ನವದೆಹಲಿ: ವಿಪ್ರೋ ತನ್ನ ಕಂಪನಿ ಜೊತೆಗೆ ಬೇರೆ ಕಂಪನಿ ಜೊತೆಗೆ ಏಕಕಾಲದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದ ನಂತರ ವಿಪ್ರೋ ತನ್ನ 300 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ ಎಂದು ವಿಪ್ರೋ ಅಧ್ಯಕ್ಷ ರಿಷದ್ ಹೇಳಿದ್ದಾರೆ.
ಈ ವಿಷಯವನ್ನು ವಿಪ್ರೋ ಅಧ್ಯಕ್ಷ ರಿಷದ್ ಪ್ರೇಮ್ ಜಿ ಅವರು ಬಹಿರಂಗಪಡಿಸಿದ್ದಾರೆ. ಅಂದರೆ, ರಿಷದ್ ಪ್ರೇಮ್ ಜಿ ಈ ನೀತಿಯನ್ನು ವಿರೋಧಿಸಿದ್ದು, ಮೂನ್ ಲೈಟಿಂಗ್ ಅನ್ನು ಮೋಸ ಎಂದು ಕರೆದಿದ್ದು, ಪ್ರತಿಸ್ಪರ್ಧಿ ಸಂಸ್ಥೆಯೊಂದಿಗೆ 300 ಉದ್ಯೋಗಿಗಳು ಕೆಲಸ ಮಾಡುತ್ತಿರುವುದನ್ನು ವಿಪ್ರೋ ಕಂಡುಕೊಂಡಿದೆ, ಇದು ಕಂಪನಿಯ ನಿಷ್ಠೆಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ. ವಿಪ್ರೋ ಮಾತ್ರವಲ್ಲದೆ, ಟಿಸಿಎಸ್ ಮತ್ತು ಇನ್ಫೋಸಿಸ್ ನಂತಹ ಕಂಪನಿಗಳು ಇಂತಹ ಕೆಲಸಗಳನ್ನು ವಿರೋಧಿಸಿದೆ.
ಇದೇ ವೇಳೆ ವಿಪ್ರೋ ಅಧ್ಯಕ್ಷ ರಿಷದ್ ಪ್ರೇಮ್ ಜಿ, ಮೂನ್ಲೈಟಿಂಗ್ ಬಗ್ಗೆ ತಮ್ಮ ಹೇಳಿಕೆಗಳಿಗಾಗಿ ಟೀಕೆಗಳನ್ನು ಎದುರಿಸಿದ್ದರೂ, ಅವರು ತಮ್ಮ ಹೇಳಿಕೆಗೆ ಸಂಪೂರ್ಣವಾಗಿ ಬದ್ಧರಾಗಿದ್ದಾರೆ ಎಂದು ಹೇಳಿದ್ದರೆ. ಅವರು ‘ಮೂನ್ಲೈಟಿಂಗ್’ ಅನ್ನು ನೇರ ವಂಚನೆ ಎಂದು ಕರೆದಿದ್ದು ಮತ್ತು ವಿಪ್ರೋದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಇತರ ಕಂಪನಿಗಳಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಪ್ರಾಮಾಣಿಕತೆಯ ಸಂಪೂರ್ಣ ಉಲ್ಲಂಘನೆಯಾಗಿದೆ ಅಂತ ತಿಳಿಸಿದ್ದಾರೆ.