ಬೆಂಗಳೂರು : ಇತ್ತೀಚಿನ ದಿನಗಳಲ್ಲಿ AI ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಈಗ ಇಂಟರ್ನೆಟ್ನಲ್ಲಿ ಘಿಬ್ಲಿ ಸ್ಟೈಲ್ ಇಮೇಜ್ ಧೂಳೆಬ್ಬಿಸುತ್ತಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸ್ಟುಡಿಯೋ ಘಿಬ್ಲಿ ಶೈಲಿಯ ಫೋಟೋಗಳು ಚರ್ಚೆಯ ವಿಷಯವಾಗಿದೆ.ಎಲ್ಲರೂ ಘಿಬ್ಲಿ ಶೈಲಿಯ ಚಿತ್ರವನ್ನು ರಚಿಸುತ್ತಿದ್ದಾರೆ.
ಸದ್ಯಕ್ಕೆ ಘಿಬ್ಲಿ ಇದೀಗ ಟ್ರೆಂಡಿಂಗ್ ನಲ್ಲಿದೆ. ಹೌದು ಇನ್ಸ್ಟಾಗ್ರಾಮ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಈ ಒಂದು ಘಿಬ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಒಂದು ಆಪ್ ನಮ್ಮ ಮೆಟ್ರೋಕ್ಕೂ ಕಾಲಿಟ್ಟಿದ್ದು, ಮೆಟ್ರೋ ನಿಲ್ದಾಣದ ಹಲವು ಘಿಬ್ಲಿ ಚಿತ್ರಗಳನ್ನು BMRCL ಹಂಚಿಕೊಂಡಿದೆ.
ಬಿಎಂಆರ್‌ಸಿಎಲ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಟ್ಟು 7 ಚಿತ್ರಗಳನ್ನು ಹಂಚಿಕೊಂಡಿದ್ದು, ಮೊದಲನೇ ಚಿತ್ರದಲ್ಲಿ ನಾಗಸಂದ್ರ ಮೆಟ್ರೋ ನಿಲ್ದಾಣದ ಫೋಟೋ ಹಂಚಿಕೊಂಡಿದೆ. ಬಳಿಕ 2ನೇ ಚಿತ್ರದಲ್ಲಿ ಮೆಟ್ರೋ ಅಧಿಕಾರಿಯ ಚಿತ್ರ ಇದ್ದು, 3ನೇ ಚಿತ್ರದಲ್ಲಿ ಟಿಕೆಟ್ ಕೌಂಟರ್ ಫೋಟೋ ಇದೆ. ಅದೇ ರೀತಿಯಾಗಿ ಪೊಲೀಸ್ ಸಿಬ್ಬಂದಿ ನಿಂತಿರುವ, ಪ್ರವೇಶದ್ವಾರ ಹಾಗೂ ನಿಲ್ದಾಣದ ಹೊರಗಡೆಯಿಂದ ಸೇರಿ ಒಟ್ಟು 7 ಚಿತ್ರಗಳನ್ನು ಬಿಎಂಆರ್‌ಸಿಎಲ್ ಹಂಚಿಕೊಂಡಿದೆ.
ಘಿಬ್ಲಿ ಸ್ಟೈಲ್ ಆರ್ಟ್ ಜನಪ್ರಿಯವಾಗಿದ್ದು ಹೇಗೆ?
ಹೊಸದಾಗಿ ಚಾಟ್ ಜಿಪಿಟಿ ಪರಿಚಯಿಸಿರುವ ಘಿಬ್ಲಿ ಆರ್ಟ್ ಸ್ಟೈಲ್ ಫೋಟೊಗಳು, ಅಂದರೆ ಎಐ-ರಚಿಸಿದ ಕಲೆ, ವಿಶೇಷವಾಗಿ ಭಾವಚಿತ್ರಗಳ ರೂಪದಲ್ಲಿ ಜಿಪಿಟಿ -40 ನ ಘಿಬ್ಲಿ ಶೈಲಿಯ, ಅಭಿವ್ಯಕ್ತಿಶೀಲ ಮತ್ತು ಪಾತ್ರದಿಂದ ತುಂಬಿದ ಚಿತ್ರಗಳನ್ನು ನೀಡುವ ಮೂಲಕ ಎದ್ದು ಕಾಣುತ್ತದೆ. ದೊಡ್ಡ ಕಣ್ಣುಗಳು, ಮೃದುವಾದ ನೀಲಿ ಬಣ್ಣದ ಟೋನ್ ಮತ್ತು ವಿವರವಾದ ಹಿನ್ನೆಲೆಗಳು ಚಿತ್ರಗಳಿಗೆ ಮಿಯಾಝಾಕಿ ಚಿತ್ರದ ನಾಸ್ಟಾಲ್ಜಿಕ್ ಮ್ಯಾಜಿಕ್ ಲುಕ್ ಅನ್ನು ನಿಮಗೆ ನೀಡುತ್ತವೆ.
https://www.instagram.com/p/DIERy97yi7a/?igsh=Ynp4M2ZmMzBrZnBx