ಬೆಂಗಳೂರು : 2024-25ನೇ ಸಾಲಿಗೆ ಖಾಸಗಿ ಶಾಲೆಗಳಿಗೆ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ / ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಪ್ರಾರಂಭಿಸಲು ನೊಂದಣಿ (Registration) ಹಾಗೂ ಶಾಲಾ ಡ್ರೆಸ್ ಕೋಡ್ ಪಡೆಯುವ ಕುರಿತು ಅವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ-1983ರ ನಿಯಮ 30, 31 ಮತ್ತು 32ರಂತೆ ಹಾಗೂ The Karnataka Educational Institutions(Classification and Registration) Rules 19970 ಅಧಿಸೂಚನೆ ಪತ್ರ ಸಂಖ್ಯೆ:ED 709 PGC 2017 ದಿನಾಂಕ:07-03-2018ರ ಅಧಿಸೂಚನೆಯಂತೆ ಹೊಸ ಶಾಲಾ ನೋಂದಣಿ ಮತ್ತು ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ಕೋರಿ ಶೈಕ್ಷಣಿಕ ವರ್ಷದ ಹಿಂದಿನ ಸಾಲಿನ ನವೆಂಬರ್ 30 ಅಥವಾ ಅದಕ್ಕೂ ಮೊದಲು ಇಲಾಖಾ ವೆಬ್
ಸೈಟ್ ನಲ್ಲಿ ಹೊಸ ಶಾಲಾ ನೋಂದಣಿ ಕುರಿತು ಅರ್ಜಿ ಸಲ್ಲಿಸಿ ನೊಂದಣಿ ಪಡೆಯಬೇಕಾಗಿರುತ್ತದೆ. ಅದರಂತೆ ಉಲ್ಲೇಖ-13 ರಸ್ತೆಯ 2024-25 ಅದರಂತೆ 2024-25ನೇ ಸಾಲಿಗೆ ಖಾಸಗಿ ಅನುದಾನರಹಿತ ಪೂರ್ವ ಪ್ರಾಥಮಿಕ / ಪ್ರಾಥಮಿಕ/ ಪ್ರೌಢ ಶಾಲೆ ನೊಂದಣಿಗೆ ಹಾಗೂ ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಥೆಗಳು ಆನ್ಲೈನ್ ಮುಖಾಂತರ ಇಲಾಖಾ , https://schooleducation.karnataka.gov.in/ 58 ಉಲ್ಲೇಖಿತ (14) ರಲ್ಲಿ ಆಡಳಿತ ಮಂಡಳಿಗೆ ದಿನಾಂಕ:15-03-2024 ರವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಧಿಯನ್ನು ವಿಸ್ತರಿಸಿ ಕಾಲಾವಕಾಶ ಕಲ್ಪಿಸಲಾಗಿತ್ತು.
ಮುಂದುವರೆದು, 2024-25ನೇ ಸಾಲಿನ ಹೊಸ ಶಾಲಾ ನೊಂದಣಿಗೆ ಅವಧಿಯನ್ನು ವಿಸ್ತರಿಸುವಂತೆ ಸಲ್ಲಿಕೆಯಾದ ಮನವಿಗಳು ಹಾಗೂ ಉಲ್ಲೇಖಿತ (15)ರಲ್ಲಿ ಸರ್ಕಾರದಿಂದ ಏಕಕಡತದಲ್ಲಿ ಅನುಮೋದನೆಯಂತೆ 2024-25ನೇ ಸಾಲಿಗೆ ಹೊಸದಾಗಿ ಖಾಸಗಿ ಅನುದಾನರಹಿತ ಪೂರ್ವ ಪ್ರಾಥಮಿಕ / ಪ್ರಾಥಮಿಕ/ ಪ್ರೌಢ ಶಾಲೆ ನೊಂದಣಿಗೆ ಹಾಗೂ ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಥೆಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು :-04-09-2024 00 :21-09-20248 15 9 ಅವಕಾಶ ನೀಡಲಾಗಿದೆ.
ಈಗಾಗಲೇ 2024-25ನೇ ಸಾಲಿಗೆ ಹೊಸ ಶಾಲಾ ನೊಂದಣಿ ಮತ್ತು ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡ ಆಡಳಿತ ಮಂಡಳಿಗಳಿಗೆ ಹಾಗೂ ಹೊಸದಾಗಿ ಅರ್ಜಿಗಳನ್ನು ಸಲ್ಲಿಸುವ ಆಡಳಿತ ಮಂಡಳಿಗಳಿಗೂ ಈ ಅವಕಾಶ ಅನ್ವಯವಾಗುತ್ತದೆ.
ಉಚಿತ ಮತ್ತು ಕಡ್ಡಾಯ ಮಕ್ಕಳ ಹಕ್ಕು ಶಿಕ್ಷಣ ಕಾಯ್ದೆ-2009ರ ಷೆಡ್ಯೂಲ್ ನಂತೆ ಶಾಲೆಯು ಪ್ರತಿ ಶೈಕ್ಷಣಿಕ ವರ್ಷದಲ್ಲಿ 1 ರಿಂದ 5ನೇ ತರಗತಿಗಳಿಗೆ ಕನಿಷ್ಠ 800 ಗಂಟೆಗಳ ಬೋಧನಾ ಅವಧಿ ಹಾಗೂ 6 ರಿಂದ 8ನೇ ತರಗತಿಗಳಿಗೆ ಕನಿಷ್ಟ 1000 ಗಂಟೆಗಳ ಬೋಧನಾ ಅವಧಿ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ಸಲ್ಲಿಸಲು ಆಡಳಿತ ಮಂಡಳಿಗಳಿಗೆ ಅಂತಿಮ ಅವಕಾಶ ನೀಡಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ಕಾಲಾವಕಾಶವನ್ನು ಪುನಃ ವಿಸ್ತರಿಸಲಾಗುವುದಿಲ್ಲ ಎಂಬ ಅಂಶವನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.
