Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮೇ 15ಕ್ಕೆ ಡಿ.ಕೆ.ಶಿವಕುಮಾರ್ `CM’ ಆಗೋದು ಪಕ್ಕಾ: ಶಾಸಕ ಇಕ್ಬಾಲ್ ಹುಸೇನ್ ಹೊಸ ಬಾಂಬ್.!

28/04/2026 2:24 PM

BIG NEWS : ರಾಜ್ಯದಲ್ಲಿ `KPME’ ನೋಂದಣಿ ಇಲ್ಲದೆ ಕ್ಲಿನಿಕ್ ಆರಂಭಿಸಿದರೆ ದಂಡ : ನಕಲಿ ವೈದ್ಯರ ವಿರುದ್ಧ `FIR’ ಫಿಕ್ಸ್.!

28/04/2026 2:19 PM

ರಾಜ್ಯದ ಗ್ರಾ.ಪಂ `PDO’ಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ, ಇನ್ಮುಂದೆ ಕಚೇರಿಯಲ್ಲಿ ಇರಲೇಬೇಕು : ಸರ್ಕಾರದಿಂದ ಮಹತ್ವದ ಆದೇಶ

28/04/2026 2:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ `KPME’ ನೋಂದಣಿ ಇಲ್ಲದೆ ಕ್ಲಿನಿಕ್ ಆರಂಭಿಸಿದರೆ ದಂಡ : ನಕಲಿ ವೈದ್ಯರ ವಿರುದ್ಧ `FIR’ ಫಿಕ್ಸ್.!
KARNATAKA

BIG NEWS : ರಾಜ್ಯದಲ್ಲಿ `KPME’ ನೋಂದಣಿ ಇಲ್ಲದೆ ಕ್ಲಿನಿಕ್ ಆರಂಭಿಸಿದರೆ ದಂಡ : ನಕಲಿ ವೈದ್ಯರ ವಿರುದ್ಧ `FIR’ ಫಿಕ್ಸ್.!

By kannadanewsnow5728/04/2026 2:19 PM

ವೈದ್ಯಕೀಯ ಪದವಿ ಪಡೆದ ನಂತರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳದೇ ಕ್ಲಿನಿಕ್ ಅಥವಾ ಆಸ್ಪತ್ರೆಗಳನ್ನು ಆರಂಭಿಸುವ ವೈದ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.

ಮಂಗಳವಾರ ನಗರದ ನೂತನ ಜಿಲ್ಲಾಡಳಿತ ಭವನದ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಜಿಲ್ಲಾ ನೋಂದಣಿ ಮತ್ತು ಕುಂದುಕೊರತೆಗಳ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೋಂದಣಿ ಕಡ್ಡಾಯ, ಉಲ್ಲಂಘಿಸಿದರೆ ದಂಡ

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ಮತ್ತು 2009ರ ತಿದ್ದುಪಡಿ ನಿಯಮಗಳ ಪ್ರಕಾರ, ಯಾವುದೇ ವೈದ್ಯರು ಕ್ಲಿನಿಕ್, ಪಾಲಿ ಕ್ಲಿನಿಕ್, ನರ್ಸಿಂಗ್ ಹೋಮ್ ಅಥವಾ ಪ್ರಯೋಗಾಲಯಗಳನ್ನು ಆರಂಭಿಸುವ ಮೊದಲು ಜಿಲ್ಲಾಧಿಕಾರಿಗಳಿಂದ ಕಡ್ಡಾಯವಾಗಿ ಕೆ.ಪಿ.ಎಂ.ಇ ನೋಂದಣಿ ಪ್ರಮಾಣಪತ್ರ ಪಡೆಯಬೇಕು. ನೋಂದಣಿ ಮಾಡಿಕೊಳ್ಳದೆ ಅಥವಾ ನವೀಕರಣ ಮಾಡದೆ ಸಂಸ್ಥೆ ನಡೆಸುತ್ತಿದ್ದರೆ, ಅಂತಹ ಕೇಂದ್ರಗಳಿಗೆ ಪ್ರತಿ ವರ್ಷಕ್ಕೆ 25,000 ರೂ.ಗಳಂತೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ ಅವರು, ಕಾಯ್ದೆಯ ಕಲಂ 19, 20, 21 ಹಾಗೂ 22 ರಡಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

*ನಕಲಿ ವೈದ್ಯರ ವಿರುದ್ಧ ಎಫ್‌ಐಆರ್:*

ಜಿಲ್ಲೆಯಲ್ಲಿ ಅಧಿಕೃತ ವೈದ್ಯಕೀಯ ಪದವಿ ಇಲ್ಲದೆ ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ನಕಲಿ ವೈದ್ಯರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಅಂತಹವರ ವಿರುದ್ಧ ನೇರವಾಗಿ ಎಫ್.ಐ.ಆರ್ ದಾಖಲಿಸಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

*ಕಟ್ಟಡ ಮಾಲೀಕರಿಗೆ ಸೂಚನೆ:*

ತಮ್ಮ ಮನೆ ಅಥವಾ ಮಳಿಗೆಗಳನ್ನು ಆಸ್ಪತ್ರೆ, ಕ್ಲಿನಿಕ್ ಅಥವಾ ಲ್ಯಾಬ್‌ಗಳಿಗೆ ಬಾಡಿಗೆ ನೀಡುವ ಮುನ್ನ ಮಾಲೀಕರು ಎಚ್ಚರಿಕೆ ವಹಿಸಬೇಕು. ಬಾಡಿಗೆದಾರರ ಅಧಿಕೃತ ವೈದ್ಯಕೀಯ ಪ್ರಮಾಣಪತ್ರಗಳನ್ನು ಪರಿಶೀಲಿಸಿದ ನಂತರವೇ ಬಾಡಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯ ಆರೋಗ್ಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಖಾತ್ರಿಪಡಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಆರೋಗ್ಯ ಅಧಿಕಾರಿಗಳು, ನೋಂದಣಿ ಮತ್ತು ಕುಂದು ಕೊರತೆ ಪರಿಹಾರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

