Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದಿನಾ ಬಳಸಿದ್ರೂ ‘ಪಾಸ್‌ವರ್ಡ್’ ಮರೆತುಹೋಗುತ್ತಾ?: ಪ್ರತಿದಿನ ಟೈಪ್ ಮಾಡಿದ್ರೂ ಮರೆವಿನ ಆಟ ಶುರುವಾಗಲು ಅಸಲಿ ಕಾರಣ ಇಲ್ಲಿದೆ

​ಮೆದುಳಿನ ಕಾರ್ಯಕ್ಷಮತೆಯ ಮೇಲೆ ‘ಮಾನಸಿಕ ಒತ್ತಡ’ದ ಭೀಕರ ಪರಿಣಾಮ: ಹಳೇ ನೆನಪುಗಳಿಗೆ ಹೊಸ ಮಾಹಿತಿ ಲಿಂಕ್ ಮಾಡುವ ಸಾಮರ್ಥ್ಯ ಕುಂಠಿತ: ವರದಿ

BIG NEWS: ‘ಖಾಸಗಿ ಶಾಲೆ’ಗಳ ಶುಲ್ಕ ಹೆಚ್ಚಳಕ್ಕೆ ‘ಸರ್ಕಾರದ ಮುಂಚಿತ ಅನುಮತಿ’ ಅಗತ್ಯವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಇಂದಿನಿಂದ ಬೆಳಗಾವಿಯಲ್ಲಿ `ಚಳಿಗಾಲದ ಅಧಿವೇಶನ’ : ಮಹತ್ವದ 15 ವಿಧೇಯಕಗಳ ಮಂಡನೆ.!
KARNATAKA

BIG NEWS : ಇಂದಿನಿಂದ ಬೆಳಗಾವಿಯಲ್ಲಿ `ಚಳಿಗಾಲದ ಅಧಿವೇಶನ’ : ಮಹತ್ವದ 15 ವಿಧೇಯಕಗಳ ಮಂಡನೆ.!

By kannadanewsnow57
suvarna soudha belagavi

ಬೆಳಗಾವಿ : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್​ 9 ರಿಂದ 20ರವರೆಗೆ ಚಳಿಗಾಲ ಅಧಿವೇಶನ ನಡೆಯಲಿದೆ. ಇಂದು ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದ್ದು, ಖಾಸಗಿ ವಿಧೇಯಕ ಸೇರಿದಂತೆ ಒಟ್ಟು 15 ವಿಧೇಯಕಗಳು ಮಂಡನೆಯಾಗಲಿವೆ.

ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಕುಲಾಧಿಪತಿ ಸ್ಥಾನಕ್ಕೆ ನೇಮಕಾತಿ ಅಧಿಕಾರ ರಾಜ್ಯಪಾಲರಿಂದ ಸಿಎಂಗೆ ನೀಡುವ ವಿಧೇಯಕ, ಗಣಿ ಇಲಾಖೆಯಲ್ಲಿ ಹೊಸ ತೆರಿಗೆ ಪ್ರಸ್ತಾಪ ಸೇರಿ ಹಲವು ವಿಧೇಯಕಗಳು, ತಿದ್ದುಪಡಿ ವಿಧೇಯಕಗಳು ಸೇರಿ ಒಟ್ಟು 15 ವಿಧೇಯಕಗಳನ್ನು ಮಂಡಿಸಲಾಗುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಗಳ(ತಿದ್ದುಪಡಿ) ವಿಧೇಯಕ, ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ(ತಿದ್ದುಪಡಿ) ವಿಧೇಯಕ, ಕರ್ನಾಟಕ ಪ್ರವಾಸೋದ್ಯಮ ರೋಪ್ ವೇಗಳ ವಿಧೇಯಕಗಳನ್ನು ಪರ್ಯಾಲೋಚನೆಗೆ ಮಂಡಿಸಲಾಗುವುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ತಿದ್ದುಪಡಿ) ಆದ್ಯಾದೇಶ 2024, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ಆದ್ಯಾದೇಶ 2024 ಗಳಿಗೆ ಒಪ್ಪಿಗೆ ಪಡೆಯಲಾಗುವುದು.

