ಬೆಂಗಳೂರು: ನಾಳೆಯಿಂದ ಬುಧವಾರದವರೆಗೂ ಮತ್ತೆ ರಾಜ್ಯದಲ್ಲಿ ಮಳೆಯಾಗಲಿದೆ ಎನ್ನಲಾಗಿದೆ. ಮಳೆ ಮುಂದಿನ ನಾಲ್ಕುಗಳ ಕಾಲ ಮತ್ತೆ ಬರುವುದರಿಂದ ರಾಜ್ಯದ ನಾನಾ ಭಾಗಗಳಲ್ಲಿ ಮತ್ತೆ ಪ್ರವಾಹದ ಸನ್ನಿವೇಶ ನಿರ್ಮಾಣವಾಗಲಿದೆ ಎನ್ನುವ ಆತಂಕ ನಿರ್ಮಾಣವಾಗಿದೆ. ಇದಲ್ಲದೇ ಬೆಂಗಳೂರು-ಮೈಸೂರು ನಡುವೆ ನೂತನವಾಗಿ ನಿರ್ಮಾಣವಾಗುತ್ತಿರುವ ನೂತನ ಹೆದ್ದಾರಿ ಕೂಡ ಮಳೆಯಿಂದ ಮತ್ತೆ ಅವೃತವಾಗುವ ಆಂತಕ ನಿರ್ಮಾಣವಾಗಿದೆ.
ಈ ನಡುವೆರಾಮನಗರ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ಸಂತೋಷ್ ಬಾಬು ಕೂಡ ಈ ನಾಲ್ಕು ದಿನಗಳಲ್ಲಿ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸುವುದಿದ್ದರೆ ಸೂಕ್ತ ಮುಂಜಾಗ್ರತೆ ವಹಿಸುವುದು ಒಳಿತು ಅಂತ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಮತ್ತೆ ಮಳೆ ಅಬ್ಬರ ಮುಂದಿನ ಮೂರು ದಿನ ಅಬ್ಬರಿಸಲಿದ್ದು, ವಾಹನ ಸವಾರರಿಗೆ ತೊಂದರೆಯಾಗುವುದರಲ್ಲಿ ಸಂಶವಿಲ್ಲ.