Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ವಿಶ್ವಸಂಸ್ಥೆಯ ಆಘಾತಕಾರಿ ವರದಿ: 2030 ರ ವೇಳೆಗೆ ಬರೋಬ್ಬರಿ 130 ಕೋಟಿ ಜನರ ಕುಡಿಯುವ ನೀರಿಗೆ ಕಂಟಕ ತರಲಿದೆ ‘AI’ ತಂತ್ರಜ್ಞಾನ!

​ಪ್ರಯಾಣಿಕರೇ ಎಚ್ಚರ! ಹೋಟೆಲ್ ರೂಂಗಳಲ್ಲಿ ಅಡಗಿರುವ ‘ಹಿಡನ್ ಕ್ಯಾಮೆರಾ’ ಪತ್ತೆಹಚ್ಚುವುದು ಹೇಗೆ? ನಿಮ್ಮ ಪ್ರೈವೆಸಿ ರಕ್ಷಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ವಾಹನ ಅಪಘಾತ ಪರಿಹಾರ ವಿಲೇವಾರಿಗೆ ವಿಪರೀತ ವಿಳಂಬ: ಸುಪ್ರೀಂ ಕೋರ್ಟ್ ಕಳವಳ, ಶೀಘ್ರ ಇತ್ಯರ್ಥಕ್ಕೆ ಹೊಸ ಮಾರ್ಗಸೂಚಿ ಪ್ರಕಟ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಶೃಂಗೇರಿ ಮರು ಮತ ಎಣಿಕೆಯಲ್ಲಿ ವೋಟ್ ಡಕಾಯಿತಿ ಆಗಿದೆ : ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್!
KARNATAKA

BIG NEWS : ಶೃಂಗೇರಿ ಮರು ಮತ ಎಣಿಕೆಯಲ್ಲಿ ವೋಟ್ ಡಕಾಯಿತಿ ಆಗಿದೆ : ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್!

By ಸುರೇಶ್‌

ಬೆಂಗಳೂರು : ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆಯಲ್ಲಿ ವೋಟ್ ಚೋರಿ ಅಲ್ಲ. ಇದು ವೋಟ್ ಡಕಾಯಿತಿ ಆಗಿದೆ. ಅಂಚೆ ಮತ ಪತ್ರವನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕೋರ್ಟ್ ಆದೇಶದಂತೆ ಪೋಸ್ಟಲ್ ಬ್ಯಾಲೆಟ್ ಮರು ಎಣಿಕೆ ಆಯಿತು.

2023ರ ಚುನಾವಣೆಯಲ್ಲಿ 201 ಮತಗಳ ಅಂತರದಿಂದ ರಾಜೇಗೌಡ ಅವರು ಗೆದ್ದಿದ್ದರು. ಅವರಿಗೆ 59,171 ಮತಗಳು ಬಂದಿದ್ದವು. ಬಿಜೆಪಿಯ ಜೀವರಾಜ್​ಗೆ 58,970 ಮತಗಳು ಬಂದಿದ್ದವು. ರಾಜೇಗೌಡರಿಗೆ ಇವಿಎಂನಿಂದ ಬಂದ‌ ಮತಗಳು 58,602. ಪೋಸ್ಟಲ್​ನಿಂದ ಬಂದಿದ್ದು 569. ಜೀವರಾಜ್​ಗೆ ಇವಿಎಂನಿಂದ 58,278 ಮತಗಳು ಬಂದಿದ್ದವು. ಅವರಿಗೆ ಪೋಸ್ಟಲ್​ನಿಂದ ಬಂದ‌ ಮತ 692. ಒಟ್ಟಾರೆಯಾಗಿ 201 ಮತಗಳಿಂದ ರಾಜೇಗೌಡ ಅವರು ಗೆದ್ದಿದ್ದರು. ಇವೆಲ್ಲವೂ ಸಿಂಧು ಮತಗಳೆಂದು ರಿಟರ್ನಿಂಗ್ ಅಧಿಕಾರಿಗಳು, ಚುನಾವಣಾ ಏಜೆಂಟ್​ಗಳು ಸಹಿ ಹಾಕಿ ಘೋಷಿಸಿದ್ದರು ಎಂದು ತಿಳಿಸಿದರು.