ಈಗಾಗಲೇ 2024-25ನೇ ಶೈಕ್ಷಣಿಕ ಸಾಲು ಪ್ರಾರಂಭಬಾಗಿ ಎರಡು ತಿಂಗಳು ಕಳೆದಿರುವುದರಿಂದ ಹೊಸ ಶಾಲಾ ನೊಂದಣಿಗೆ ಸಲ್ಲಿಕೆಯಾಗುವ ಅರ್ಜಿಗಳ ಪರಿಶೀಲನ ನಿಗದಿಪಡಿಸಿದ ಕಾಲಾವಕಾಶವನ್ನು ಕಡಿತಗೊಳಿಸಲಾಗಿದ್ದು, ವೇಳಾಪಟ್ಟಿಯಲ್ಲಿ ನೀಡಿದಂತೆ ನಿಗದಿತ ಕಾಲಾವಧಿಯನ್ನು ಅರ್ಜಿಗಳನ್ನು ಇತ್ಯರ್ಥಪಡಿಸಲು ಅಗತ್ಯ ಕ್ರಮ ವಹಿಸುವುದು. ಈ ಹಿನ್ನೆಲೆಯಲ್ಲಿ ಉಪನಿರ್ದೇಶಕರ ಕಚೇರಿಯ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳು ತಮ್ಮ ಲಾಗಿನ್ಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ವಿಳಂಬಕ್ಕೆ ಅವಕಾಶ ನೀಡದೇ ಆಯಾ ದಿನವೇ ನಿಯಮಾನುಸಾರ ಪರಿಶೀಲಿಸಿ ಮುಂದಿನ ಹಂತಕ್ಕೆ ಸಲ್ಲಿಸುವುದು. ಉಪನಿರ್ದೇಶಕರು ತಮ್ಮ ಲಾಗಿನ್ ಸಲ್ಲಿಕೆಯಾದ ಅರ್ಜಿಗಳನ್ನು ಸಹ ಆಯಾ ದಿನವೇ ಪರಿಶೀಲಿಸಿ ಅಗತ್ಯವಿದ್ದಲ್ಲಿ ರೋಲ್ ಬ್ಯಾಕ್ ಮಾಡಲು, ಅರ್ಜಿಯನ್ನು ಅನುಮೋದನ ಅಥವಾ ತಿರಸ್ಕರಿಸಿ ಇತ್ಯರ್ಥಪಡಿಸಿದಲ್ಲಿ ಆಯಾ ದಿನವೇ ಡಿ.ಎಸ್.ಸಿ. ಮೂಲಕ ಅನುಮೋದಿಸಿ ಆದೇಶವನ್ನು ನೀಡಲು ಕ್ರಮವಹಿಸಲು ಸೂಚಿಸಿದೆ. ಯಾವುದೇ ಕಾರಣಕ್ಕೂ ಅರ್ಜಿಯನ್ನು ಪರಿಶೀಲಿಸಲು ವಿಳಂಬ ಮಾಡಿದಲ್ಲಿ ಅಥವಾ Overdue ಆಗಲು ಅವಕಾಶ ನೀಡಿದಲ್ಲಿ ಸಂಬಂಧಿಸಿದ ಉಪನಿರ್ದೇಶಕರು(ಆಡಳಿತ) ಇವರನ್ನೇ ಹೊಣೆಗಾರರನ್ನಾಗಿಸಲಾಗುವುದು.
ಪ್ರಸ್ತುತ 2024-25ನೇ ಸಾಲಿಗೆ ನೊಂದಣಿ ಕೋರಿ ಅರ್ಜಿ ಸಲ್ಲಿಸಲು ನೀಡಿದ ಕಾಲಾವಕಾಶದಲ್ಲಿ ಯಾವುದೇ ಶಾಲಾ ಆಡಳಿತ ಮಂಡಳಿಯ ಅರ್ಜಿಯು ತಿರಸ್ಕೃತಗೊಂಡಲ್ಲಿ ಅಥವಾ ದಾಖಲೆಗಳ ಕೊರತೆಯಿಂದ ಅರ್ಜಿ ಸಲ್ಲಿಸಲು ಅವಕಾಶವಾಗದಿದ್ದಲ್ಲಿ ಅಂತಹ ಆಡಳಿತ ಮಂಡಳಿಗಳು ದಿನಾಂಕ:- 25-09-2024 ರಿಂದ 2025-26ನೇ ಸಾಲಿಗೆ ಹೊಸಶಾಲಾ ನೋಂದಣಿಗೆ ಅರ್ಜಿ ಆಹ್ವಾನಿಸಿ ಬಿಡುಗಡೆ ಮಾಡುವ ಆನ್ ಲೈನ್ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಉಳಿದಂತೆ ಉಲ್ಲೇಖ(1) ರಿಂದ 14ರವರೆಗಿನ ಸುತ್ತೋಲೆಗಳಲ್ಲಿನ ಎಲ್ಲಾ ಅಂಶಗಳು ಯಥಾವತ್ತಾಗಿ ಮುಂದುವರೆಯುತ್ತವೆ.