Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಂತಿಮ ಘಟ್ಟಕ್ಕೆ ತಲುಪಿದ ವಿಧಾನ ಪರಿಷತ್ ಚುನಾವಣೆ : ಈವರೆಗೆ ಒಟ್ಟು 221 ಶಾಸಕರಿಂದ ಮತ ಚಲಾವಣೆ!

BIG NEWS : ರಾಜ್ಯದಲ್ಲಿ ಹೋಂಸ್ಟೇ ನಿಯಂತ್ರಣಕ್ಕೆ ಸಮಗ್ರ ನೀತಿ ರೂಪಿಸಲು, ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

BREAKING : ಬಿಜೆಪಿಗೆ ಮತ ಹಾಕುವುದಾಗಿ ಶಾಸಕ ಯತ್ನಾಳ್ ಪತ್ರ : ಚುನಾವಣಾಧಿಕಾರಿಗೆ ದೂರು ನೀಡಿದ ಕಾಂಗ್ರೆಸ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ನಿವೃತ್ತ ಸರ್ಕಾರಿ ನೌಕರರ ಗಮನಕ್ಕೆ : ನಿಮಗೆ ಸಿಗಲಿರುವ ಸೌಲಭ್ಯಗಳ ಕುರಿತು ಇಲ್ಲಿದೆ ಮಾಹಿತಿ
KARNATAKA

BIG NEWS : ರಾಜ್ಯ ನಿವೃತ್ತ ಸರ್ಕಾರಿ ನೌಕರರ ಗಮನಕ್ಕೆ : ನಿಮಗೆ ಸಿಗಲಿರುವ ಸೌಲಭ್ಯಗಳ ಕುರಿತು ಇಲ್ಲಿದೆ ಮಾಹಿತಿ

By kannadanewsnow57

ಬೆಂಗಳೂರು : ರಾಜ್ಯದ ನಿವೃತ್ತ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ನಿವೃತ್ತಿ ವೇತನ, ಇತರೆ ಭತ್ಯೆಗಳನ್ನು ಪರಿಷ್ಕರಿಸಿ ಮಹತ್ವದ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ನೀತಿ ನಿರ್ಣಯದಂತೆ, ಮೇಲೆ (2)ರ ಆದೇಶದಲ್ಲಿ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳು ಮತ್ತು ಪಿಂಚಣಿಯನ್ನು ಪರಿಷ್ಕರಿಸಿ ಅನುಷ್ಠಾನಗೊಳಿಸಲು ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಮುಂದುವರೆದು, ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024ರ ಅವಕಾಶಗಳಂತೆ ಪರಿಷ್ಕೃತ ವೇತನ ಶ್ರೇಣಿಗಳು ಮತ್ತು ಪರಿಷ್ಕೃತ ಪಿಂಚಣಿಯನ್ನು ಅನುಷ್ಠಾನಗೊಳಿಸಲು ಮೇಲೆ (4)ರಲ್ಲಿ ಓದಲಾದ ದಿನಾಂಕ: 23.08.2024ರಲ್ಲಿ ವಿಸ್ತ್ರತವಾದ ಆದೇಶಗಳನ್ನು ಹೊರಡಿಸಲಾಗಿರುತ್ತದೆ.

ರಾಜ್ಯ ಸರ್ಕಾರವು ರಚಿಸಿದ 7ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುವಂತೆ ರಾಜ್ಯ ಸರ್ಕಾರಿ ನೌಕರರಿಗೆ ಲಭ್ಯವಿರುವ ಕನಿಷ್ಠ ಮತ್ತು ಗರಿಷ್ಠ ಪಿಂಚಣಿಯನ್ನು ಈ ಕೆಳಕಂಡಂತೆ ಪರಿಷ್ಕರಿಸಲು ಸರ್ಕಾರವು ಹರ್ಷಿಸುತ್ತದೆ.

