ಬೆಂಗಳೂರು : ಸರ್ಕಾರಿ ಅಧಿಕಾರಿ/ನೌಕರರ ವೇತನ ಮತ್ತು ಭತ್ಯೆಗಳನ್ನು ಡಿಡಿಓರವರು ಸೆಳೆದು ವಿತರಿಸುವ ವ್ಯವಸ್ಥೆಯ ಬದಲು, ಸಂಬಂಧಿಸಿದ ನಿಯಂತ್ರಾಣಾಧಿಕಾರಿಗಳು (CO) ತಮ್ಮ ವ್ಯಾಪ್ತಿಯಲ್ಲಿನ ಡಿಡಿಓರವರ ಹಾಗೂ ಅವರ ವ್ಯಾಪ್ತಿಯಲ್ಲಿನ ಅಧಿಕಾರಿ/ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳನ್ನು ಸಂಚಿತವಾಗಿ. ಸೆಳೆದು ವಿತರಿಸುವ ವ್ಯವಸ್ಥೆಯನ್ನು ಖಜಾನೆ ಇಲಾಖೆಯಲ್ಲಿ, ಸೆಪ್ಟೆಂಬರ್ ತಿಂಗಳ ವೇತನದಿಂದ ಪ್ರಾಯೋಗಿಕವಾಗಿ,ಜಾರಿಗೆ ತರಲು ಸರ್ಕಾರವು ಆದೇಶಿಸಿದೆ.
ರಾಜ್ಯಮಟ್ಟದಲ್ಲಿ ಎಲ್ಲಾ ಸರ್ಕಾರಿ ನೌಕರರಿಗೆ ತಿಂಗಳ ಕೊನೆಯ ದಿನ [ಒಂದೇ ದಿನ ]ವೇತನ ಪಾವತಿಸುವ ಬಗ್ಗೆ ಸರ್ಕಾರದಿಂದ ಆದೇಶ ಮೊದಲು ಪ್ರಾಯೋಗಿಕವಾಗಿ ಖಜಾನೆ ಇಲಾಖೆಗೆ ಅನ್ವಯವಾಗುವಂತೆ ಆದೇಶವನ್ನು ಹೊರಡಿಸಲಾಗಿದೆ. ನಿಯಂತ್ರಣಾಧಿಕಾರಿಗಳ (CO) ಹಂತದಲ್ಲಿ ಅಧಿಕಾರಿ, ಸಿಬ್ಬಂದಿಗಳ ವೇತನ ಹಾಗೂ ವೇತನ ಸಂಬಂಧಿತ ಕೈಮುಗಳನ್ನು ಸೆಳೆದು ವಿತರಿಸುವ ಕುರಿತು.. ಆದೇಶವನ್ನು ಹೊರಡಿಸಿದೆ. ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ.
ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 80 (ಬಿ) ರಲ್ಲಿನ ಸೂಚನೆಗಳಂತೆ, ಮಾರ್ಚಿ ತಿಂಗಳನ್ನು ಹೊರತುಪಡಿಸಿ, ಉಳಿದ ತಿಂಗಳುಗಳ ನರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಆಯಾ ತಿಂಗಳ ಕೊನೆಯ ಕೆಲಸದ ದಿನಾಂಕದಂದು. ಮಾರ್ಚಿ ತಿಂಗಳ ವೇತನ ಮತ್ತು ಭತ್ಯೆಗಳನ್ನು ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಕೆಲಸದ ದಿನಾಂಕದಂದು ವಿತರಿಸಬೇಕಾಗಿರುತ್ತದೆ. ಕೆಲವೊಂದು ಡಿಡಿಓರವರು, ಕೆಲವೊಂದು ಕಾರಣಗಳಿಂದಾಗಿ, ನಿಗದಿತ ದಿನಾಂಕದಂದು ವೇತನ ಮತ್ತು ಭತ್ಯೆಗಳನ್ನು ಸೆಳೆದು ವಿತರಿಸುವಲ್ಲಿ ವಿಳಂಬವಾಗುತ್ತಿದ್ದು, ಇದರಿಂದ ಸರ್ಕಾರಿ ನೌಕರರು ನಿಗದಿತ ದಿನಾಂಕದಂದು ವೇತನ ಮತ್ತು ಭತ್ಯೆಗಳನ್ನು ಪಡೆಯಲು ಸಾಧ್ಯವಾಗದಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ನಿಗದಿತ ದಿನಾಂಕದಂದು ವೇತನ ಮತ್ತು ಭತ್ಯೆಗಳನ್ನು ಸೆಳೆಯದೇ ಇರುವುದರಿಂದ ಅನುದಾನದ ನಿರ್ವಹಣೆಯಲ್ಲಿಯು ವ್ಯತ್ಯಯವಾಗುತ್ತಿದೆ.
