಸಿಕ್ಕಿಕೊಂಡಿದ್ದ. ತಕ್ಷಣ ಸ್ಥಳೀಯರು ಎತ್ತಲು ಪ್ರಯತ್ನಿಸಿದರು ಆದರೆ ಅಷ್ಟರಲ್ಲಾಗಲಿ ಆತ ಸಾವನಪ್ಪಿದ್ದಾನೆ.
ಮಗಳ ಕಣ್ಣೆದುರೇ ತಾಯಿ ಸಾವು
ಇನ್ನೂ ನಿನ್ನೆ ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಮಗಳನ್ನು ಕಾಲೇಜಿಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಗಾಡಿ ಸ್ಕಿಡ್ ಆಗಿದೆ. ಈ ವೇಳೆ ಹಿಂದಿನಿಂದ ಬಂದಂತಹ ಶಾಲಾ ವಾಹನ ತಾಯಿಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ತಾಯಿ ಸಾವನಪ್ಪಿದ್ದಾರೆ..
ವೈಟ್ಫೀಲ್ಡ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಅಪಘಾತ ಸಂಭವಿಸಿದ್ದು ಮಾರತಹಳ್ಳಿಯಿಂದ ಸಿದ್ದಾಪುರ ಕಡೆಗೆ ಹೋಗುತ್ತಿದ್ದಾಗ ಈ ಒಂದು ಅಪಘಾತ ಸಂಭವಿಸಿದೆ. ಸ್ಕೂಟರ್ನಲ್ಲಿ ತಾಯಿ ಕಾಂತ ಮತ್ತು ಮಗಳು ನೇಹ ತೆರಳುತ್ತಿದ್ದರು. ಈ ವೇಳೆ ಸ್ಕೂಟಿ ಸ್ಕಿಟ್ ಆಗಿ ಇಬ್ಬರು ರಸ್ತೆ ಮೇಲೆ ಬೀಳುತ್ತಾರೆ ಅದೇ ತಾಯಿಯ ಮೇಲೆ ಹರಿದು ಸ್ಥಳದಲ್ಲೇ ಕಾಂತ ಸಾವನ್ನಪ್ಪಿದ್ದಾರೆ. ಕಣ್ಣೆದುರೇ ತಾಯಿಯನ್ನು ಕಳೆದುಕೊಂಡು ನೇಹಾ ಶಾಕ್ ಗೆ ಒಳಗಾಗಿದ್ದಾರೆ.
ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸಾವು!
ಇನ್ನು ಮತ್ತೊಂದು ಬೈಕ್ ಅಪಘಾರದಲ್ಲಿ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ತಡರಾತ್ರಿ ಕೆಂಗೇರಿಯ ಆರ್ ಆರ್ ಡೆಂಟಲ್ ಕಾಲೇಜುಗಳು ಈ ಅಪಘಾತ ಸಂಭವಿಸಿದ್ದು ಅಪಘಾತ ಸಂಭವಿಸಿದೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರಸಿಂಹ ವಿದ್ಯಾರ್ಥಿಗಳು ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತ ವಿದ್ಯಾರ್ಥಿಗಳನ್ನು ಅತುಲ್ ಮತ್ತು ಗೌರಿಶಂಕರ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
KSRTC ಬಸ್ ಡಿಕ್ಕಿಯಾಗಿ ಇಬ್ಬರು ದುರ್ಮರಣ!
ಅದೇ ರೀತಿಯಾಗಿ ನಿನ್ನೆ ಬಾಗಲಕೋಟೆಯಲ್ಲಿ KSRTC ಬಸ್ಗೆ ಲಾರಿ ಡಿಕ್ಕಿಯಾಗಿ ಕೆಎಸ್ಆರ್‌ಟಿಸಿ ಬಸ್ ನಲ್ಲಿ ಇದ್ದ ಇಬ್ಬರುಬಲ್ ದುರ್ಮರಣ ಹೊಂದಿದ್ದಾರೆ. ವಾಣಿ ದೇಸಾಯಿ ಹಾಗೂ ಶಿವಕುಮಾರ್ ಕಡ್ಲಿವಾಡ ದುರ್ಮರಣ ಹೊಂದಿದ್ದಾರೆ. ಬೀಳಗಿ ತಾಲೂಕಿನ ಸುಣ್ಣಗ ಕ್ರಾಸ್ ನಲ್ಲಿ ಒಂದು ಅಪಘಾತ ಸಂಭವಿಸಿದೆ ವಿರುದ್ಧ ದಿಕ್ಕಿನಲ್ಲಿ ಬಂದ ಲಾರಿ ಬಸ್ ನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿ ಇದ್ದ ಇಬ್ಬರು ಸಾವನಪ್ಪಿದು, ಹಲವು ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿವೆ.








