Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಆಸೆಗಳು ಈಡೇರಲು ಪ್ರತಿದಿನ 30 ಸೆಕೆಂಡ್ ಈ ಚಿತ್ರ ವೀಕ್ಷಿಸಿ

BIG NEWS : ಕೊಟ್ಟ ಸಾಲ ಮರಳಿ ಬರದಿದ್ದಕ್ಕೆ, ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ!

SHOCKING : ಮೈಸೂರಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ನೇಣು ಬಿಗಿದು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ವಿಮೆ’ ತಿರಸ್ಕರಿಸಿದ ಮ್ಯಾಗಮಾ ವಿಮಾ ಕಂಪನಿಗೆ ರೂ. 1.80 ಲಕ್ಷ ದಂಡ : ಗ್ರಾಹಕರ ಆಯೋಗ ಆದೇಶ.!
KARNATAKA

BIG NEWS : `ವಿಮೆ’ ತಿರಸ್ಕರಿಸಿದ ಮ್ಯಾಗಮಾ ವಿಮಾ ಕಂಪನಿಗೆ ರೂ. 1.80 ಲಕ್ಷ ದಂಡ : ಗ್ರಾಹಕರ ಆಯೋಗ ಆದೇಶ.!

By kannadanewsnow57

ಧಾರವಾಡ : ವಿಮೆ ತಿರಸ್ಕರಿಸಿದ ಮ್ಯಾಗಮಾ ವಿಮಾ ಕಂಪನಿಗೆ ರೂ. 1 ಲಕ್ಷ 80 ಸಾವಿರಗಳ ದಂಡ ವಿಧಿಸಿ ಮತ್ತು ಪರಿಹಾರ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶ ಹೊರಡಿಸಿದೆ.

ಧಾರವಾಡದ ಎಮ್ಮಿಕೇರಿಯ ನಾಗರಾಜ ಗೌರಮ್ಮನವರ ಎಂಬುವವರು ತಮ್ಮ ವಾಹನವನ್ನು ಎದುರುದಾರರ ಬಳಿ ದಿ:18/06/2022ರಿಂದ 17/06/2027ರವರೆಗೆ ವಿಮಾ ಪಾಲಸಿಯನ್ನು ಮಾಡಿಸಿದ್ದರು. ದಿ:24/04/2023ರಂದು ವಾಹನವು ಶಿಗ್ಗಾವದ ಸಮೀಪ ಅಪಘಾತಕ್ಕೀಡಾಗಿತ್ತು. ಅದರ ರಿಪೇರಿಯ ಅಂದಾಜು ಖರ್ಚು ರೂ.1,24,596/- ಆಗಿದ್ದು ಅದನ್ನು ಕೊಡುವಂತೆ ಎದುರುದಾರರಿಗೆ ವಿನಂತಿಸಿದ್ದರು. ದಿ:07/07/2023ರಂದು ಎದುರುದಾರರು ಅದಕ್ಕೆ ಸಂಬಂಧಪಟ್ಟಂತಹ ದಾಖಲೆಗಳನ್ನು ಒದಗಿಸುವಂತೆ ದೂರುದಾರರಿಗೆ ಕೇಳಿದ್ದರು. ಅದೇ ರೀತಿ ದೂರುದಾರರು ದಾಖಲೆಗಳನ್ನು ಒದಗಿಸಿದರೂ ಅವರಿಗೆ ವಿಮಾ ಹಣವನ್ನು ಕೊಡದೇ ಮತ್ತು ಅವರ ಕ್ಲೇಮನ್ನು ನಿರಾಕರಿಸಿದೇ ಸೇವಾ ನ್ಯೂನ್ಯತೆ ಎಸಗಿರುತ್ತಾರೆ. ವಿಮಾ ಕಂಪನಿಯವರು ಈ ನಡಾವಳಿಕೆಯಿಂದ ಬೇಸತ್ತ ದೂರುದಾರರು ಅವರ ಮೇಲೆ ಸೂಕ್ತ ಕ್ರಮ ಕೈಗೊಂಡು ಪರಿಹಾರ ಕೊಡಿಸುವಂತೆ ಧಾರವಾಡದ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:18/07/2024ರಂದು ದೂರನ್ನು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ದೂರುದಾರರ ವಾಹನದ ವಿಮಾ ಪಾಲಸಿ ಅಪಘಾತ ಕಾಲಕ್ಕೆ ಚಾಲ್ತಿಯಿದ್ದು ವಾಹನ ದಿ:24/04/2023ರಂದು ಅಪಘಾತವಾಗಿರುವುದು ದೂರುದಾರರು ದಾಖಲಿಸಿದ ಪೋಲಿಸ್ ವರಧಿ ಮತ್ತು ಇತರ ದಾಖಲೆಗಳ ಮುಖಾಂತರ ಕಂಡುಬಂದಿರುತ್ತದೆ. ಎದುರುದಾರರು ಕೇಳಿದಂತಹ ದಾಖಲೆಗಳನ್ನು ದೂರುದಾರರು ಕೊಟ್ಟಿರುವುದು ಸಹ ಕಂಡುಬಂದಿರುತ್ತದೆ. ಇದಾದ 5-6 ತಿಂಗಳಾದರೂ ಎದುರುದಾರರು ದೂರುದಾರರ ವಾಹನದ ರಿಪೇರಿ ಹಣವನ್ನು ಕೊಡದೇ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ. ದೂರುದಾರರ ವಾಹನದ ರಿಪೇರಿ ಹಣ ರೂ.1,24,000/- ಆದೇಶವಾದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ಕೊಡಬೇಕು ತಪ್ಪಿದ್ದಲ್ಲಿ ರೂ.1,24,000/-ಗಳ ಮೇಲೆ ವಾರ್ಷಿಕ ಶೇ8% ರಂತೆ ಬಡ್ಡಿ ಲೆಕ್ಕ ಹಾಕಿ ದಿ:18/07/2024ರಿಂದ ಹಣ ಸಂದಾಯವಾಗುವವರೆಗೆ ದೂರುದಾರರಿಗೆ ಕೊಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ. ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕಾಗಿ ರೂ.50 ಸಾವಿರ ಪರಿಹಾರ ಮತ್ತು ರೂ.10 ಸಾವಿರ ಪ್ರಕರಣದ ಖರ್ಚು ವೆಚ್ಚವನ್ನು ಕೊಡುವಂತೆ ಎದುರುದಾರ ಮ್ಯಾಗಮಾ ವಿಮಾ ಕಂಪನಿಗೆ ಆಯೋಗ ಆದೇಶಿಸಿದೆ.

