ಬೆಂಗಳೂರು : ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಮತ್ತು ನೌಕರರ ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಪೌರಾಯುಕ್ತರ/ಮುಖ್ಯಾಧಿಕಾರಿಗಳ ಕರ್ತವ್ಯಗಳು ಮತ್ತು ಅಧಿಕಾರ ಹಾಗೂ ಜವಾಬ್ದಾರಿಗಳು:
ಕರ್ನಾಟಕ ಪೌರಸಭೆಗಳ ಅಧಿಕಾರ ಪ್ರತ್ಯಾಯೋಜನೆ. ಮತ್ತು ಅಧಿಕಾರಿಗಳ ಮತ್ತು ನೌಕರರುಗಳ ಕರ್ತವ್ಯಗಳ ನಿಯಮಾವಳಿ 1973ರ ನಿಯಮ 7. 8. 9 ಮತ್ತು 10 ರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಕರ್ನಾಟಕ ಪೌರಸಭೆಗಳ ಅಧಿನಿಯಮ 19640 50 330, 332, 338, 339, 340, 341, 342, 344, 345, 346, 347, 2 348 ಅವುಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ತರುವಾಯ ಸರ್ಕಾರವು ಸುತ್ತೊಲೆ ಸಂಖ್ಯೆ HUD.15.TMD 95 ದಿನಾಂಕ 18-2-1995ರ ಮೂಲಕ ಈ ಕುರಿತು ಸ್ಪಷ್ಟವಾಗಿ ತಿಳಿಸಿದೆ.
1. ಕಛೇರಿಯ ಸಮಸ್ತ ಪ್ರಮುಖ ದಾಖಲೆ ಪತ್ರಗಳನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಳ್ಳುವುದು
2. ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಯವರ ಮೇಲ್ವಿಚಾರಣೆ ಮಾಡುವುದು.
3. ದೈನಂದಿನ ಲೆಕ್ಕ ಪತ್ರಗಳ ದಾಖಲೆಗಳ ನಿರ್ವಹಣೆ ಮೇಲ್ವಿಚಾರಣೆ ಮಾಡುವುದು.
4. ನಿಯಮಾನುಸಾರ ಕಛೇರಿಗೆ ಸಂದಾಯವಾಗಬೇಕಾದ ಕಂದಾಯ ಶುಲ್ಕ. ದಂಡ ಮತ್ತು ಇತರೆ ವಿವಿಧ ರೂಪದ ಆಧಾಯ ಬಾಬಿನ ಹಣ ವಸೂಲಿ ಮಾಡುವ ಮತ್ತು ಅದನ್ನು ಮುನಿಸಿಪಲ್ ನಿಧಿಗೆ ಜಮಾ ಮಾಡುವ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡುವುದು.
5. ಕಾನೂನಿನ್ವಯ ಮತ್ತು ಸಂಭಂದಿಸಿದ ನಿಯಮಗಳು ಮತ್ತು ಉಪನಿಯಮಗಳನ್ವಯ ಎಲ್ಲಾ ವಿವಿಧ ಪರವಾನಗಿಗಳ ಅನುಮತಿ ಪತ್ರಗಳನ್ನು ಸಹಿಮಾಡುವ ಮೂಲಕ ನೀಡುವುದು ಹಾಗೂ ಕಾನೂನು, ನಿಯಮಗಳ ಮತ್ತು ಉಪ ನಿಯಮಗಳನ್ವಯ ಅಂತಹ ಪರವಾನಗಿ ಅನುಮತಿ ಪತ್ರಗಳನ್ನು ತಡೆಹಿಡಿಯುವ, ಹಿಂಪಡೆಯುವ, ರದ್ದು ಮಾಡುವ ಸಂಬಂಧಪಟ್ಟ ಪತ್ರಗಳನ್ನು ಸ್ವಯಂ ತಮ್ಮ ಸಹಿಯ ಮೂಲಕವೇ ವ್ಯವಹರಿಸುವುದು.
6. ಸಂಬಂಧಪಟ್ಟ ನೌಕರರು ಭದ್ರತೆಗಳನ್ನು (Securities) ನಿಯಮಾನುಸಾರ ನೀಡಿರುವರೆ ನವೀಕರಿಸಿದ್ದಾರೆಯೆ ಎಂಬುದರ ಬಗ್ಗೆ ಗಮನ ಹರಿಸುವುದು ಹಾಗೂ ಭದ್ರತೆಗಳ ದಾಖಲೆ ಮತ್ತು ಅದರ ವಹಿಯನ್ನು ನಿರ್ವಹಣೆ ಮಾಡಿಸುವುದು.