1. ಕನಿಷ್ಠ ನಿವೃತ್ತಿ ವೇತನ:

ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು ಮತ್ತು ಕರ್ನಾಟಕ ನಾಗರೀಕ ಸೇವಾ (ಅಸಾಧಾರಣ ನಿವೃತ್ತಿ ವೇತನ) ನಿಯಮಾವಳಿಗಳು, 2003ರ ಅವಕಾಶಗಳನ್ವಯ ಸಂದರ್ಭಾನುಸಾರ ಲಭ್ಯವಿರುವ ಈ ಕೆಳಕಂಡ ವಿವಿಧ ರೀತಿಯ ನಿವೃತ್ತಿ ವೇತನಗಳ ಕನಿಷ್ಠ ಮೊತ್ತವನ್ನು ಪ್ರಸ್ತುತ ಮಾಹೆಯಾನ ರೂ. 8,500/- ಗಳಿಂದ ಮಾಹೆಯಾನ ರೂ.13,500/-ಗಳಿಗೆ ಪರಿಷ್ಕರಿಸತಕ್ಕದ್ದು.

ಅ) ವಯೋ ನಿವೃತ್ತಿ ವೇತನ
ಆ) ವಿಶ್ರಾಂತಿ ನಿವೃತ್ತಿ ವೇತನ
ಇ) ಅಶಕ್ತತಾ ನಿವೃತ್ತಿ ವೇತನ
ಈ) ಪರಿಹಾರ ನಿವೃತ್ತಿ ವೇತನ
ಉ) ಅನುಕಂಪ ಭತ್ಯೆ

2. ಗರಿಷ್ಠ ನಿವೃತ್ತಿ ವೇತನ:

2.1 ಮೇಲಿನ ಕಂಡಿಕೆ-1 ರಲ್ಲಿ ನಿರ್ಧಿಷ್ಟಪಡಿಸಿರುವ ವಿವಿಧ ರೀತಿಯ ನಿವೃತ್ತಿ ವೇತನಗಳ ಗರಿಷ್ಠ ಮೊತ್ತದ ಪರಿಮಿತಿಯನ್ನು ಪ್ರಸ್ತುತ ಮಾಹೆಯಾನ ರೂ. 75,300/- ಗಳಿಂದ ಮಾಹೆಯಾನ ರೂ.1,20,600/-ಗಳಿಗೆ ಪರಿಷ್ಕರಿಸತಕ್ಕದ್ದು.

2.2 ಕೆಲವು ಅತ್ಯಂತ ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 210 ರಡಿ ಮಂಜೂರು ಮಾಡಲಾಗುವ ತಾರ್ತಿಕ (ಅಡ್ ಹಾಕ್) ನಿವೃತ್ತಿ ವೇತನದ ಪರಿಮಿತಿಯು ಮಾಹೆಯಾನ ರೂ.13,500/-ಗಳನ್ನು ಮೀರತಕ್ಕದ್ದಲ್ಲ.

3. ಕುಟುಂಬ ನಿವೃತ್ತಿ ವೇತನ:

3.1 ಸರ್ಕಾರಿ ನೌಕರರ ಅವಲಂಬಿತರಿಗೆ ಲಭ್ಯವಿರುವ ಕುಟುಂಬ ನಿವೃತ್ತಿ ವೇತನದ ಕನಿಷ್ಠ ಮೊತ್ತವು ಪ್ರಸ್ತುತ ಮಾಹೆಯಾನ ರೂ. 8,500/- ಗಳಿಂದ ಮಾಹೆಯಾನ ರೂ. 13,500/- ಗಳಿಗೆ ಪರಿಷ್ಕರಿಸತಕ್ಕದ್ದು.

3.2 ಕುಟುಂಬ ನಿವೃತ್ತಿ ವೇತನದ ಗರಿಷ್ಠ ಪರಿಮಿತಿಯು ಪ್ರಸ್ತುತ ಮಾಹೆಯಾನ ರೂ. 45,180/- ರಿಂದ ಮಾಹೆಯಾನ ರೂ. 80,400/-ಗಳಿಗೆ ಪರಿಷ್ಕರಿಸತಕ್ಕದ್ದು.

3.3 ಈ ಮೇಲಿನ ಪರಿಮಿತಿಯ ಮಿತಿಗೊಳಪಟ್ಟು ಲಭ್ಯವಿರುವ ಕುಟುಂಬ ನಿವೃತ್ತಿ ವೇತನದ ಮೊತ್ತವು ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002ರಡಿ ಲಭ್ಯವಾಗುವ ಕುಟುಂಬ ನಿವೃತ್ತಿ ವೇತನದ ಉಪಲಬ್ದಗಳ ಶೇ. 30ರಷ್ಟು ಇರತಕ್ಕದ್ದು.