BIG NEWS: Penalty if you start a clinic without `KPME' registration in the state: `FIR' filed against fake doctors!
Share. Facebook Twitter LinkedIn WhatsApp Email

Related Posts

BREAKING : ಮೇ 15ಕ್ಕೆ ಡಿ.ಕೆ.ಶಿವಕುಮಾರ್ `CM’ ಆಗೋದು ಪಕ್ಕಾ: ಶಾಸಕ ಇಕ್ಬಾಲ್ ಹುಸೇನ್ ಹೊಸ ಬಾಂಬ್.!

28/04/2026 2:24 PM1 Min Read

ರಾಜ್ಯದ ಗ್ರಾ.ಪಂ `PDO’ಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ, ಇನ್ಮುಂದೆ ಕಚೇರಿಯಲ್ಲಿ ಇರಲೇಬೇಕು : ಸರ್ಕಾರದಿಂದ ಮಹತ್ವದ ಆದೇಶ

28/04/2026 2:11 PM1 Min Read

ಬೇಸಿಗೆಯ ಬಿಸಿಲಿಗೆ ‘ಬ್ರೇಕ್’ ಹಾಕಿ : ದೇಹವನ್ನು ಒಳಗಿನಿಂದ ತಂಪಾಗಿರಿಸಲು ತಿನ್ನಲೇಬೇಕು ಈ 7 ಹಣ್ಣುಗಳು.!

28/04/2026 1:51 PM2 Mins Read
Recent News

BREAKING : ಮೇ 15ಕ್ಕೆ ಡಿ.ಕೆ.ಶಿವಕುಮಾರ್ `CM’ ಆಗೋದು ಪಕ್ಕಾ: ಶಾಸಕ ಇಕ್ಬಾಲ್ ಹುಸೇನ್ ಹೊಸ ಬಾಂಬ್.!

28/04/2026 2:24 PM

BIG NEWS : ರಾಜ್ಯದಲ್ಲಿ `KPME’ ನೋಂದಣಿ ಇಲ್ಲದೆ ಕ್ಲಿನಿಕ್ ಆರಂಭಿಸಿದರೆ ದಂಡ : ನಕಲಿ ವೈದ್ಯರ ವಿರುದ್ಧ `FIR’ ಫಿಕ್ಸ್.!

28/04/2026 2:19 PM

ರಾಜ್ಯದ ಗ್ರಾ.ಪಂ `PDO’ಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ, ಇನ್ಮುಂದೆ ಕಚೇರಿಯಲ್ಲಿ ಇರಲೇಬೇಕು : ಸರ್ಕಾರದಿಂದ ಮಹತ್ವದ ಆದೇಶ

28/04/2026 2:11 PM

ಬೇಸಿಗೆಯ ಬಿಸಿಲಿಗೆ ‘ಬ್ರೇಕ್’ ಹಾಕಿ : ದೇಹವನ್ನು ಒಳಗಿನಿಂದ ತಂಪಾಗಿರಿಸಲು ತಿನ್ನಲೇಬೇಕು ಈ 7 ಹಣ್ಣುಗಳು.!

28/04/2026 1:51 PM
State News
KARNATAKA

BREAKING : ಮೇ 15ಕ್ಕೆ ಡಿ.ಕೆ.ಶಿವಕುಮಾರ್ `CM’ ಆಗೋದು ಪಕ್ಕಾ: ಶಾಸಕ ಇಕ್ಬಾಲ್ ಹುಸೇನ್ ಹೊಸ ಬಾಂಬ್.!

By kannadanewsnow5728/04/2026 2:24 PM KARNATAKA 1 Min Read

ರಾಮನಗರ: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರಮಾಪ್ತ ಶಾಸಕ…

BIG NEWS : ರಾಜ್ಯದಲ್ಲಿ `KPME’ ನೋಂದಣಿ ಇಲ್ಲದೆ ಕ್ಲಿನಿಕ್ ಆರಂಭಿಸಿದರೆ ದಂಡ : ನಕಲಿ ವೈದ್ಯರ ವಿರುದ್ಧ `FIR’ ಫಿಕ್ಸ್.!

28/04/2026 2:19 PM

ರಾಜ್ಯದ ಗ್ರಾ.ಪಂ `PDO’ಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ, ಇನ್ಮುಂದೆ ಕಚೇರಿಯಲ್ಲಿ ಇರಲೇಬೇಕು : ಸರ್ಕಾರದಿಂದ ಮಹತ್ವದ ಆದೇಶ

28/04/2026 2:11 PM

ಬೇಸಿಗೆಯ ಬಿಸಿಲಿಗೆ ‘ಬ್ರೇಕ್’ ಹಾಕಿ : ದೇಹವನ್ನು ಒಳಗಿನಿಂದ ತಂಪಾಗಿರಿಸಲು ತಿನ್ನಲೇಬೇಕು ಈ 7 ಹಣ್ಣುಗಳು.!

28/04/2026 1:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.