ನವದೆಹಲಿ : ಕಳೆದ ಎರಡು ದಿನಗಳ ಹಿಂದೆ ರಾಘವ್ ಚೆಡ್ಡ ಸೇರಿದಂತೆ 7 ಜನ ಸಂಸದರು ಆಪ್ ಪಕ್ಷಕ್ಕೆ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷವನ್ನು ಸೇರಿದ್ದರು. ಇದೀಗ ಬಿಜೆಪಿ ಜೊತೆಗೆ ಆಪ್ ನ 7 ಸಂಸದರು ವಿಲೀನಕ್ಕೆ ರಾಜ್ಯಸಭಾ ಸಭಾಪತಿ ಒಪ್ಪಿಗೆ ಸೂಚಿಸಿದ್ದಾರೆ.
ರಾಜ್ಯಸಭೆಯ ಸಭಾಪತಿ ಸಿಪಿ ರಾಧಾಕೃಷ್ಣನ್ ಅವರು 7 ಸಂಸದರು ಬಿಜೆಪಿ ಪಕ್ಷಕ್ಕೆ ವಿಲೀನಕ್ಕೆ ಸಮ್ಮತಿ ಸೂಚಿಸಿದ್ದಾರೆ. ರಾಘವ್ ಚಡ್ಡಾ ಸೇರಿದಂತೆ ಏಳು ಸಂಸದರ ಮನವಿಗೆ ಒಪ್ಪಿಗೆ ನೀಡಿದ್ದಾರೆ ಹಾಗಾಗಿ ರಾಜ್ಯಸಭೆಯಲ್ಲಿ ಬಿಜೆಪಿಯ ಬಲ 113ಕ್ಕೆ ಏರಿದೆ. 7 ಸಂಸದರನ್ನು ಅನರ್ಹಗೊಳಿಸುವುದಕ್ಕೆ ಆಪ್ ಮುಂದಾಗಿತ್ತು. ಆದರೆ ಆ ಏಳು ಜನ ಸಂಸದರು ಬಿಜೆಪಿ ಜೊತೆಗೆ ವಿಲೀನರಾಗಿದ್ದಾರೆ. ಹಾಗಾಗಿ ರಾಜ್ಯಸಭಾ ಸಭಾಪತಿ ಸಿಪಿ ರಾಧಾಕೃಷ್ಣನ್ ಸಮ್ಮತಿ ನೀಡಿದ್ದಾರೆ.








