ಹಾವೇರಿ : ಹಾವೇರಿಯಲ್ಲಿ ಶಾಲಾ ವಿದ್ಯಾರ್ಥಿನಿಯರಿಗೆ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಶಿಕ್ಷಕ ಜಗದೀಶ್ ಗೆ ಪೋಷಕರು ಹಾಗೂ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ.
ಸವಣೂರು ಪಟ್ಟಣದ ಸರ್ಕಾರಿ ಉರ್ದು ಉನ್ನತಿಕರಿಸದ ಶಾಲೆಯ ಶಿಕ್ಷಕನಿಗೆ ಥಳಿಸಿದ್ದಾರೆ.ಅಲ್ಲದೇ ಚಪ್ಪಲಿ ಹಾರ ಹಾಕಿ ಶಿಕ್ಷಕನನ್ನು ಸವಣೂರು ಠಾಣೆಗೆ ವಿದ್ಯಾರ್ಥಿನಿಯರ ಪೋಷಕರು ಕರೆತಂದಿದ್ದಾರೆ. ಧರ್ಮದೇಟು ನೀಡಿ ಜಗದೀಶ್ ನನ್ನು ಪೊಲೀಸರಿಗೆ ಪೋಷಕರು ಒಪ್ಪಿಸಿದ್ದಾರೆ