ಘೋಷಣೆ ಆದ ಮೇಲೆ ಜೀವರಾಜ್ ಅವರು ಮಾಲ್ ಪ್ರಾಕ್ಟೀಸ್ ಆಗಿದೆ ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಅವರ ಅರ್ಜಿ ಪುರಸ್ಕರಿಸಿದ್ದ ಹೈಕೋರ್ಟ್ 6 -3 – 2026ರಂದು ಮರು ಎಣಿಕೆಗೆ ನಿರ್ದೇಶನ ನೀಡಿತ್ತು. ತಿರಸ್ಕೃತ ಮತಗಳನ್ನು ಮರು ಎಣಿಕೆ ವೇಳೆ ಸೇರ್ಪಡೆಗೊಳಿಸಬೇಕು ಮತ್ತು ಎಲ್ಲಾ ಪೋಸ್ಟಲ್ ಮತ ಎಣಿಕೆ ಮಾಡಬೇಕು ಎಂದು ನಿರ್ದೇಶನ ನೀಡಿತ್ತು. ಅದರಂತೆ ಮೊನ್ನೆ ಮರು ಎಣಿಕೆ ನಡೆಯಿತು. 2023ರಲ್ಲಿ ಅಂಚೆ ಮತಪತ್ರದಲ್ಲಿ 569 ಮತಗಳು ರಾಜೇಗೌಡರಿಗೆ ಲಭಿಸಿದ್ದವು. ಮರು ಎಣಿಕೆಯಲ್ಲಿ 314 ಮತಗಳು ಮಾತ್ರ ಸಿಂಧು ಆಗುತ್ತವೆ. ಅದರಲ್ಲಿ 255 ಮತಗಳು ಅಸಿಂಧು ಆಗುತ್ತವೆ. ಅದು ಹೇಗೆ ಅಸಿಂಧು ಆಗುತ್ತವೆ? ಎಂದು ಸಿಎಂ ಪ್ರಶ್ನಿಸಿದರು.

2023ರಲ್ಲಿ ಜೀವರಾಜ್​ಗೆ 692 ಅಂಚೆ ಮತ ಬಿದ್ದಿತ್ತು. ಮರು ಎಣಿಕೆಯಲ್ಲಿ 690 ಮತಗಳು ಲಭಿಸಿವೆ. 2 ಮತಗಳು ಮಾತ್ರ ಕಡಿಮೆಯಾಗಿವೆ. ಇದನ್ನು ನೋಡಿದಾಗ ಬಿಜೆಪಿಯವರು ಕ್ರಿಮಿನಲ್ ಪಿತೂರಿ ಮಾಡಿ ವೋಟ್ ಚೋರಿ ಮಾಡಿರುವುದು ಸ್ಪಷ್ಟವಾಗುತ್ತದೆ. ರಾಜೇಗೌಡರ 255 ಮತಗಳನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ. ಎರಡು ಮಾರ್ಕ್ ಇದ್ದರೆ ಅಸಿಂಧು ಮಾಡುತ್ತಾರೆ. ಹಿಂದಿನ ಚುನಾವಣಾ ಅಧಿಕಾರಿ ಸಿಂಧು ಮಾಡಿರುವುದು, ಈಗ ಹೇಗೆ ಅಸಿಂಧು ಮಾಡಿದ್ದಾರೆ?. 52 ಮತಗಳು ಜೀವರಾಜ್​ಗೆ ಹೆಚ್ಚಿಗೆ ಬಂದಿವೆ. ಎಲ್ಲಾ ಮತ ದಾಖಲಾತಿಗಳನ್ನು ಟ್ರಂಕ್​ನಲ್ಲಿ ಇಟ್ಟು ಕಳುಹಿಸುತ್ತಾರೆ. ಕೌಂಟಿಂಗ್ ಮಾಡಿದಾಗ ಅವರದೇ ಸರ್ಕಾರ ಇತ್ತು. ಡಬಲ್ ಇಂಜಿನ್ ಸರ್ಕಾರ ಇತ್ತು. ಬಿಜೆಪಿಯವರು ಸಿಬ್ಬಂದಿ ಮೂಲಕ ತಿದ್ದಿರುವುದು ಖಚಿತವಾಗಿದೆ ಎಂದು ಆರೋಪಿಸಿದರು.