ಹೆಚ್ಚಿನ ಬಜೆಟ್ ನಿಯಂತ್ರಣ ಮತ್ತು ಲೆಕ್ಕ ಸಮನ್ವಯದ ದೃಷ್ಠಿಯಿಂದ ಹಾಗೂ ಬಿಲ್ಲುಗಳ ಪ್ರಮಾಣವನ್ನು ಕಡಿಮೆ ಮಾಡುವ ದೃಷ್ಠಿಯಿಂದ, ಪ್ರಸ್ತುತ ಡಿಡಿಓರವರು ಅವರ ವ್ಯಾಪ್ತಿಯಲ್ಲಿನ, ಸರ್ಕಾರಿ ಅಧಿಕಾರಿ/ ನೌಕರರ ವೇತನ ಮತ್ತು ಭತ್ಯೆಗಳನ್ನು ಸೆಳೆದು ವಿತರಿಸುವ ವ್ಯವಸ್ಥೆಯ ಬದಲು, ಸಂಬಂದಿಸಿದ ನಿಯಂತ್ರಾಣಾಧಿಕಾರಿಗಳು (CO) ತಮ್ಮ ವ್ಯಾಪ್ತಿಯಲ್ಲಿನ ಡಿಡಿಓರವರ ಹಾಗೂ ಅವರ ವ್ಯಾಪ್ತಿಯಲ್ಲಿನ ಅಧಿಕಾರಿ/ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳನ್ನು ಸೆಳೆದು ವಿತರಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರವು ಉದ್ದೇಶಿಸಿದೆ. ಪ್ರಾರಂಭದಲ್ಲಿ ಈ ವ್ಯವಸ್ಥೆಯನ್ನು ಖಜಾನೆ ಇಲಾಖೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು ನಂತರ ಈ ವ್ಯವಸ್ಥೆಯನ್ನು ಇತರೆ ಎಲ್ಲಾ ಇಲಾಖೆಗಳಿಗೆ ವಿಸ್ತರಿಸಲು ಯೋಜಿಸುವ ಸಲುವಾಗಿ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರಿ ಅಧಿಕಾರಿ/ನೌಕರರ ವೇತನ ಮತ್ತು ಭತ್ಯೆಗಳನ್ನು ಡಿಡಿಓರವರು ಸೆಳೆದು ವಿತರಿಸುವ ವ್ಯವಸ್ಥೆಯ ಬದಲು, ಸಂಬಂಧಿಸಿದ ನಿಯಂತ್ರಾಣಾಧಿಕಾರಿಗಳು (CO) ತಮ್ಮ ವ್ಯಾಪ್ತಿಯಲ್ಲಿನ ಡಿಡಿಓರವರ ಹಾಗೂ ಅವರ ವ್ಯಾಪ್ತಿಯಲ್ಲಿನ ಅಧಿಕಾರಿ/ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳನ್ನು ಸಂಚಿತವಾಗಿ. ಸೆಳೆದು ವಿತರಿಸುವ ವ್ಯವಸ್ಥೆಯನ್ನು ಖಜಾನೆ ಇಲಾಖೆಯಲ್ಲಿ, ಸೆಪ್ಟೆಂಬರ್ ತಿಂಗಳ ವೇತನದಿಂದ ಪ್ರಾಯೋಗಿಕವಾಗಿ,ಜಾರಿಗೆ ತರಲು ಸರ್ಕಾರವು ಆದೇಶಿಸಿದೆ.