Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಬೆಳಗಾವಿಯಲ್ಲಿ ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಆತ್ಮಹತ್ಯೆ : ಪತಿ ಅರೆಸ್ಟ್!

20/04/2026 11:40 AM

BREAKING : ಕಾವೇರಿ ನದಿಯಲ್ಲಿ ಮುಳುಗಿ 6 ಜನ ಸಾವು ಕೇಸ್ : ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

20/04/2026 11:38 AM

BIG UPDATE : ಜಮ್ಮು ಮತ್ತು ಕಾಶ್ಮೀರದಲ್ಲಿ ಭೀಕರ ರಸ್ತೆ ಅಪಘಾತ: ಬಸ್ ಪಲ್ಟಿಯಾಗಿ 15 ಸಾವು, 20 ಮಂದಿಗೆ ಗಾಯ.!

20/04/2026 11:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕರ್ನಾಟಕ ವಿಧಾನ ಮಂಡಲದಲ್ಲಿ `ಶಾಸಕರು-MLC’ಗಳು ಪಾಲಿಸಬೇಕಾದ ನಿಯಮಗಳೇನು? ಇಲ್ಲಿದೆ ಮಾಹಿತಿ
KARNATAKA

BIG NEWS : ಕರ್ನಾಟಕ ವಿಧಾನ ಮಂಡಲದಲ್ಲಿ `ಶಾಸಕರು-MLC’ಗಳು ಪಾಲಿಸಬೇಕಾದ ನಿಯಮಗಳೇನು? ಇಲ್ಲಿದೆ ಮಾಹಿತಿ

By kannadanewsnow5727/01/2026 8:08 AM

ಬೆಂಗಳೂರು : ಕರ್ನಾಟಕ ವಿಧಾನ ಮಂಡಲದಲ್ಲಿ ಶಾಸಕರು ಹಾಗೂ ಎಂಎಲ್ ಸಿ ಗಳು ಪಾಲಿಸಬೇಕಾದ ನಿಯಮಗಳ ಕುರಿತು ಇಲ್ಲಿದೆ ಮಾಹಿತಿ

ಸದಸ್ಯರು ಪಾಲಿಸಬೇಕಾದ ನಿಯಮಗಳು

324. ಸದನದಲ್ಲಿ ಉಪಸ್ಥಿತರಿದ್ದಾಗ ಸದಸ್ಯರು ಪಾಲಿಸಬೇಕಾದ ನಿಯಮಗಳು: ಸಭೆಯ ಉಪವೇಶನದಲ್ಲಿ ಸದಸ್ಯನು ;

(1) ಸದನದ ಕಾರ್ಯಕಲಾಪಕ್ಕೆ ಸಂಬಂಧಿಸಿರುವುದನ್ನು ಹೊರತು, ಯಾವುದೇ ಪುಸ್ತಕ, ವಾರ್ತಾ ಪತ್ರಿಕೆ ಅಥವಾ ಕಾಗದವನ್ನು ಓದತಕ್ಕುದಲ್ಲ.

(2) ಯಾವನೇ ಸದಸ್ಯನು ಮಾತನಾಡುತ್ತಿರುವಾಗ ಅವನಿಗೆ ದುರ್ವಚನೆಗಳಿಂದ ಅಥವಾ ಏರುಸ್ವರದಿಂದ ಅಥವಾ ಇತರ ಯಾವುದೇ ಕ್ರಮಬಾಹಿರ ರೀತಿಯಲ್ಲಿ ತೊಂದರೆಯುಂಟು ಮಾಡತಕ್ಕುದಲ್ಲ.

(3) ಸದನವನ್ನು ಪ್ರವೇಶಿಸುವಾಗ ಅಥವಾ ಅಲ್ಲಿಂದ ನಿರ್ಗಮಿಸುವಾಗ ಮತ್ತು ತಮ್ಮ ಜಾಗದಲ್ಲಿ ಕುಳಿತುಕೊಳ್ಳುವಾಗ ಅಥವಾ ಜಾಗವನ್ನು ಬಿಡುವಾಗ ಸಭಾಧ್ಯಕ್ಷರಿಗೆ ವಂದಿಸತಕ್ಕದ್ದು.

(4) ಸಭಾಧ್ಯಕ್ಷರ ಮತ್ತು ಮಾತನಾಡುತ್ತಿರುವ ಸದಸ್ಯರ ಮಧ್ಯೆ ಹಾದು ಹೋಗತಕ್ಕುದಲ್ಲ ;

(5) ಸಭಾಧ್ಯಕ್ಷರು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವಾಗ ಸದನವನ್ನು ತ್ಯಜಿಸತಕ್ಕುದಲ್ಲ.