3.4 ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002ರ ಅವಕಾಶಗಳಂತೆ, ದಿನಾಂಕ: 01.07.2022 ರಂದು ಮತ್ತು ತದನಂತರ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸರ್ಕಾರಿ ನೌಕರರ ಪ್ರಕರಣಗಳಲ್ಲಿ, ಮೃತ ಸರ್ಕಾರಿ ನೌಕರನ ಅವಲಂಬಿತರು ಕುಟುಂಬ ನಿವೃತ್ತಿ ವೇತನದ ಪರಿಷ್ಕೃತ ಮೊತ್ತವನ್ನು ದಿನಾಂಕ: 01.08.2024ರಿಂದ ಪಡೆಯಲು ಅರ್ಹರಿರುತ್ತಾರೆ.

3.5 ದಿನಾಂಕ: 01.07.2022ರ ಪೂರ್ವದಲ್ಲಿ ಕುಟುಂಬ ನಿವೃತ್ತಿ ವೇತನ ಪಡೆಯುತ್ತಿದ್ದ ಮೃತ ಸರ್ಕಾರಿ ನೌಕರನ ಅವಲಂಬಿತರಿಗೆ ಈ ಆದೇಶದ ಅನುಬಂಧದಲ್ಲಿ ತೋರಿಸಿರುವಂತೆ ಪರಿಷ್ಕೃತ ಕುಟುಂಬ ನಿವೃತ್ತಿ ವೇತನವು ಲಭ್ಯವಿರುತ್ತದೆ.

4. ತುಟ್ಟಿ ಭತ್ಯೆ:

4.1 ಅಖಿಲ ಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ (ಸಾಮಾನ್ಯ) 361.704 ಅಂಶಗಳವರೆಗಿನ (ಆಧಾರ ವರ್ಷ 2001=100) ತುಟ್ಟಿ ಭತ್ಯೆಯನ್ನು ದಿನಾಂಕ: 1ನೇ ಜುಲೈ 2022 ರಂದು ಲಭ್ಯವಿದ್ದ ಪ್ರಸ್ತುತ ಮೂಲ ಪಿಂಚಣಿ/ಕುಟುಂಬ ಪಿಂಚಣಿಯೊಂದಿಗೆ ವಿಲೀನಗೊಳಿಸಿ ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ಪಿಂಚಣಿ/ಕುಟುಂಬ ಪಿಂಚಣಿ ಮೊತ್ತವನ್ನು ನಿರ್ಧರಿಸಲಾಗಿರುತ್ತದೆ. ಆದುದರಿಂದ, ಪರಿಷ್ಕೃತ ನಿವೃತ್ತಿ ವೇತನ / ಕುಟುಂಬ ನಿವೃತ್ತಿ ವೇತನ ಮೇಲಿನ ತುಟ್ಟಿ ಭತ್ಯೆಯ ಮೊದಲನೇ ಕಂತನ್ನು ದಿನಾಂಕ: 1ನೇ ಜನವರಿ 2023ರಿಂದ ಲೆಕ್ಕಹಾಕಿ ಈ ಕೆಳಗೆ ತಿಳಿಸಿರುವ ದಿನಾಂಕದಿಂದ ಮಂಜೂರು ಮಾಡತಕ್ಕದ್ದು.

4.2 ಕಾರ್ಯನಿರತ ಸರ್ಕಾರಿ ನೌಕರರಿಗೆ ಕಾಲ ಕಾಲಕ್ಕೆ ಮಂಜೂರು ಮಾಡುವ ತುಟ್ಟಿ ಭತ್ಯೆ ಆದೇಶಗಳನ್ನು ಅನ್ವಯಿಸಿ ನಿವೃತ್ತಿ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ತುಟ್ಟಿ ಭತ್ಯೆಯನ್ನು ಕ್ರಮಬದ್ಧಗೊಳಿಸಿ ಮಂಜೂರು ಮಾಡುವುದನ್ನು ಮುಂದುವರೆಸತಕ್ಕದ್ದು. ಅದರಂತೆ, ಪರಿಷ್ಕೃತ ನಿವೃತ್ತಿ ವೇತನ/ ಪರಿಷ್ಕೃತ ಕುಟುಂಬ ನಿವೃತ್ತಿ ವೇತನದ ಮೇಲೆ ತುಟ್ಟಿ ಭತ್ಯೆಯನ್ನು ಈ ಕೆಳಕಂಡಂತೆ ಕಾಲ್ಪನಿಕವಾಗಿ ಕ್ರಮಬದ್ಧಗೊಳಿಸತಕ್ಕದ್ದು:

