ಬೆಂಗಳೂರು : ದಾವಣಗೆರೆಯಲ್ಲಿ ಎಸ್‌ಡಿಪಿಐನ್ನು ಲೈಟ್ಆಗಿ ತೆಗೆದುಕೊಂಡಿರಲಿಲ್ಲ. ಅದು ಪೊಲಿಟಿಕಲ್ ಪಾರ್ಟಿ ಅಲ್ಲ. ಮುಸ್ಲಿಂ ನಾಯಕರು ಕೆಲಸ ಮಾಡಿಲ್ಲ ಅನ್ನೋ ಬಗ್ಗೆ ನಾನು ಮಾತನಾಡಲ್ಲ. ನಮ್ಮ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಚೆನ್ನಾಗಿ ನಡೆಯುತ್ತಿವೆ. ಎಸ್ಡಿಪಿಐ ಓಟ್ ನಮಗೆ ಡೇಂಜರ್ ಆಗಿದೆ. ಇಷ್ಟು ಆಗಲಿದೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಎಸ್ಡಿಪಿಐ ಕೂಡ 12 ಸಾವಿರ ಓಟ್ ತೆಗೆದುಕೊಂಡಿದೆ. ಈ ಬಗ್ಗೆ ಸಿಎಂ ಕೂಡ ಮಾತಾನಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ನಮ್ಮಲ್ಲಿ ಯಾವುದೇ ಬದಲಾವಣೆ ಆಗಲ್ಲ. ಕೆಲವರು ಖುಷಿ ಆಗಬಹುದು. ಕೆಲವರಿಗೆ ಬೇಜಾರಾಗಬಹುದು. ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರದಲ್ಲೇ ಏನೂ ಆಗಲಿಲ್ಲ. ಈಗ ಏನಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಓಟ್ ಡಿಲೀಟ್ ಮಾಡಿದ್ರು. ಮಷಿನ್ ಕೂಡ ಸಮಸ್ಯೆ ಮಾಡಿದ್ರು. ಗೆಲ್ಲಲೇಬೇಕು ಅನ್ನೋ ಕಾರಣಕ್ಕೆ ಬಿಜೆಪಿ ಏನೇನೋ ಮಾಡಿದ್ರು ಎಂದು ಆರೋಪಿಸಿದರು.
ಅಸ್ಸಾಂ ಚುನಾವಣೆಯಲ್ಲಿ ಪಾರ್ಟಿ ಡ್ಯೂಟಿ ಮಾಡಿದ್ದೇನೆ. ಹೆಚ್ಚು ಸೀಟ್ ನಿರೀಕ್ಷೆ ಇತ್ತು.ಲೋಕಲ್ ಕೂಡ 50 ಹೇಳಿತ್ತು. ಡಿಲಿಮಿಟೇಷನ್ ಕಾರಣ ಆಯ್ತು. ಇನ್ನು ಕೇರಳ ನಂಬಿಕೆ ಇತ್ತು. 10 ವರ್ಷ ಆಗಿತ್ತು. ಜನ ಬದಲಾವಣೆ ಬಯಸಿದ್ರು. ಇವತ್ತು ದೊಡ್ಡ ಬೆಂಬಲ ಸಿಕ್ಕಿದೆ. ತಮಿಳುನಾಡು ಚುನಾವಣೆ ಆಶ್ಚರ್ಯ ಆಗಿದೆ. ಹೊಸ ಯುಗಾರಂಭವಾಗಿದೆ. ತಮಿಳುನಾಡು ರೀಡ್ ಮಾಡೋಕೆ ಆಗಲಿಲ್ಲ. 30, 40% ಓಟ್ ಹೋಗಬಹುದು ಅಂದುಕೊಂಡಿದ್ದೇವೆ. ಈ ಪ್ರಮಾಣದಲ್ಲಿ ಬದಲಾವಣೆ ನಂಬಿಕೆ ಇರಲಿಲ್ಲ ಎಂದರು.