7. ಕಛೇರಿಯಿಂದ ಕೈಗೊಳ್ಳುವ ಎಲ್ಲಾ ರೀತಿಯ ಕೆಲಸ ಒಪ್ಪಂದಗಳನ್ನು ಸಮರ್ಪಕವಾಗಿ ನಿರ್ವಹಿಸುಲಾಗುತ್ತಿದೆಯೆ ಮತ್ತು ಸಂಭಂದಿಸಿದ ಗುತ್ತಿಗೆದಾರರುಗಳ ಅಂತಹ ಭದ್ರತಾ ಠೇವಣಿಯನ್ನು ನೀಡಿದ್ದಾರೆಯೆ ಎಂಬುದನ್ನು ಗಮನಿಸುವುದು.
8. ಪ್ರತಿಯೊಂದು ಬಾಬ್ಬಿನ ಎಲ್ಲಾ ಕೆಲಸಗಳಿಗೆ ಸಂಭಂದಿಸಿದಂತೆ ಆಯವ್ಯಯಗಳ ಲೆಕ್ಕಾಚಾರಕ್ಕೆ ಜವಬ್ದಾರರಾಗಿರುವುದು.
9. ಒಳಚರಂಡಿ, ಆರೋಗ್ಯ ನಿರ್ವಹಣೆ ಪಟ್ಟಣ ಯೋಜನೆ, ನೀರು ಸರಬರಾಜು ವ್ಯವಸ್ಥೆ ಮತ್ತು ಪೌರಕಾರ್ಮಿಕರ ಕಾರ್ಯನಿರ್ವಹಣೆ ಮೇಲ್ವಿಚಾರಣೆ ಮಾಡುವುದು.
10. ಅಧೀನ ಸಿಬ್ಬಂದಿ ವರ್ಗದವರು ಮತ್ತು ಗುತ್ತಿಗೆದಾರರುಗಳು ಕಾರ್ಯನಿರ್ವಹಣೆಯಲ್ಲಿ ಎಸಗಬಹುದಾದ ಎಲ್ಲಾ ರೀತಿಯ ಲೋಪದೋಷಗಳ ಬಗ್ಗೆ ಮತ್ತು ಕಾನೂನು ಉಲ್ಲಂಘನೆ ಹಾಗೂ ಅಧಿನಿಯಮ ನಿಯಮಾವಳಿಗಳ ಉಪಕಾನೂನುಗಳ ಅವಗಣನೆಗೆ ಮತ್ತು ಅವಿಧೇಯತೆಯ ಪ್ರಸಂಗಗಳನ್ನು ವರದಿಮಾಡುವುದು.
11. ಲೆಕ್ಕ ಪರಿಶೋಧನಾ ವರದಿಯಲ್ಲಿ ತಿಳಿಸಲಾದ ಲೋಪ ದೋಷಗಳನ್ನು ಸರಿಪಡಿಸಲು ಎಲ್ಲಾ ವಿಧದ ಮಾರ್ಗೋಪಾಯಗಳನ್ನು ಅನುಸರಿಸುವುದು ಮತ್ತು ಕಛೇರಿಯ ಹಣ, ಆಸ್ತಿಯನ್ನು ಕಳ್ಳತನ ಮುಂತಾದ ಆಕ್ರಮಗಳ ಬಗ್ಗೆ ವರದಿಮಾಡುವುದು.
12, ಕಛೇರಿಯ ಸುಪರ್ದಿನಲ್ಲಿರುವ ಎಲ್ಲಾ ಆಸ್ತಿಗಳನ್ನು ಅವಧಿಯಾನುಸಾರ ಮೇಲ್ವಿಚಾರಣೆ ನಡೆಸುವುದು ಹಾಗೂ ಆಯಾ ಸಂದರ್ಭಗಳಲ್ಲಿ ಬೇಕಾಗುವ ದುರಸ್ತಿ ಕೆಲಸ, ಅಭಿವೃದ್ಧಿ ಕೆಲಸ ಮತ್ತು ಇತರ ಆಗತ್ಯ ಕಾರ್ಯ ವಿಧಾನಗಳ ಬಗ್ಗೆ ಕೌನ್ಸಿಲ್ ಅಧಿಕಾರ ವ್ಯಾಪ್ತಿಯಲ್ಲಿ ಮಾಡಿಸುವುದು, ವ್ಯಾಪ್ತಿ ಮೀರಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರುವುದು ಅದಲ್ಲದೆ ಅಧಿನಿಯಮದ ನಿಯಮಾವಳಿಗಳು ಉಪಕಾನೂನು ಉಲ್ಲಂಘನೆ ಹಾಗೂ ಅಕ್ರಮಗಳ ಕುರಿತು ತಮ್ಮ ಅಧಿಕಾರ ವ್ಯಾಪ್ತಿ ಮೀರಿದಲ್ಲಿ ವರದಿಮಾಡುವುದು.