ಪರಿಷ್ಕೃತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ 01.07.2023 – 5.5% ಪರಿಷ್ಕೃತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ 01.01.2024 8.5% ಪರಿಷ್ಕೃತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ 4.3 ಮುಂದಿನ ತುಟ್ಟಿ ಭತ್ಯೆಯ ಮಂಜೂರಾತಿಯು ಈ ಸಂಬಂಧ ರಾಜ್ಯ ಸರ್ಕಾರವು ಹೊರಡಿಸುವ ಆದೇಶಗಳಲ್ಲಿ ಕ್ರಮಬದ್ಧಗೊಳಿಸಿದಂತೆ ಇರತಕ್ಕದ್ದು. 4.4 ತುಟ್ಟಿ ಭತ್ಯೆಯನ್ನು 1ನೇ ಜನವರಿ ಮತ್ತು 1ನೇ ಜುಲೈರಿಂದ ಅನ್ವಯಿಸುವಂತೆ ವರ್ಷಕ್ಕೆ ಎರಡು ಬಾರಿ ಪಾವತಿಸುವುದು.

5. ನಿವೃತ್ತಿ ಉಪದಾನ / ಮರಣ ಉಪದಾನ :

5.1 ದಿನಾಂಕ: 01.07.2022ರಂದು ಮತ್ತು ನಂತರದಲ್ಲಿ ಹಾಗೂ ದಿನಾಂಕ: 01.08.2024ಕ್ಕೂ ಮುಂಚಿತವಾಗಿ ಸೇವೆಯಿಂದ ನಿವೃತ್ತನಾದ ಕಾರಣದಿಂದ ಸೇವೆಯಲ್ಲಿರುವುದು ಕೊನೆಗೊಂಡ ಸರ್ಕಾರಿ ನೌಕರನ ಪ್ರಕರಣದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅವಕಾಶಗಳನ್ವಯ ಪಾವತಿಸಲಾಗುವ ನಿವೃತ್ತಿ ಉಪದಾನವು ಪೂರ್ಣಗೊಳಿಸಲಾದ ಪ್ರತಿ ಆರು ಮಾಸಿಕ ಅರ್ಹತಾ ಸೇವೆಗೆ ಪ್ರಸ್ತುತ ಉಪಲಬ್ದಗಳ ಗರಿಷ್ಠ ಮಿತಿ 16 1/2 ಕ್ಕೆ ಸೀಮಿತಗೊಳಿಸಿ, ಪ್ರಸ್ತುತ ಉಪಲಬ್ಬಗಳ 1/4 ನೇ ಭಾಗಕ್ಕೆ ಸಮನಾಗತಕ್ಕದು. ಈ ರೀತಿ ಲೆಕ್ಕ ಹಾಕಲಾದ ನಿವೃತ್ತಿ ಉಪದಾನದ ಗರಿಷ್ಠ ಮಿತಿಯು ರೂ.20.00 ಲಕ್ಷಗಳಾಗಿರುತ್ತದೆ.

BIG NEWS : ರಾಜ್ಯ `ನಿವೃತ್ತ ಸರ್ಕಾರಿ ನೌಕರ'ರ ಗಮನಕ್ಕೆ : `ನಿವೃತ್ತಿ ವೇತನ’ದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ! BIG NEWS: To the notice of retired state government employees: Here's what you will get
Share. Facebook Twitter LinkedIn WhatsApp Email

Related Posts

ಅಂತಿಮ ಘಟ್ಟಕ್ಕೆ ತಲುಪಿದ ವಿಧಾನ ಪರಿಷತ್ ಚುನಾವಣೆ : ಈವರೆಗೆ ಒಟ್ಟು 221 ಶಾಸಕರಿಂದ ಮತ ಚಲಾವಣೆ!

