ಬೆಂಗಳೂರು : ನಾಡಿನ ನದಿಯ ಅಚ್ಚುಮೆಚ್ಚಿನ ನಂದಿನಿ ಉತ್ಪನ್ನಗಳು ಇತ್ತೀಚಿಗೆ ರಾಜ್ಯ ಅಷ್ಟೇ ಅಲ್ಲದೆ ದೈಲಿಯವರೆಗೂ ತನ್ನ ಹವಾ ಎಬ್ಬಿಸಿತ್ತು ಆದರೆ ಇದೀಗ ನಂದಿನಿ ಪ್ರಾಡಕ್ಟ್ ಗಳು ಕೇವಲ ರಾಷ್ಟ್ರ ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಕೂಡ ತನ್ನ ಹೆಸರುವಾಸಿಯಾಗಿದ್ದು ಅಮೆರಿಕಾದಲ್ಲಿ ನಡೆದ ನಾವಿಕ ಸಮ್ಮೇಳನದಲ್ಲಿ ನಂದಿನಿ ಬ್ರಾಂಡಿನ ಎಲ್ಲಾ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.
ಹೌದು ಕನ್ನಡ ನಾಡಿನ ಹೆಮ್ಮೆಯ ಕೆಎಂಎಫ್ ನಂದಿನಿ ಬ್ರಾಂಡಿನ ಎಲ್ಲ ಉತ್ಪನ್ನಗಳನ್ನು ಅಮೆರಿಕ ದೇಶದ ಫ್ಲೋರಿಡಾದ ಲೇಕ್ ಲ್ಯಾಂಡ್ ನಲ್ಲಿ ನಿನ್ನೆ ಅಧಿಕೃತವಾಗಿ ನಡೆದ ನಾವಿಕ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಯಿತು.
ಕೆಎಂಎಫ್ MD ಶಿವಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಸಚಿವರಾದ ಶಿವರಾಜ್ ತಂಗಡಗಿ, ಶಾಸಕರಾದ ರವಿ ಗಾಣಿಗ, ಅರವಿಂದ ಬೆಲ್ಲದ್ ನಟಿ ರಮ್ಯ, ನಟರಾದ ಶ್ರೀನಾಥ್,ರಕ್ಷಿತ್ ಶೆಟ್ಟಿ ಇನ್ನೂ ಹಲವು ಗಣ್ಯರು ಉಪಸ್ಥಿತರಿದ್ದರು.
ನಾವಿಕದ ಶಿವಕುಮಾರ್ ಮತ್ತು ಹರ್ಷಿತ್ ಗೌಡ ಹಾಗೂ ಪದಾಧಿಕಾರಿಗಳು ಹಾಜರಿದ್ದರು.