ತುಮಕೂರು : ನಕಲಿ ದಾಖಲೆಗಳನ್ನು ಸೃಷ್ಟಿಸಿ ತಲಾ ಒಂದು ವಾಹನಕ್ಕೆ 50 ಸಾವಿರ ರೂ ಪಡೆದು, ನಕಲಿ ಬೋನ್ ಪೈಡ್ ನೀಡಿ ಸರ್ಕಾರಕ್ಕೆ ನೂರಾರು ಕೋಟಿ ವಂಚನೆ ಎಸಗಿದ್ದ ಆರೋಪದ ಮೇಲೆ, ತುಮಕೂರಿನ ಆರ್ ಟಿ ಓ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿಯನ್ನು ಮುಂದುವರೆಸಿದ್ದಾರೆ. ನಿನ್ನೆ ಮಧ್ಯಾಹ್ನ 12 ಗಂಟೆಯಿಂದ ನಿರಂತರವಾಗಿ ಲೋಕಾಯುಕ್ತ ಅಧಿಕಾರಿಗಳು ಆರ್‌ಟಿಓ ಕಚೇರಿಯಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ತುಮಕೂರು ಆರ್‌ಟಿಒ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿಯನ್ನು ಮುಂದುವರೆಸಿದ್ದಾರೆ. ಕಚೇರಿಯಲ್ಲಿನ ಸುಮಾರು 2500 ಫೈಲ್ ಗಳ ಹುಡುಕಾಟಕ್ಕೆ ಲೋಕಾಯುಕ್ತ ಅಧಿಕಾರಿಗಳು ಮುಂದಾಗಿದ್ದಾರೆ. ನಕಲಿ ಬೋನ್ ಫೈಡ್ ಸರ್ಟಿಫಿಕೇಟ್ ಸೃಷ್ಟಿಸಿ ವಂಚನೆ ಎಸಗುತ್ತಿದ್ದರು. ದಾಳಿಯ ವೇಳೆ ಸರ್ಕಾರಕ್ಕೆ ನೂರಾರು ಕೋಟಿ ತೆರಿಗೆ ವಂಚನೆ ಬೆಳಕಿಗೆ ಬಂದಿದೆ. ಬ್ರೋಕರ್, ಏಜೆಂಟ್ ಗಳು, ಡೀಲರ್ಗಳು ಹಾಗೂ ಡ್ರೈವಿಂಗ್ ಸ್ಕೂಲ್ ಮೂಲಕ ವಂಚನೆ ಎಸಲಾಗಿದೆ.
ಲಂಚ ಪಡೆದು ನಕಲಿ ಬೋನ್ ಪೈಡ್ ಸರ್ಟಿಫಿಕೇಟ್ ಸೃಷ್ಟಿಸಿ ವಂಚಿಸುತ್ತಿದ್ದರು. ಒಂದು ನಕಲಿ ಬೋನ್ ಪೈಡ್ ಸರ್ಟಿಫಿಕೇಟ್ ಗೆ 50,000 ಲಂಚ ಪಡೆದುಕೊಳ್ಳುತ್ತಿದ್ದರು. ಹಾಗಾಗಿ ಲೋಕಾಯುಕ್ತ ಅಧಿಕಾರಿಗಳು 50,000 ಲಂಚ ಪಡೆದಿರುವ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.ಕಳೆದ ವರ್ಷ 6,000ಕ್ಕೂ ಹೆಚ್ಚು ವಾಹನಗಳ ರಿಜಿಸ್ಟರ್ ಆಗಿವೆ.
6000 ವಾಹನಗಳ ಪೈಕಿ 2500 ವಾಹನಗಳ ಫೈಲ್ ಗಳು ಮಾಯವಾಗಿವೆ. ಸದ್ಯ ತುಮಕೂರು ಆರ್ ಟಿ ಓ ಕಚೇರಿಯಲ್ಲಿ ಲೋಕಾಯುಕ್ತ ಬೀಡು ಬಿಟ್ಟಿದೆ. ಕಚೇರಿಯಲ್ಲಿನ ಎಲ್ಲ ದಾಖಲೆಗಳನ್ನು ಕೂಡ ಪರಿಶೀಲನೆ ಮಾಡುತ್ತಿದೆ. ಲೋಕಾಯುಕ್ತ ಎಸ್ಪಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ನಿನ್ನೆ ಮಧ್ಯಾಹ್ನ 12 ರಿಂದ ನಿರಂತರವಾಗಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.