13. ಕೌನ್ಸಿಲ್ ಮತ್ತು ಉಪಸಮಿತಿಗಳ ಸಭೆಗೆ ಹಾಜರಾಗಿ ಸಹಕರಿಸುವುದು
14. ಎಲ್ಲಾ ರೀತಿಯ ಪತ್ರವ್ಯವಹಾರಗಳ ದಾಖಲೆಗೆ ವ್ಯವಸ್ಥೆ ಮಾಡುವುದು.
15. ನಿಯಮಾನುಸಾರ ದಾಖಲೆಗಳ ಪ್ರತಿಯನ್ನು ನೀಡುವುದು
16. ಸಭಾನಡುವಳಿ ಮತ್ತು ಉಪಸಮಿತಿಗಳ ನಡಾವಳಿ ಪುಸ್ತಕಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದು.
17. ಎಲ್ಲಾ ರೀತಿಯ ಕಾಲಾನುಕಾಲದ ದಾಖಲೆಗಳನ್ನು ಸಿದ್ಧಪಡಿಸುವುದು. ಅವುಗಳ ಖಚಿತತೆಯ ಬಗ್ಗೆ ಅಂಗೀಕಾರ ನೀಡುವುದು ಮತ್ತು ಎಲ್ಲಾ ದಾಖಲೆಗಳನ್ನು ಸಕಾಲಿಕವಾಗಿರುವಂತೆ ನೋಡಿಕೊಳ್ಳುವುದು.
18. ಕಛೇರಿಗೆ ಸಂಬಂಧಿಸಿದ ಆಸ್ತಿಗಳನ್ನು ಸುಸ್ಥಿತಿಯಲ್ಲಿರಿಸಿ ಕೊಳ್ಳುವುದು
19. ಬಾಹ್ಯಕಾರ್ಯದ ಅಧಿಕಾರಿಗಳ ಸಿಬ್ಬಂದಿಯ ಮಾಸಿಕ ದಿನಚರಿ ಪಡೆದು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡುವುದು.
20. ಪ್ರತಿ ಮಾಹೆ ತಪ್ಪದೆ ತನ್ನ ಮಾಸಿಕ ದಿನಚರಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವುದು.
21. ಕನಿಷ್ಟ ತಿಂಗಳಿಗೊಮ್ಮೆ ಸಿಬ್ಬಂಧಿವರ್ಗದವರ ಮಾಸಿಕ ಸಭೆ ನಡೆಸುವುದು.
22. ಅಧೀನ ಸಿಬ್ಬಂದಿಯ ಮೇಜು ತಪಾಸಣೆ ಕಾರ್ಯ ಮಾಡುವುದು.
23. ಆಗ್ಗಿಂದಾಗೆ ಉದ್ದಿಮೆ ಪರವಾನಗಿಗಳ ತನಿಖೆ ಮಾಡುವುದು.
24. ಮಾರುಕಟ್ಟೆ, ವಾಹನ ನಿಲ್ದಾಣ ಪ್ರದೇಶ, ಕಸಾಯಿಖಾನೆ, ಸಂತೆ ಮೈದಾನ, ಆಟದ ಮೈದಾನ, ಸಮುದಾಯ ಭವನಗಳಲ್ಲಿನ ನೈರ್ಮಲ್ಯ ಮತ್ತು ಶುಚಿತ್ವದ ಬಗ್ಗೆ ಪರಿಶಿಲಿಸುವುದು.
25. ನಿಗಧಿತ ಅವಧಿಯಲ್ಲಿ ವಾರ್ಷಿಕ ಬಾಬುಗಳ ಹರಾಜು ಮೂಲಕ ವಿಲೇಪಡಿಸುವ ಕಾರ್ಯ ನಿರ್ವಹಣೆ ಬಗ್ಗೆ ಆದ್ಯತೆ ನೀಡುವುದು.
26. ನಿಯತಕಾಲಿಕ ವರದಿಗಳನ್ನು ನಿಗದಿತ ಅವಧಿಯೊಳಗೆ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸುವುದು.
27. ಮೇಲಾಧಿಕಾರಿಗಳ ಕಛೇರಿಯಲ್ಲಿ ನಡೆಯುವ ಸಭೆಗೆ ಹಾಜರಾಗಲು ಸೂಚನೆ ಬಂದಲ್ಲಿ ವಿಶಿಷ್ಟ ಮಾಹಿತಿ ಮತ್ತು ಅಂಕಿ ಅಂಶಗಳೊಂದಿಗೆ ಹಾಜರಾಗುವುದು.