2 Mins Read

BIG NEWS : ರಾಜ್ಯದಲ್ಲಿ ಹೋಂಸ್ಟೇ ನಿಯಂತ್ರಣಕ್ಕೆ ಸಮಗ್ರ ನೀತಿ ರೂಪಿಸಲು, ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

2 Mins Read

BREAKING : ಬಿಜೆಪಿಗೆ ಮತ ಹಾಕುವುದಾಗಿ ಶಾಸಕ ಯತ್ನಾಳ್ ಪತ್ರ : ಚುನಾವಣಾಧಿಕಾರಿಗೆ ದೂರು ನೀಡಿದ ಕಾಂಗ್ರೆಸ್

2 Mins Read
Recent News

ಅಂತಿಮ ಘಟ್ಟಕ್ಕೆ ತಲುಪಿದ ವಿಧಾನ ಪರಿಷತ್ ಚುನಾವಣೆ : ಈವರೆಗೆ ಒಟ್ಟು 221 ಶಾಸಕರಿಂದ ಮತ ಚಲಾವಣೆ!

BIG NEWS : ರಾಜ್ಯದಲ್ಲಿ ಹೋಂಸ್ಟೇ ನಿಯಂತ್ರಣಕ್ಕೆ ಸಮಗ್ರ ನೀತಿ ರೂಪಿಸಲು, ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

BREAKING : ಬಿಜೆಪಿಗೆ ಮತ ಹಾಕುವುದಾಗಿ ಶಾಸಕ ಯತ್ನಾಳ್ ಪತ್ರ : ಚುನಾವಣಾಧಿಕಾರಿಗೆ ದೂರು ನೀಡಿದ ಕಾಂಗ್ರೆಸ್

SHOCKING : ಮನೆಯ ಹೊರಗೆ, ಬೆಡ್ ರೂಮ್ ನಲ್ಲೂ `CCTV’ ಅಳವಡಿಸಿದ್ದ ಪಾಪಿ ಪತಿ : ಮದುವೆಯಾಗಿ 48 ದಿನಗಳಲ್ಲೇ ನವವಿವಾಹಿತೆ ಆತ್ಮಹತ್ಯೆ.!

State News
KARNATAKA

ಅಂತಿಮ ಘಟ್ಟಕ್ಕೆ ತಲುಪಿದ ವಿಧಾನ ಪರಿಷತ್ ಚುನಾವಣೆ : ಈವರೆಗೆ ಒಟ್ಟು 221 ಶಾಸಕರಿಂದ ಮತ ಚಲಾವಣೆ!

By ಸುರೇಶ್‌ KARNATAKA 2 Mins Read

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಸ್ಥಾನಗಳಿಗೆ ಇಂದು (ಗುರುವಾರ) ವಿಧಾನಸೌಧದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಬೆಳಿಗ್ಗೆಯಿಂದಲೇ ಶಾಸಕರು ಸರದಿಯಲ್ಲಿ ಬಂದು…

BIG NEWS : ರಾಜ್ಯದಲ್ಲಿ ಹೋಂಸ್ಟೇ ನಿಯಂತ್ರಣಕ್ಕೆ ಸಮಗ್ರ ನೀತಿ ರೂಪಿಸಲು, ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

BREAKING : ಬಿಜೆಪಿಗೆ ಮತ ಹಾಕುವುದಾಗಿ ಶಾಸಕ ಯತ್ನಾಳ್ ಪತ್ರ : ಚುನಾವಣಾಧಿಕಾರಿಗೆ ದೂರು ನೀಡಿದ ಕಾಂಗ್ರೆಸ್

BIG NEWS : ರೇಣುಕಾ ಸ್ವಾಮಿ ಕೊಲೆ ಕೇಸ್ : ಹೈಕೋರ್ಟ್ ನಲ್ಲಿರುವ ಪ್ರಕರಣದಿಂದ ನಿವೃತ್ತಿಯಾದ ದರ್ಶನ್ ಪರ ವಕೀಲ ಸುನಿಲ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.