ಇನ್ನು ದರ್ಶನ್ ಪುಟ್ಟಣ್ಣಯ್ಯ ಕರ್ನಾಟಕದಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಖಾಸಗಿ ವಿಧೇಯಕ ಮಂಡಿಸುವರು. ಎಂ.ವೈ. ಪಾಟೀಲ ಅವರಿಂದ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಹೆಚ್.ಕೆ. ಸುರೇಶ್ ಅವರಿಂದ ಬೇಲೂರು ಹಳೇಬೀಡು ವಿಶ್ವ ಪರಂಪರೆಯ ಪ್ರದೇಶ ನಿರ್ವಹಣೆ ಪ್ರಾಧಿಕಾರ ವಿಧೇಯಕ ಮಂಡಿಸಲಾಗುವುದು.

ಈ ಬಾರಿಯ ಚಳಿಗಾಲ ಅಧಿವೇಶನ ಬಿಸಿ ಬಿಸಿ ಚರ್ಚೆ, ವಾಕ್ಸಮರಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದಿರುವ ಮುಡಾ ಹಗರಣದ ಆರೋಪ, ವಕ್ಫ್ ಆಸ್ತಿ ವಿವಾದ ಚರ್ಚೆಗೆ ಪ್ರಮುಖ ಬಿಂದುಗಳಾಗಬಹದು. ವಕ್ಫ್ ವಿವಾದ, ಪಡಿತರ ಚೀಟಿ ಗೊಂದಲ, ಮುಡಾ ಹಗರಣ ಸೇರಿ ಸಾಲು ಸಾಲು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳು ವಿಪಕ್ಷಗಳು ಸಜ್ಜಾಗಿವೆ.

ಈ ಎರಡೂ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಚಾಟಿ ಬೀಸಲು ವಿಪಕ್ಷಗಳು ತಯಾರಿ ನಡೆಸಿವೆ. ಹಾಗೇ ಉತ್ತರ ಕರ್ನಾಟಕದ ಜಲ್ವಂತರ ಸಮಸ್ಯೆಗಳಾದ ಮೂಲಭೂತ ಸೌಕರ್ಯದ ವಿಚಾರಕ್ಕೆ ಈ ಬಾರಿಯಾದರೂ ಪರಿಹಾರ ಸಿಗುತ್ತಾ ಕಾದು ನೋಡಬೇಕಿದೆ.

BIG NEWS : ``Winter Session'' in Belgaum from today: Presentation of 15 important bills.! BIG NEWS : ಇಂದಿನಿಂದ ಬೆಳಗಾವಿಯಲ್ಲಿ `ಚಳಿಗಾಲದ ಅಧಿವೇಶನ’ : ಮಹತ್ವದ 15 ವಿಧೇಯಕಗಳ ಮಂಡನೆ.!
Share. Facebook Twitter LinkedIn WhatsApp Email

Related Posts

BREAKING: ಬೆಂಗಳೂರಲ್ಲಿ ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಕಾನ್ಸ್‌ಟೇಬಲ್ ಪತ್ನಿ ನೇಣಿಗೆ ಶರಣು

1 Min Read

ಚಾಲಕನ ಮಾನವೀಯತೆಗೆ ಹೈಕೋರ್ಟ್ ಶ್ಲಾಘನೆ: ಅಪಘಾತದ ನಂತ್ರ ಗಾಯಾಳು ಆಸ್ಪತ್ರೆಗೆ ಸೇರಿಸಿದ್ದಕ್ಕೆ ಜೈಲು ಶಿಕ್ಷೆ ಕಡಿತ