Share. Facebook Twitter LinkedIn WhatsApp Email

Related Posts

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಡಿ.ಕೆ ಶಿವಕುಮಾರ್; ಕರ್ನಾಟಕದ ಪೊಲೀಸ್ ಸಾಮರ್ಥ್ಯ ಸುಧಾರಣೆ ನೆರವಿಗೆ ಮನವಿ

3 Mins Read

ಮ್ಯಾಗಿ, ಕೆಎಫ್‌ಸಿ ಉತ್ಪನ್ನಗಳಲ್ಲಿ ಗುಣಮಟ್ಟದ ಕೊರತೆ ಆರೋಪ: ನೆಸ್ಲೆ ಇಂಡಿಯಾ ಸೇರಿದಂತೆ ಪ್ರಮುಖ ಸಂಸ್ಥೆಗಳಿಗೆ FSSAI ನೋಟಿಸ್

3 Mins Read

ಇಂದಿನಿಂದಲೇ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಆರಂಭ: KSRTC ಮಾಹಿತಿ

2 Mins Read
Recent News

​ವಿಶ್ವಸಂಸ್ಥೆಯ ಆಘಾತಕಾರಿ ವರದಿ: 2030 ರ ವೇಳೆಗೆ ಬರೋಬ್ಬರಿ 130 ಕೋಟಿ ಜನರ ಕುಡಿಯುವ ನೀರಿಗೆ ಕಂಟಕ ತರಲಿದೆ ‘AI’ ತಂತ್ರಜ್ಞಾನ!

​ಪ್ರಯಾಣಿಕರೇ ಎಚ್ಚರ! ಹೋಟೆಲ್ ರೂಂಗಳಲ್ಲಿ ಅಡಗಿರುವ ‘ಹಿಡನ್ ಕ್ಯಾಮೆರಾ’ ಪತ್ತೆಹಚ್ಚುವುದು ಹೇಗೆ? ನಿಮ್ಮ ಪ್ರೈವೆಸಿ ರಕ್ಷಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ವಾಹನ ಅಪಘಾತ ಪರಿಹಾರ ವಿಲೇವಾರಿಗೆ ವಿಪರೀತ ವಿಳಂಬ: ಸುಪ್ರೀಂ ಕೋರ್ಟ್ ಕಳವಳ, ಶೀಘ್ರ ಇತ್ಯರ್ಥಕ್ಕೆ ಹೊಸ ಮಾರ್ಗಸೂಚಿ ಪ್ರಕಟ

BREAKING: ರೋಹಿಣಿ ಸಿಂಧೂರಿ – ಡಿ. ರೂಪಾ ನಡುವಿನ ಜಗಳಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಸಂಧಾನಕ್ಕೆ ಜಡ್ಜ್ ನೇಮಕ

State News
KARNATAKA

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಡಿ.ಕೆ ಶಿವಕುಮಾರ್; ಕರ್ನಾಟಕದ ಪೊಲೀಸ್ ಸಾಮರ್ಥ್ಯ ಸುಧಾರಣೆ ನೆರವಿಗೆ ಮನವಿ

By ವಸಂತ ಬಿ ಈಶ್ವರಗೆರೆ KARNATAKA 3 Mins Read

ನವದೆಹಲಿ : ಎರಡು ಹೆಚ್ಚುವರಿ ಇಂಡಿಯಾ ರಿಸರ್ವ್ ಬೆಟಾಲಿಯನ್ಸ್ (IRBs) ಸೃಷ್ಟಿ, ಪೊಲೀಸ್ ಇಲಾಖೆ ಚಟುವಟಿಕೆಗಳಿಗೆ ಸಿಎಸ್ಆರ್ ನಿಧಿ ಬಳಕೆ,…

ಮ್ಯಾಗಿ, ಕೆಎಫ್‌ಸಿ ಉತ್ಪನ್ನಗಳಲ್ಲಿ ಗುಣಮಟ್ಟದ ಕೊರತೆ ಆರೋಪ: ನೆಸ್ಲೆ ಇಂಡಿಯಾ ಸೇರಿದಂತೆ ಪ್ರಮುಖ ಸಂಸ್ಥೆಗಳಿಗೆ FSSAI ನೋಟಿಸ್

ಇಂದಿನಿಂದಲೇ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಆರಂಭ: KSRTC ಮಾಹಿತಿ

BIG NEWS: ರಾಜ್ಯದ ಗ್ರಾಮ ಪಂಚಾಯ್ತಿಯ ಎಲ್ಲ ಸರ್ಕಾರಿ ಆಸ್ತಿ ‘ಜಿಯೋಟ್ಯಾಗ್’ಗೆ ಸಚಿವ ಈಶ್ವರ ಖಂಡ್ರೆ ಸೂಚನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.