ಬೆಂಗಳೂರು : ಬಿಜೆಪಿ ಮುಖಂಡ ಅನ್ವರ್ ಮಣಪ್ಪಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ವಿರುದ್ಧ ವಕ್ಫ್ ವಿಚಾರವಾಗಿ ಮೌನವಹಿಸುವಂತೆ 150 ಕೋಟಿ ರೂಪಾಯಿ ಆಫರ್ ನೀಡಿದರು ಎಂಬ ಕಾಂಗ್ರೆಸ್ ಆರೋಪದ ವಿಚಾರವಾಗಿ ಸಚಿವ ಕೃಷ್ಣ ಭೈರೇಗೌಡ ಈ ಪ್ರಕರಣದ ಕುರಿತಂತೆ ಬಿವೈ ವಿಜಯೇಂದ್ರ ವಿರುದ್ಧ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಕೃಷ್ಣಭೈರೇಗೌಡ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮೇಲೆ ಬಿಜೆಪಿ ಮುಖಂಡರೇ ಆದ ಅನ್ವರ್ ಮಾಣಪ್ಪಾಡಿ 150 ಕೋಟಿ ರು. ಆಮಿಷದ ಆರೋಪ ಮಾಡಿದ್ದರೂ ಸಿಬಿಐ ಹಾಗೂ ಇಡಿ ಏನು ಮಾಡುತ್ತಿವೆ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಸಚಿವ ಕೃಷ್ಣ ಭೈರೇಗೌಡ ಆಕ್ರೋಶ ಹೊರ ಹಾಕಿದರು.
ಶಾಸಕ ಬಸನಗೌಡ ಯತ್ನಾಳ ಕೂಡ ಇದೇ ವಿಚಾರವನ್ನು ಬೇರೆ ಬೇರೆ ರೀತಿಯಲ್ಲಿ ಹೇಳಿದ್ದಾರೆ. ಹೀಗಾಗಿ ಸಿಬಿಐ ತನಿಖೆ ನಡೆಯಬೇಕು ಎಂದರು. ಸುಳ್ಳು ಆರೋಪಿಗಳಿಗೆಲ್ಲಾ ಇ.ಡಿ ಹಾಗೂ ಸಿಬಿಐ ಕಾಂಗ್ರೆಸ್ ಮುಖಂಡರಿಗೆ ನೋಟಿಸ್ ನೋಡುತ್ತಿವೆ. ಬಿಜೆಪಿ ಮುಖಂಡರ ಮೇಲೆ ಇಷ್ಟೆಲ್ಲಾ ಆರೋಪ ಇರುವಾಗ ತನಿಖಾ ಸಂಸ್ಥೆಗಳು ಸುಮ್ಮನೇ ಏಕೆ ಕುಳಿತಿವೆ ಎಂದು ಪ್ರಶ್ನಿಸಿದರು.