ತುಮಕೂರು : ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆ ಮಾಡಿ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ತಮ್ಮ ಹೇಳಿಕೆಗೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದು, ತುಮಕೂರು ಒಂದು ಕಾನ್ಸೆಪ್ಟ್ ಅಷ್ಟೇ ತುಮಕೂರು ಹೆಸರು ಬದಲಾವಣೆ ಮಾಡಿ ಅಂತ ಹೇಳಿದ್ದಿನ? ತುಮಕೂರು ಹೆಸರು ಬದಲಾವಣೆ ಆಗಲ್ಲ ವಿಸ್ತೀರ್ಣವೂ ಬದಲಾಗಲ್ಲ ತುಮಕೂರು ಹೇಗಿರುತ್ತೋ ಹಾಗೆ ಇರಲಿದೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನ ಒಂದು ಭಾಗ ಆದಾಗ ಹೂಡಿಕೆಗೆ ಆಲೋಚನೆ ಬರುತ್ತೆ. ನಾವು ಅಲ್ಲಿ ಹೋಗಿ ಇನ್ವೆಸ್ಟ್ ಮಾಡಬೇಕೆಂಬ ಆಲೋಚನೆ ಬರುತ್ತದೆ. ಅಷ್ಟು ಬಿಟ್ಟರೆ ನಾವು ಯಾವುದನ್ನು ಬದಲಾಯಿಸಲ್ಲ. ತುಮಕೂರು ಹೆಸರು ಬದಲಾಗಲ್ಲ ದೆಹಲಿಯನ್ನು ಮೂರು ಭಾಗ ಮಾಡಿಲ್ವಾ? ಅದನ್ನು ಬದಲಾಯಿಸಿದ್ದಾರ? ತುಮಕೂರಿನ ಒಂದು ಕಡ್ಡಿ ಕೂಡ ಅಲಗಾಡುವುದಿಲ್ಲ.
ತುಮಕೂರು ಹಾಗೆ ಇರುತ್ತೆ ತುಮಕೂರು ತಾಲೂಕು ಸಹ ಹಾಗೆ ಇರುತ್ತೆ. ಬೆಂಗಳೂರಿಗೆ ಒಂದು ಭಾಗ ಅಂತ ಮಾಡಿದರೆ ಹೂಡಿಕೆ ಮಾಡುತ್ತಾರೆ. ನಮಗೂ ಕೂಡ ತುಮಕೂರು ಎಲಿವೇಟ್ ಆಗುತ್ತೆ ಅನ್ನೋ ಉದ್ದೇಶ ಇದೆ. ಅದು ಬಿಟ್ರೆ ಬೇರೆ ಯಾವುದೇ ವಿಷಯ ಇದರಲ್ಲಿ ಇಲ್ಲ ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜಿ ಪರಮೇಶ್ವರ್ ಸ್ಪಷ್ಟಪಡಿಸಿದರು.