(6) ಯಾವಾಗಲೂ ಸಭಾಧ್ಯಕ್ಷರನ್ನು ಸಂಬೋಧಿಸಿ ಮಾತನಾಡತಕ್ಕುದು.

(7) ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ತನ್ನ ಸ್ಥಾನದಲ್ಲಿರತಕ್ಕುದು.

(8) ಸದನದಲ್ಲಿ ಮಾತನಾಡದೇ ಇರುವ ಸಮಯದಲ್ಲಿ ನಿಶ್ಯಬ್ದವಾಗಿರತಕ್ಕುದು.

(9) ಸಭೆಯ ಕಾರ್ಯವಿಧಿಗೆ ತಡೆ ಅಥವಾ ವಿಘ್ನವನ್ನು ತರತಕ್ಕುದಲ್ಲ ಮತ್ತು ಸದನದಲ್ಲಿ ಭಾಷಣವಾಗುತ್ತಿರುವಾಗ ವೀಕ್ಷಕ ವಿವರಣೆಯನ್ನು ಮಾಡತಕ್ಕುದಲ್ಲ.

(10) ಯಾವುದೇ ಉಪ್ಪರಿಗೆಯ ಮೊಗಸಾಲೆಯನ್ನು (ಗ್ಯಾಲರಿಯನ್ನು) ಒಬ್ಬ ಅಪರಿಚಿತನು ಪ್ರವೇಶಿಸಿದಾಗ ಚಪ್ಪಾಳೆ ಹೊಡೆಯತಕ್ಕುದಲ್ಲ.
325. ಸಭಾಧ್ಯಕ್ಷರಿಂದ ಕರೆಬಂದಾಗ ಸದಸ್ಯರು ಮಾತನಾಡುವುದು : ಒಬ್ಬ ಸದಸ್ಯನು ಮಾತನಾಡಲು ಎದ್ದು ನಿಂತರೆ, ಸಭಾಧ್ಯಕ್ಷರು ಅವರ ಹೆಸರನ್ನು ಕರೆಯತಕ್ಕುದು. ಒಬ್ಬರಿಗಿಂತ ಹೆಚ್ಚು ಸದಸ್ಯರು ಏಕಕಾಲದಲ್ಲಿ ಎದ್ದು ನಿಂತರೆ, ಸಭಾಧ್ಯಕ್ಷರು ಹೆಸರು ಕರೆದಿರುವ ಸದಸ್ಯರಿಗೆ ಮಾತನಾಡಲು ಹಕ್ಕಿರುವುದು.

326. ಸದನವನ್ನು ಉದ್ದೇಶಿಸಿ ಮಾತನಾಡುವ ರೀತಿ : ಸದನದಲ್ಲಿ ಯಾವುದೇ ವಿಷಯದ ಬಗ್ಗೆ ಒಬ್ಬ ಸದಸ್ಯನು ಯಾವುದೇ ಅಭಿ ಪ್ರಾಯವನ್ನು ವ್ಯಕ್ತಗೊಳಿಸಲಿಚ್ಛಿಸಿದರೆ, ತನ್ನ ಸ್ಥಳದಿಂದಲೇ ಎದ್ದುನಿಂತು ಸಭಾಧ್ಯಕ್ಷರನ್ನು ಸಂಬೋಧಿಸಿ ಮಾತನಾಡತಕ್ಕುದು, ಪರಂತು, ಕಾಯಿಲೆ ಅಥವಾ ದುರ್ಬಲತೆಯಿಂದ ನಿಶ್ಯಕ್ತರಾಗಿರುವವರನ್ನು ಕುಳಿತುಕೊಂಡೆ ಮಾತನಾಡಲು ಅನುಮತಿಸಬಹುದು.

327. ಮಾತನಾಡುವಾಗ ಪಾಲಿಸಬೇಕಾದ ನಿಯಮಗಳು : ಸದಸ್ಯರು ಮಾತನಾಡುವಾಗ

(1) ನ್ಯಾಯಾಲಯದಲ್ಲಿ ಇತ್ಯರ್ಥದಲ್ಲಿದ್ದು ತೀರ್ಪು ನೀಡಿರದ ಯಾವುದೇ ಸಂಗತಿಯನ್ನು ಕುರಿತು ಮಾತನಾಡತಕ್ಕುದಲ್ಲ.

(2) ಸದಸ್ಯರೊಬ್ಬರ ಮೇಲೆ ವೈಯಕ್ತಿಕ ದೋಷಾರೋಪಣೆ ಮಾಡತಕ್ಕುದಲ್ಲ.

(3) ಸಂಸತ್ತು ಅಥವಾ ಯಾವುದೇ ರಾಜ್ಯ ವಿಧಾನಮಂಡಲದ ವ್ಯವಹರಣೆಗಳು ಮತ್ತು ನಡವಳಿಕೆಗಳನ್ನು ಕುರಿತು ಹೀನಾಯವಾಗಿ ಮಾತನಾಡತಕ್ಕುದಲ್ಲ.

