ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ (ಇಂದಿನಿಂದ) ಡಿಸೆಂಬರ್ 19 ರಿಂದ 9 ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ. ಮೊದಲ ದಿನ ಅಧಿವೇಶನದಲ್ಲಿ ಆಗಲಿದ ಗಣ್ಯರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಿ ನಾಳೆಗೆ ಸದನವನ್ನು ಮುಂದೂಡಲಾಗುವುದು. ಇದಲ್ಲದೇ ಇಂದು ವಿಧಾನಸಭಾ ಹಾಲ್ನಲ್ಲಿ ಮತ್ತೆ ಸಾವರ್ಕರ್ ಸಮರ ಜೋರಾಗುವಂತಿದೆ. ವಿಧಾನಸಭೆಯಲ್ಲಿ ಗಾಂಧೀಜಿ, ನೆಹರೂ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಜೊತೆಗೆ ಸಾವರ್ಕರ್ ಫೋಟೋ ಅನಾವರಣ ಮಾಡಲಿದ್ದು, ಈ ಬಾರಿಯ ಅಧಿವೇಶನ ಸಾವರ್ಕರ್ ಫೋಟೋ ಬಗ್ಗೆಯೇ ಕಳೆದು ಹೋಗುವ ಸಾಧ್ಯತೆ ಕೂಡ ಹೆಚ್ಚಾಗಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಗಡಿ ವಿವಾದಕ್ಕೆ ರಾಜ್ಯ ಸರ್ಕಾರ ಕೂಡ ಈ ಭಾರಿಯ ಅಧಿವೇಶನದಲ್ಲಿ ಎಂಎಇಎಸ್ ಪುಂಡಾರಿಗೆ ಸರಿಯಾದ ಉತ್ತರ ನೀಡಲಿದ್ಯಾ ಎನ್ನುವುದು ಈಗಿನ ಪ್ರಶ್ನೆಯಾಗಿದೆ. ಇದಲ್ಲದೇ ರಾಜ್ಯ ಸರ್ಕಾರದ ವಿರುದ್ದ ಮುಗಿ ಬೀಳಲು ಪ್ರತಿಪಕ್ಷಗಳು ಸಜ್ಜಾಗಿದ್ದು, ಓಟರ್ ಐಡಿ ಪ್ರಕರಣವನ್ನು ಪ್ರಮುಖ ಅಸ್ತ್ರವಾಗಿ ಇಟ್ಟುಕೊಂಡು ರಾಜ್ಯ ಸರ್ಕಾರದ ಸಚಿವರ ವಿರುದ್ದ ಕಿಡಿಕಾರುವುದು ನಿಶ್ಚಿತ. ಇಲ್ಲದೇ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ,ಬೆಳಹಾನಿ ಸೇರಿದಂತೆ ಮೊದಲಾದ ಪ್ರಮುಖ ವಿಚಾರಗಳ ಕುರಿತು ಮುಗಿಬೀಳಲು ಸಿದ್ದವಾಗಿದೆ.
ಇನ್ನೂ ಅಧಿವೇಶನದ ಕಲಾಪಗಳಲ್ಲಿ ಸಚಿವರು ಮತ್ತು ಶಾಸಕರ ಹಾಜರಾತಿ ಕಡ್ಡಾಯ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದು, ಇದು ಸಾಧ್ಯನ ಅನ್ನೋಂದು ಪ್ರಶ್ನೆಯಾಗಿದೆ.ಇನ್ನೂ ST, SC, ಮೀಸಲಾತಿ ಮಸೂದೆ ಮಂಡನೆ ಸೇರಿದಂತೆ ಒಟ್ಟು ಆರು ಮಸೂದೆಗಳ ಮಂಡನೆಯಾಗಲಿದ್ದು, ಇವುಗಳಲ್ಲಿ 4 ಹೊಸ ಮಸೂದೆ ಮಂಡನೆಯಾಗಲಿದೆ. ಅಧಿವೇಶನದಲ್ಲಿ ನಾಲ್ಕು ಹೊಸ ವಿಧೇಯಕ ಮತ್ತು ಎರಡು ಈಗಾಗಲೇ ಮಂಡಿಸಿರುವ ವಿಧೇಯಕ ಸೇರಿದಂತೆ ಈವರೆಗೆ ಆರು ವಿಧೇಯಕಗಳು ಮಂಡನೆಯಾಗುವುದು ಖಚಿತವಾಗಿದೆ. ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಖಾಸಗಿ ವಿಧೇಯಕ ಮಂಡನೆಯಾಗುವ ಸಾಧ್ಯತೆಯೂ ಇದೆ.
ಅಧಿವೇಶನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಡಿ.30ರವರೆಗೆ ಸುವರ್ಣಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಹೇಳಿದ್ದಾರೆ.ನಗರದಲ್ಲಿ ಯಾವುದೇ ಪ್ರತಿಭಟನೆ, ಗುಂಪು ಕಟ್ಟಿಕೊಂಡು ಓಡಾಡಲು ನಿಷೇಧಿಸಲಾಗಿದೆ. 10 ದಿನಗಳ ಕಾಲ ನಡೆಯುವ ಚಳಿಗಾಲದ ಅಧಿವೇಶನಕ್ಕೆ ನಗರದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಶಾಸಕರು, ಪರಿಷತ್ ಸದಸ್ಯರು, ಅಧಿಕಾರಿಗಳು ಸೇರಿದಂತೆ ಅಧಿವೇಶನ ಸಂದರ್ಭದಲ್ಲಿ ಬೆಳಗಾವಿ ನಗರಕ್ಕೆ 10 ಸಾವಿರ ಮಂದಿ ಆಗಮಿಸಲಿದ್ದಾರೆ. ಆಧಿವೇಶನದಲ್ಲಿ ಮಹತ್ವ ವಿಷಯದ ಕುರಿತು ಚರ್ಚೆ ಮಾಡಲಾಗಿದೆ.