ಬೆಂಗಳೂರು : ಬೆಂಗಳೂರಲ್ಲಿ ಭಾರಿ ಅನಾಹುತ ಒಂದು ತಪ್ಪಿದ್ದು, ಬ್ರೇಕ್ ಫೈಲ್ ಆಗಿ KSRTC ಬಸ್ ಒಂದು ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ, ಬಸ್ ನಲ್ಲಿದ್ದ ಓರ್ವ ಮಹಿಳೆಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಬೆಂಗಳೂರಿನ ಎಸ್.ಆರ್.ಎಸ್ ಸಿಗ್ನಲ್ ನಲ್ಲಿ ನಡೆದಿದೆ.
ಬಸ್ ಸಿಗ್ನಲ್ ಇದ್ದಿದ್ದರಿಂದ ನಿಂತುಕೊಂಡಿತ್ತು. ಸಿಗ್ನಲ್ ಮುಗಿದ ಬಳಿಕ ಚಲಿಸುವಾಗ ಏಕಾಏಕಿ ಟೆಂಪೋ ಅಡ್ಡ ಬಂದಿದೆ ಈ ವೇಳೆ ತಕ್ಷಣ ಬ್ರೇಕ್ ಹಾಕಲು ಹೋದಾಗ ಬ್ರೇಕ್ ಫೇಲ್ ಆಗಿ ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಇವಳೇ ಓರ್ವ ಮಹಿಳೆಗೆ ಗಂಭೀರವಾದ ಗಾಯಗಳಾಗಿದ್ದು ಉಳಿದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ.