Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಪಾಕಿಸ್ತಾನದ ಮನವಿಗೆ ಮಣಿದ ಟ್ರಂಪ್: ಇರಾನ್ ಜೊತೆಗಿನ ಕದನ ವಿರಾಮ ವಿಸ್ತರಣೆ, ಆದರೆ ದಿಗ್ಬಂಧನ ಮುಂದುವರಿಕೆ!

22/04/2026 6:56 AM

BIG NEWS : ರಾಜ್ಯದಲ್ಲಿ `ಭೂ ಪರಿವರ್ತನೆ’ಗೆ ಇನ್ನು ಕಾಯಬೇಕಿಲ್ಲ: 30 ದಿನಗಳಲ್ಲಿ ನಿರ್ಧಾರವಾಗದಿದ್ದರೆ ಸ್ವಯಂಚಾಲಿತ ಅನುಮೋದನೆ.!

22/04/2026 6:56 AM

ಕಂಪನಿ ಕ್ರೆಡಿಟ್ ಕಾರ್ಡ್‌ನಿಂದ 27 ಲಕ್ಷ ರೂ. ಸ್ವಾಹಾ: ಬಾಸ್‌ಗೆ ಅಶ್ಲೀಲ ಫೋಟೋ ಕಳುಹಿಸಿದ ಬೆಂಗಳೂರು ಟೆಕ್ಕಿ!

22/04/2026 6:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ `ಭೂ ಪರಿವರ್ತನೆ’ಗೆ ಇನ್ನು ಕಾಯಬೇಕಿಲ್ಲ: 30 ದಿನಗಳಲ್ಲಿ ನಿರ್ಧಾರವಾಗದಿದ್ದರೆ ಸ್ವಯಂಚಾಲಿತ ಅನುಮೋದನೆ.!
KARNATAKA

BIG NEWS : ರಾಜ್ಯದಲ್ಲಿ `ಭೂ ಪರಿವರ್ತನೆ’ಗೆ ಇನ್ನು ಕಾಯಬೇಕಿಲ್ಲ: 30 ದಿನಗಳಲ್ಲಿ ನಿರ್ಧಾರವಾಗದಿದ್ದರೆ ಸ್ವಯಂಚಾಲಿತ ಅನುಮೋದನೆ.!

By kannadanewsnow5722/04/2026 6:56 AM

ಬೆಂಗಳೂರು: ರಾಜ್ಯದಲ್ಲಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗಾಗಿ ಬಳಸಲು ಸಲ್ಲಿಸುವ ‘ಅಫಿಡವಿಟ್ ಆಧಾರಿತ ಭೂ ಪರಿವರ್ತನೆ’ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಮತ್ತಷ್ಟು ಸರಳಗೊಳಿಸಿದೆ. ನಿಗದಿತ 30 ದಿನಗಳೊಳಗೆ ಜಿಲ್ಲಾಧಿಕಾರಿಗಳು ಯಾವುದೇ ತೀರ್ಮಾನ ಕೈಗೊಳ್ಳದಿದ್ದಲ್ಲಿ, ಅದನ್ನು ‘ಪರಿಭಾವಿತ ಭೂ ಪರಿವರ್ತನೆ’ (Deemed Conversion) ಎಂದು ಪರಿಗಣಿಸಿ ಸ್ವಯಂಚಾಲಿತವಾಗಿ ಅನುಮೋದನೆ ನೀಡಲು ಕಂದಾಯ ಇಲಾಖೆ ಆದೇಶಿಸಿದೆ.

ಏನಿದು ಹೊಸ ನಿಯಮ?
ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95ರ ಅಡಿಯಲ್ಲಿ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ಮಾಸ್ಟರ್ ಪ್ಲಾನ್ ವ್ಯಾಪ್ತಿಯ ಹೊರಗಿರುವ ಜಮೀನುಗಳಿಗೆ ಸಂಬಂಧಿಸಿದಂತೆ ಅಫಿಡವಿಟ್ ಆಧಾರಿತ ಅರ್ಜಿಗಳನ್ನು ಸಲ್ಲಿಸಿದಾಗ, ಅಧಿಕಾರಿಗಳು ಕಾಲಮಿತಿಯೊಳಗೆ ಕಾರ್ಯನಿರ್ವಹಿಸುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.

ಕಾಲಮಿತಿ ನಿಗದಿ:
ಭೂ ಪರಿವರ್ತನೆ ಪ್ರಕ್ರಿಯೆಯಲ್ಲಿ ವಿವಿಧ ಹಂತದ ಅಧಿಕಾರಿಗಳಿಗೆ ಈ ಕೆಳಗಿನಂತೆ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ:

ತಹಶೀಲ್ದಾರರು ಮತ್ತು ಅರಣ್ಯ ಇಲಾಖೆ: ಅಭಿಪ್ರಾಯ ನೀಡಲು 15 ದಿನಗಳು.

ಜಿಲ್ಲಾಧಿಕಾರಿ ಕಚೇರಿ ವಿಷಯ ನಿರ್ವಾಹಕರು: 5 ದಿನಗಳು.

ಅಪರ ಜಿಲ್ಲಾಧಿಕಾರಿಗಳು: 5 ದಿನಗಳು.

ಜಿಲ್ಲಾಧಿಕಾರಿಗಳು: 5 ದಿನಗಳು.

ಸ್ವಯಂಚಾಲಿತ ಅನುಮೋದನೆ ಹೇಗೆ?

ಅರ್ಜಿ ಸಲ್ಲಿಸಿದ ದಿನಾಂಕದಿಂದ ಒಟ್ಟು 30 ಕೆಲಸದ ದಿನಗಳೊಳಗೆ ಜಿಲ್ಲಾಧಿಕಾರಿಗಳು ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ, ತಂತ್ರಾಂಶದ ಮೂಲಕವೇ ಆ ಅರ್ಜಿಗೆ ಅನುಮೋದನೆ ದೊರೆಯಲಿದೆ. ತಕ್ಷಣವೇ ಅರ್ಜಿದಾರರ ಲಾಗಿನ್‌ಗೆ ಶುಲ್ಕ ಪಾವತಿಸಲು ಸಂದೇಶ ಹೋಗಲಿದ್ದು, ಶುಲ್ಕ ಪಾವತಿಸಿದ ನಂತರ ಸ್ವಯಂಚಾಲಿತವಾಗಿ ಭೂ ಪರಿವರ್ತನಾ ಆದೇಶ ಸೃಜನೆಯಾಗಲಿದೆ.

ಉದ್ದೇಶ:
ಸಾರ್ವಜನಿಕರು ಭೂ ಪರಿವರ್ತನೆಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಾರದರ್ಶಕವಾಗಿ ಕೆಲಸ ನಿರ್ವಹಿಸುವುದು ಈ ಆದೇಶದ ಮುಖ್ಯ ಉದ್ದೇಶವಾಗಿದೆ ಎಂದು ಕಂದಾಯ ಆಯುಕ್ತಾಲಯ ತಿಳಿಸಿದೆ.

BIG NEWS: No more waiting for 'land conversion' in the state: Automatic approval if no decision is made within 30 days!
Share. Facebook Twitter LinkedIn WhatsApp Email

Related Posts

ಬೋಳು ತಲೆ ಸಮಸ್ಯೆಗೆ ಮುಕ್ತಿ : ಕೇವಲ 56 ದಿನಗಳಲ್ಲಿ ಕೂದಲು ಬೆಳೆಸುವ ಅದ್ಭುತ `ಸೀರಂ’ ಕಂಡು ಹಿಡಿದ ವಿಜ್ಞಾನಿಗಳು.!

22/04/2026 6:48 AM2 Mins Read

BIG NEWS: ರಾಜ್ಯದ ಗ್ರಾಮ ಪಂಚಾಯ್ತಿ ಚುನಾವಣೆಗೆ ಭರ್ಜರಿ ತಯಾರಿ: ಸದಸ್ಯರ ಸಂಖ್ಯೆ ನಿಗದಿಪಡಿಸಿ ಸರ್ಕಾರ ಆದೇಶ

22/04/2026 6:44 AM1 Min Read

ಬೆಂಗಳೂರಿಗೆ 4ನೇ ರಿಂಗ್ ರಸ್ತೆ ಭಾಗ್ಯ: 12 ಉಪನಗರಗಳನ್ನು ಜೋಡಿಸುವ 210 ಕಿ.ಮೀ ‘ಇಂಟರ್ಮೀಡಿಯೇಟ್ ರಿಂಗ್ ರೋಡ್’

22/04/2026 6:33 AM2 Mins Read
Recent News

BREAKING: ಪಾಕಿಸ್ತಾನದ ಮನವಿಗೆ ಮಣಿದ ಟ್ರಂಪ್: ಇರಾನ್ ಜೊತೆಗಿನ ಕದನ ವಿರಾಮ ವಿಸ್ತರಣೆ, ಆದರೆ ದಿಗ್ಬಂಧನ ಮುಂದುವರಿಕೆ!

22/04/2026 6:56 AM

BIG NEWS : ರಾಜ್ಯದಲ್ಲಿ `ಭೂ ಪರಿವರ್ತನೆ’ಗೆ ಇನ್ನು ಕಾಯಬೇಕಿಲ್ಲ: 30 ದಿನಗಳಲ್ಲಿ ನಿರ್ಧಾರವಾಗದಿದ್ದರೆ ಸ್ವಯಂಚಾಲಿತ ಅನುಮೋದನೆ.!

22/04/2026 6:56 AM

ಕಂಪನಿ ಕ್ರೆಡಿಟ್ ಕಾರ್ಡ್‌ನಿಂದ 27 ಲಕ್ಷ ರೂ. ಸ್ವಾಹಾ: ಬಾಸ್‌ಗೆ ಅಶ್ಲೀಲ ಫೋಟೋ ಕಳುಹಿಸಿದ ಬೆಂಗಳೂರು ಟೆಕ್ಕಿ!

22/04/2026 6:52 AM

ಬೋಳು ತಲೆ ಸಮಸ್ಯೆಗೆ ಮುಕ್ತಿ : ಕೇವಲ 56 ದಿನಗಳಲ್ಲಿ ಕೂದಲು ಬೆಳೆಸುವ ಅದ್ಭುತ `ಸೀರಂ’ ಕಂಡು ಹಿಡಿದ ವಿಜ್ಞಾನಿಗಳು.!

22/04/2026 6:48 AM
State News
KARNATAKA

BIG NEWS : ರಾಜ್ಯದಲ್ಲಿ `ಭೂ ಪರಿವರ್ತನೆ’ಗೆ ಇನ್ನು ಕಾಯಬೇಕಿಲ್ಲ: 30 ದಿನಗಳಲ್ಲಿ ನಿರ್ಧಾರವಾಗದಿದ್ದರೆ ಸ್ವಯಂಚಾಲಿತ ಅನುಮೋದನೆ.!

By kannadanewsnow5722/04/2026 6:56 AM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗಾಗಿ ಬಳಸಲು ಸಲ್ಲಿಸುವ ‘ಅಫಿಡವಿಟ್ ಆಧಾರಿತ ಭೂ ಪರಿವರ್ತನೆ’ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ…

ಬೋಳು ತಲೆ ಸಮಸ್ಯೆಗೆ ಮುಕ್ತಿ : ಕೇವಲ 56 ದಿನಗಳಲ್ಲಿ ಕೂದಲು ಬೆಳೆಸುವ ಅದ್ಭುತ `ಸೀರಂ’ ಕಂಡು ಹಿಡಿದ ವಿಜ್ಞಾನಿಗಳು.!

22/04/2026 6:48 AM

BIG NEWS: ರಾಜ್ಯದ ಗ್ರಾಮ ಪಂಚಾಯ್ತಿ ಚುನಾವಣೆಗೆ ಭರ್ಜರಿ ತಯಾರಿ: ಸದಸ್ಯರ ಸಂಖ್ಯೆ ನಿಗದಿಪಡಿಸಿ ಸರ್ಕಾರ ಆದೇಶ

22/04/2026 6:44 AM

ಬೆಂಗಳೂರಿಗೆ 4ನೇ ರಿಂಗ್ ರಸ್ತೆ ಭಾಗ್ಯ: 12 ಉಪನಗರಗಳನ್ನು ಜೋಡಿಸುವ 210 ಕಿ.ಮೀ ‘ಇಂಟರ್ಮೀಡಿಯೇಟ್ ರಿಂಗ್ ರೋಡ್’

22/04/2026 6:33 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.