ಬೆಂಗಳೂರು : ಇತ್ತೀಚಿಗೆ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಣೆಗೆ 200 ರೂಪಾಯಿ ಟಿಕೆಟ್ ದರ ನಿಗದಿ ಮಾಡಿ ಮಹತ್ವದ ಆದೇಶ ಹೊರಡಿಸಿತ್ತು. ಇದೀಗ ಈ ವಿಚಾರವಾಗಿ, ಸಿನಿಮಾ ಟಿಕೆಟ್ಗೆ 200 ದರ ಮಿತಿ ಪ್ರಶ್ನಿಸಿ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ. ವಾದ ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿ ಆದೇಶ ಹೊರಡಿಸಿತು.
ಸಿನಿಮಾ ಟಿಕೆಟ್ ದರ 200 ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪರವಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಮಂಡಳಿಯ ಮನವಿಯ ಮೇರೆಗೆ ಸರ್ಕಾರ ನಿರ್ಧರಿಸಿದೆ ಎಂದು ವಾದ ಮಂಡಿಸಲಾಯಿತು. ಈ ವೇಳೆ ಮಂಡಳಿ ಅರ್ಜಿಗೆ ಅರ್ಜಿದಾರರಿಂದ ತಕರಾರು ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡು ಕಡೆ ವಾದ ಆಲಿಸಿ ಹೈಕೋರ್ಟ್ ಇದೀಗ ಆದೇಶ ಕಾಯ್ದಿರಿಸಿದೆ. ನ್ಯಾ.ರವಿ ವಿ.ಹೊಸಮನಿ ಅವರಿದ್ದ ಪೀಠ ಆದೇಶ ಕಾಯ್ದಿರಿಸಿ ಆದೇಶ ಹೊರಡಿಸಿದೆ.
ಹೊಂಬಾಳೆ ಫಿಲಂ ಪರ ಹಿರಿಯ ವಕೀಲ ಧ್ಯಾನ್ ಚಿನಪ್ಪ ಇಂದು ಹೈಕೋರ್ಟ್ ನಲ್ಲಿ ವಾದಿಸಿದರು.ಹೊಂಬಾಳೆ ಫಿಲಂ ನಿರ್ಮಾಪಕರಾಗಿದ್ದು ಕಾಂತಾರದಂತಹ ಚಿತ್ರ ನಿರ್ಮಾಣ ಮಾಡಿದ್ದಾರೆ. ಟಿಕೆಟ್ ದರ 200 ರೂಪಾಯಿ ನಿಗದಿಸಲಾಗಿದೆ.ಇದು ವಿವೇಚನೆ ಇಲ್ಲದೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಸಿನಿಮಾ ನಿರ್ಮಿಸಲು ಎಷ್ಟೆಲ್ಲಾ ಶ್ರಮ ಮತ್ತು ಬಂಡವಾಳ ಬೇಕಾಗುತ್ತದೆ. ಅಂಕಿ ಅಂಶ ಸಂಗ್ರಹಿಸದೆ ಸರ್ಕಾರದ ಸ್ವೇಚ್ಚೆಯ ನಿರ್ಧಾರವಾಗಿದೆ.ದರ ನಿಗದಿಪಡಿಸಲು ನಿಯಮ 55ರ ಅಡಿಯಲ್ಲಿ ಅವಕಾಶ ಇಲ್ಲ ಟಿಕೆಟ್ ದರಮಿತಿ ಆದೇಶಕ್ಕೆ ತಡೆ ನೀಡಲು ಧ್ಯಾನ್ ಚಿನಪ್ಪ ಮನವಿ ಮಾಡಿದರು.
ಇನ್ನು ಅರ್ಜಿದಾರರ ಪರವಾಗಿ ಮತ್ತೋರ್ವ ಹಿರಿಯ ವಕೀಲ ಡಿ.ಆರ್ ಶಂಕರ್ ವಾದಿಸಿದರು ಕಾಯ್ದೆಯಲ್ಲಿ ಅವಕಾಶವಿಲ್ಲದಿದ್ದರು ದರ ಮಿತಿಯ ನಿಯಮ ರೂಪಿಸಲಾಗಿದೆ ಇದು ಅರ್ಜಿದಾರರಿಗಿರುವ ಹಕ್ಕುಗಳನ್ನು ಉಲ್ಲಂಘಿಸಿದಂತಾಗಿದೆ ಹೀಗಾಗಿ ಸರ್ಕಾರದ ದರ ನಿಗದಿ ಆದೇಶಕ್ಕೆ ತಡೆ ನೀಡುವಂತೆ ಅವರು ಸಹ ಮನವಿ ಮಾಡಿದರು. ಎರಡು ಕಡೆ ವಾದ ಆಲಿಸಿ ಹೈಕೋರ್ಟ್ ಇದೀಗ ಆದೇಶ ಕಾಯ್ದಿರಿಸಿದೆ. ನ್ಯಾ.ರವಿ ವಿ.ಹೊಸಮನಿ ಅವರಿದ್ದ ಪೀಠ ಆದೇಶ ಕಾಯ್ದಿರಿಸಿ ಆದೇಶ ಹೊರಡಿಸಿದೆ.