ನವದೆಹಲಿ : ಇಂದು ದೇಶದಾದ್ಯಂತ ರಾಮನವಮಿ ಹಿನ್ನೆಲೆ ದೇಶದಾದ್ಯಂತ ರಾಮನವಮಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಇದೇ ವೇಳೆ ಶ್ರೀಲಂಕಾ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಹಿಂತಿರುಗುವ ವೇಳೆ ಪ್ರಧಾನಿ ನರೇಂದ್ರ ಮೋದಿ ವಿಮಾನದಿಂದಲೇ ರಾಮಸೇತು ದರ್ಶನ ಪಡೆದಿದ್ದಾರೆ.
ರಾಮ ನವಮಿಯಂದೇ ಪ್ರಧಾನಿ ಮೋದಿ ರಾಮಸೇತು ದರ್ಶನ ಪಡೆದಿದ್ದು, ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.ಸ್ವಲ್ಪ ಸಮಯದ ಹಿಂದೆ ಶ್ರೀಲಂಕಾದಿಂದ ಮರಳುವಾಗ ರಾಮಸೇತುವಿನ ದರ್ಶನ ಪಡೆಯುವ ಸೌಭಾಗ್ಯ ದೊರಕಿತು. ದೈವಿಕ ನಿದರ್ಶನ ಎಂಬಂತೆ ಅಯೋಧ್ಯೆಯಲ್ಲಿ ಸೂರ್ಯ ತಿಲಕದ ಸಂದರ್ಭದಲ್ಲೇ ಈ ದರ್ಶನ ಪಡೆದಿದ್ದೇನೆ. ಶ್ರೀರಾಮ ದೇವರು ನಮ್ಮೆಲ್ಲರನ್ನು ಒಗ್ಗೂಡಿಸುವ ಶಕ್ತಿಯಾಗಿದ್ದು, ದೇವರ ಆಶೀರ್ವಾದ ಸದಾ ಇರಲಿ ಎಂದು ಬರೆದುಕೊಂಡಿದ್ದಾರೆ.
आज रामनवमी के पावन अवसर पर श्रीलंका से वापस आते समय आकाश से रामसेतु के दिव्य दर्शन हुए। ईश्वरीय संयोग से मैं जिस समय रामसेतु के दर्शन कर रहा था, उसी समय मुझे अयोध्या में रामलला के सूर्य तिलक के दर्शन का भी सौभाग्य मिला। मेरी प्रार्थना है, हम सभी पर प्रभु श्रीराम की कृपा बनी रहे। pic.twitter.com/trG5fgfv5f
— Narendra Modi (@narendramodi) April 6, 2025