2 Mins Read

ಕಾರ್ಮಿಕರ ಕನಿಷ್ಠ ವೇತನ ಶೇ.60ರಷ್ಟು ಏರಿಕೆ: ಸಚಿವ ಸಂತೋಷ್ ಲಾಡ್

2 Mins Read
Recent News

ದಿನಾ ಬಳಸಿದ್ರೂ ‘ಪಾಸ್‌ವರ್ಡ್’ ಮರೆತುಹೋಗುತ್ತಾ?: ಪ್ರತಿದಿನ ಟೈಪ್ ಮಾಡಿದ್ರೂ ಮರೆವಿನ ಆಟ ಶುರುವಾಗಲು ಅಸಲಿ ಕಾರಣ ಇಲ್ಲಿದೆ

​ಮೆದುಳಿನ ಕಾರ್ಯಕ್ಷಮತೆಯ ಮೇಲೆ ‘ಮಾನಸಿಕ ಒತ್ತಡ’ದ ಭೀಕರ ಪರಿಣಾಮ: ಹಳೇ ನೆನಪುಗಳಿಗೆ ಹೊಸ ಮಾಹಿತಿ ಲಿಂಕ್ ಮಾಡುವ ಸಾಮರ್ಥ್ಯ ಕುಂಠಿತ: ವರದಿ

BIG NEWS: ‘ಖಾಸಗಿ ಶಾಲೆ’ಗಳ ಶುಲ್ಕ ಹೆಚ್ಚಳಕ್ಕೆ ‘ಸರ್ಕಾರದ ಮುಂಚಿತ ಅನುಮತಿ’ ಅಗತ್ಯವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

​ಟ್ವಿಶಾ ಶರ್ಮಾ ಪ್ರಕರಣ : ದೆಹಲಿ ‘ಏಮ್ಸ್’ ವೈದ್ಯರ ತಂಡದಿಂದ ಎರಡನೇ ಮರಣೋತ್ತರ ಪರೀಕ್ಷೆ; ಉನ್ನತ ಮಟ್ಟದ ತನಿಖೆಗೆ ಆದೇಶ!

State News
KARNATAKA

BREAKING: ಬೆಂಗಳೂರಲ್ಲಿ ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಕಾನ್ಸ್‌ಟೇಬಲ್ ಪತ್ನಿ ನೇಣಿಗೆ ಶರಣು

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ನಗರದಲ್ಲಿ ಮತ್ತೊಂದು ವಿಷಾದನೀಯ ಘಟನೆ ಸಂಭವಿಸಿದ್ದು, ಕ್ಷುಲ್ಲಕ ಕಾರಣಕ್ಕಾಗಿ ಪೊಲೀಸ್ ಕಾನ್ಸ್‌ಟೇಬಲ್ ಅವರ ಪತ್ನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ…

ಚಾಲಕನ ಮಾನವೀಯತೆಗೆ ಹೈಕೋರ್ಟ್ ಶ್ಲಾಘನೆ: ಅಪಘಾತದ ನಂತ್ರ ಗಾಯಾಳು ಆಸ್ಪತ್ರೆಗೆ ಸೇರಿಸಿದ್ದಕ್ಕೆ ಜೈಲು ಶಿಕ್ಷೆ ಕಡಿತ

ಕಾರ್ಮಿಕರ ಕನಿಷ್ಠ ವೇತನ ಶೇ.60ರಷ್ಟು ಏರಿಕೆ: ಸಚಿವ ಸಂತೋಷ್ ಲಾಡ್

BIG Alert: ಫ್ರಿಡ್ಜ್ ಕ್ಲೀನ್ ಮಾಡೋ ಮುನ್ನ ಎಚ್ಚರ! ದೊಡ್ಡಬಳ್ಳಾಪುರದಲ್ಲಿ ವಿದ್ಯುತ್ ಪ್ರವಹಿಸಿ ಮಹಿಳೆ ಸಾವು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.