BIG NEWS : Rejected 'Insurance' to Magama Insurance Company Rs. 1.80 lakh fine: Consumer commission order.! BIG NEWS : `ವಿಮೆ' ತಿರಸ್ಕರಿಸಿದ ಮ್ಯಾಗಮಾ ವಿಮಾ ಕಂಪನಿಗೆ ರೂ. 1.80 ಲಕ್ಷ ದಂಡ : ಗ್ರಾಹಕರ ಆಯೋಗ ಆದೇಶ.!
Share. Facebook Twitter LinkedIn WhatsApp Email

Related Posts

ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಆಸೆಗಳು ಈಡೇರಲು ಪ್ರತಿದಿನ 30 ಸೆಕೆಂಡ್ ಈ ಚಿತ್ರ ವೀಕ್ಷಿಸಿ

3 Mins Read

BIG NEWS : ಕೊಟ್ಟ ಸಾಲ ಮರಳಿ ಬರದಿದ್ದಕ್ಕೆ, ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ!

2 Mins Read

SHOCKING : ಮೈಸೂರಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ನೇಣು ಬಿಗಿದು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ!

2 Mins Read
Recent News

ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಆಸೆಗಳು ಈಡೇರಲು ಪ್ರತಿದಿನ 30 ಸೆಕೆಂಡ್ ಈ ಚಿತ್ರ ವೀಕ್ಷಿಸಿ

BIG NEWS : ಕೊಟ್ಟ ಸಾಲ ಮರಳಿ ಬರದಿದ್ದಕ್ಕೆ, ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ!

SHOCKING : ಮೈಸೂರಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ನೇಣು ಬಿಗಿದು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ!

ಬಿಡದಿ ಟೌನ್ ಶಿಪ್ ಎಂದರೆ ಲೂಟಿ ಸ್ಕೀಮ್ : ಸಿಎಂ ಡಿಕೆ ಶಿವಕುಮಾರ್ ವಿರುದ್ಧ HD ಕುಮಾರಸ್ವಾಮಿ ವಾಗ್ದಾಳಿ

State News
KARNATAKA

ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಆಸೆಗಳು ಈಡೇರಲು ಪ್ರತಿದಿನ 30 ಸೆಕೆಂಡ್ ಈ ಚಿತ್ರ ವೀಕ್ಷಿಸಿ

By ವಸಂತ ಬಿ ಈಶ್ವರಗೆರೆ KARNATAKA 3 Mins Read

ನಿಮ್ಮ ಕನಸುಗಳನ್ನು ನನಸಾಗಿಸಲು ನೀವು ಬಯಸಿದರೆ, ನಿಮಗೆ ಮೊದಲನೆಯದು ನಂಬಿಕೆ. ನಾವು ದೃಢಸಂಕಲ್ಪ ಮತ್ತು ಆತ್ಮವಿಶ್ವಾಸವನ್ನು ಹೊಂದಿದ್ದರೆ ಮಾತ್ರ ನಮ್ಮ…

BIG NEWS : ಕೊಟ್ಟ ಸಾಲ ಮರಳಿ ಬರದಿದ್ದಕ್ಕೆ, ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ!

SHOCKING : ಮೈಸೂರಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ನೇಣು ಬಿಗಿದು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ!

ಬಿಡದಿ ಟೌನ್ ಶಿಪ್ ಎಂದರೆ ಲೂಟಿ ಸ್ಕೀಮ್ : ಸಿಎಂ ಡಿಕೆ ಶಿವಕುಮಾರ್ ವಿರುದ್ಧ HD ಕುಮಾರಸ್ವಾಮಿ ವಾಗ್ದಾಳಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.