(4) ಸದನದ ಯಾವುದೇ ತೀರ್ಮಾನವನ್ನು ಕುರಿತು ಅದನ್ನು ರದ್ದುಪಡಿಸಲು ಪ್ರಸ್ತಾವ ಮಂಡಿಸುವಾಗ ಹೊರತು ಇನ್ನಾವುದೇ ಆರೋಪಣೆ ಮಾಡತಕ್ಕುದಲ್ಲ.

(5) ಸರಿಯಾದ ವಾಕ್ಯಗಳಲ್ಲಿ ರಚಿಸಲಾದ ಆಧಾರಸಹಿತ ಪ್ರಸ್ತಾವದ ಮೇಲೆ ಚರ್ಚೆ ನಡೆಸಿದ್ದ ಹೊರತು ಉನ್ನತಾಧಿಕಾರದಲ್ಲಿರುವ ವ್ಯಕ್ತಿಗಳ ನಡವಳಿಕೆ ಕುರಿತು ಆರೋಪಿಸತಕ್ಕುದಲ್ಲ.

BIG NEWS: What are the rules that MLAs-MLCs have to follow in the Karnataka Legislative Assembly? Here is the information
Share. Facebook Twitter LinkedIn WhatsApp Email

Related Posts

BIG NEWS : ಬೆಳಗಾವಿಯಲ್ಲಿ ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಆತ್ಮಹತ್ಯೆ : ಪತಿ ಅರೆಸ್ಟ್!

20/04/2026 11:40 AM1 Min Read

BREAKING : ಕಾವೇರಿ ನದಿಯಲ್ಲಿ ಮುಳುಗಿ 6 ಜನ ಸಾವು ಕೇಸ್ : ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

20/04/2026 11:38 AM1 Min Read

GOOD NEWS : ರಾಜ್ಯದ ಪೋಷಕರು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `LKG-PUC’ ವರೆಗೆ ಉಚಿತ ನೋಟ್ ಬುಕ್ ವಿತರಣೆ

20/04/2026 11:08 AM1 Min Read
Recent News

BIG NEWS : ಬೆಳಗಾವಿಯಲ್ಲಿ ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಆತ್ಮಹತ್ಯೆ : ಪತಿ ಅರೆಸ್ಟ್!

20/04/2026 11:40 AM

BREAKING : ಕಾವೇರಿ ನದಿಯಲ್ಲಿ ಮುಳುಗಿ 6 ಜನ ಸಾವು ಕೇಸ್ : ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

20/04/2026 11:38 AM

BIG UPDATE : ಜಮ್ಮು ಮತ್ತು ಕಾಶ್ಮೀರದಲ್ಲಿ ಭೀಕರ ರಸ್ತೆ ಅಪಘಾತ: ಬಸ್ ಪಲ್ಟಿಯಾಗಿ 15 ಸಾವು, 20 ಮಂದಿಗೆ ಗಾಯ.!

20/04/2026 11:17 AM

GOOD NEWS : ರಾಜ್ಯದ ಪೋಷಕರು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `LKG-PUC’ ವರೆಗೆ ಉಚಿತ ನೋಟ್ ಬುಕ್ ವಿತರಣೆ

20/04/2026 11:08 AM
State News
KARNATAKA

BIG NEWS : ಬೆಳಗಾವಿಯಲ್ಲಿ ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಆತ್ಮಹತ್ಯೆ : ಪತಿ ಅರೆಸ್ಟ್!

By kannadanewsnow0520/04/2026 11:40 AM KARNATAKA 1 Min Read

ಬೆಳಗಾವಿ : ಬೆಳಗಾವಿಯಲ್ಲಿ ಘೋರ ಘಟನೆ ನಡೆದಿದ್ದು, ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಜ್ಯೋತಿ…

BREAKING : ಕಾವೇರಿ ನದಿಯಲ್ಲಿ ಮುಳುಗಿ 6 ಜನ ಸಾವು ಕೇಸ್ : ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

20/04/2026 11:38 AM

GOOD NEWS : ರಾಜ್ಯದ ಪೋಷಕರು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `LKG-PUC’ ವರೆಗೆ ಉಚಿತ ನೋಟ್ ಬುಕ್ ವಿತರಣೆ

20/04/2026 11:08 AM

BIG NEWS : ಮಂಡ್ಯದ ಕಾರಾಗೃಹದಲ್ಲಿ ಗಾಂಜಾ, ಮೊಬೈಲ್ ಪತ್ತೆ : ಕೈದಿಗಳ ಕಳ್ಳಾಟ ಕಂಡು ಜೈಲಾಧಿಕಾರಿಗಳು ಶಾಕ್!

20/04/2026 10:43 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.