28. ಆಗಿಂದಾಗ್ಗೆ ಸಂಬಂಧಿಸಿದ ಶಾಖಾ ಮುಖ್ಯಸ್ಥರೊಂದಿಗೆ ನೈರ್ಮಲ್ಯ, ನೀರು ಸರಬರಾಜು, ಬೀದಿ ದೀಪದ ವ್ಯವಸ್ಥೆ ಕಾಮಗಾರಿ ಪ್ರಗತಿಯಲ್ಲಿರುವಾಗ ತಪಾಸಣಾ ಕಾರ್ಯಮಾಡುವುದು.
29. ಕೇಂದ್ರ ಮತ್ತು ರಾಜ್ಯ ಪುರಸ್ಕೃತ ಯೋಜನೆಗಳ ಅನುಷ್ಟಾನ ಅವುಗಳಡಿಯಲ್ಲಿ ಬಿಡುಗಡೆಯಾದ ಅನುಧಾನದ ವಿನಿಯೋಗದ ಬಗ್ಗೆ ನಿಯಮಾನುಸಾರ ನಿಗದಿತ ಅವಧಿಯಲ್ಲಿ ಕ್ರಮ ಪೂರ್ಣಗೊಳಿಸುವುದು.
30. ಮಾಹಿತಿ ಹಕ್ಕು ಮತ್ತು ಸಕಾಲ ನಿಯಮದಡಿಯಲ್ಲಿ ಸ್ವೀಕೃತಿಯಾದ ಅರ್ಜಿಗಳ ವಿಲೇವಾರಿ ಬಗ್ಗೆ ಪರಿಶೀಲನೆ ಆಗ್ಗಿಂದಾಗ್ಗೆ ಮಾಡುವುದು.
31. (ಆ) ಘನತ್ಯಾಜ್ಯ ನಿರ್ವಹಣೆ ವಿಲೇವಾರಿಯಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು, ನಿವಾಸಿ ಕಲ್ಯಾಣ ಸಂಘಗಳು. ಸ್ವಸಹಾಯ ಸಂಘಗಳನ್ನು ಸಾರ್ವಜನಿಕರನ್ನು ತೊಡಗಿಸುವ ಕಾರ್ಯ ಸಮುದಾಯ ಆಧಾರಿತ ಸಂಸ್ಥೆ ರಾಜೀವ್ ಗಾಂಧಿ ಯುವ ಶಕ್ತಿಸಂಘ, ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆ ಗುಂಪಗಳನ್ನು ಮತ್ತು ಇಂತಹ ಗುಂಪುಗಳಿಂದ ಪರಸ್ಪರವಾಗಿ ಕೆಲಸ ಮಾಡಿಸುವುದು.
(ಆ) ಕಸ ಸಂಗ್ರಹಣೆ, ವಿಂಗಡಣೆ ಮತ್ತು ಸಾಗಾಣಿಕೆಗಾಗಿ ಆಸಕ್ತ ಗುಂಪುಗಳನ್ನು ರಚನೆಮಾಡುವುದು.
32. ಇ-ತಂತ್ರಜ್ಞಾನದ ಅರಿವು ಮೂಡಿಸಿಕೊಳ್ಳುವುದು.
33. ಸಾರ್ವಜನಿಕ ಕುಂದುಕೊರತೆ ನಿವಾರಣಾ ಘಟಕ ಸ್ಥಾಪಿಸುವುದು ಮತ್ತು ಅದರ ನಿರ್ವಹಣೆ ಪರಿಶೀಲನೆ ಆಗ್ಗಿಂದಾಗ್ಗೆ ಮಾಡುವುದು.
ಮೇಲ್ಕಂಡವುಗಳಲ್ಲದೆ ಇನ್ನು ಹೆಚ್ಚಿನ ಮಾಹಿತಿಗಾಗಿ 1973ನೇ ಕರ್ನಾಟಕ ಪೌರಸಭೆಗಳ ಅಧಿಕಾರಿ ಪ್ರತ್ಯಾಯೋಜನೆಯ ನಿಯಮ 6ಕ್ಕೆ ಸಂಬಂಧಿಸಿದಂತೆ ಅನುಸೂಚಿಯಲ್ಲಿನ ಕ್ರಮ ಸಂಖ್ಯೆ 1 ರಿಂದ 33 ರವರೆಗೆ ಪರಿಶೀಲಿಸುವುದು.









