Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

JOB ALERT: ಭಾರತೀಯ ರೈಲ್ವೇ ಇಲಾಖೆಯಲ್ಲಿ 6,565 ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ |RRB Recruitment 2026

BIG NEWS :ಕ್ರಿಮಿನಲ್ ಕೇಸ್ ನಲ್ಲಿ ಖುಲಾಸೆಯಾದ ಮಾತ್ರಕ್ಕೆ `ಅನುಕಂಪದ ಉದ್ಯೋಗ’ದ ಹಕ್ಕು ಸಿಗಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ALERT : `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ 5 ಕೆಲಸ ಮಾಡದಿದ್ದರೆ ಸಬ್ಸಿಡಿ, ಕನೆಕ್ಷನ್ ಕಟ್.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS :ಕ್ರಿಮಿನಲ್ ಕೇಸ್ ನಲ್ಲಿ ಖುಲಾಸೆಯಾದ ಮಾತ್ರಕ್ಕೆ `ಅನುಕಂಪದ ಉದ್ಯೋಗ’ದ ಹಕ್ಕು ಸಿಗಲ್ಲ: ಹೈಕೋರ್ಟ್ ಮಹತ್ವದ ತೀರ್ಪು
KARNATAKA

BIG NEWS :ಕ್ರಿಮಿನಲ್ ಕೇಸ್ ನಲ್ಲಿ ಖುಲಾಸೆಯಾದ ಮಾತ್ರಕ್ಕೆ `ಅನುಕಂಪದ ಉದ್ಯೋಗ’ದ ಹಕ್ಕು ಸಿಗಲ್ಲ: ಹೈಕೋರ್ಟ್ ಮಹತ್ವದ ತೀರ್ಪು

By kannadanewsnow57

ಬೆಂಗಳೂರು: ಕ್ರಿಮಿನಲ್ ಪ್ರಕರಣದಲ್ಲಿ ಖುಲಾಸೆಯಾದ (ದೋಷಮುಕ್ತರಾದ) ತಕ್ಷಣಕ್ಕೆ ಅರ್ಜಿದಾರರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯುವ ಹಕ್ಕು ಸಿಗುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ಮಹತ್ವದ ತೀರ್ಪು ನೀಡಿದೆ.

ಮೈಸೂರು ಜಿಲ್ಲೆಯ ಹುಣಸೂರು ಮೂಲದ 42 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಡಾ. ಕೆ. ಮನ್ಮಥ ರಾವ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ:

ಅರ್ಜಿದಾರರ ತಂದೆ ಎಎಸ್ಐ (ASI) ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ನಿಧನರಾಗಿದ್ದರು. ಅವರ ನಿಧನದ ನಂತರ ಅನುಕಂಪದ ಆಧಾರದ ಮೇಲೆ ಉದ್ಯೋಗ ಕೋರಿ ಅರ್ಜಿದಾರರು 2018ರ ಆಗಸ್ಟ್ ನಲ್ಲಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಮೇಲೆ ಕ್ರಿಮಿನಲ್ ಪ್ರಕರಣ ಬಾಕಿ ಇದ್ದ ಕಾರಣ ಪೊಲೀಸ್ ಇಲಾಖೆಯು ಅವರ ಮನವಿಯನ್ನು ತಿರಸ್ಕರಿಸಿತ್ತು.

ಆನಂತರ ಪ್ರಕರಣದ ವಿಚಾರಣೆ ನಡೆದು ಅರ್ಜಿದಾರರು ಕೋರ್ಟ್ ನಿಂದ ಖುಲಾಸೆಗೊಂಡಿದ್ದರು. ಈ ಆಧಾರದ ಮೇಲೆ ಅವರು ಎರಡನೇ ಬಾರಿಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಪೊಲೀಸ್ ಇಲಾಖೆಯು ಈ ಅರ್ಜಿಯನ್ನೂ ಸಹ 2022ರ ಸೆಪ್ಟೆಂಬರ್ 13ರಂದು ತಿರಸ್ಕರಿಸಿತ್ತು. ಇಲಾಖೆಯ ಈ ಆದೇಶದ ವಿರುದ್ಧ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಪೊಲೀಸ್ ಇಲಾಖೆಯಂತಹ ಶಿಸ್ತಿನ ವಿಭಾಗಗಳಲ್ಲಿ ನೇಮಕಾತಿಗೆ ಕೇವಲ ನ್ಯಾಯಾಲಯದ ಖುಲಾಸೆಯೊಂದೇ ಅರ್ಹತೆಯಾಗಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.ಅಭ್ಯರ್ಥಿಯ ಹಿನ್ನೆಲೆಯ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರ ಪೊಲೀಸ್ ಇಲಾಖೆಗೆ ಇರುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿರುವ ಪೊಲೀಸ್ ಇಲಾಖೆ ಮತ್ತು ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಯ ಆದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

BIG NEWS: Just because you are acquitted in a criminal case does not entitle you to 'compassionate employment': High Court's landmark verdict
Share. Facebook Twitter LinkedIn WhatsApp Email

Related Posts

ALERT : `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ 5 ಕೆಲಸ ಮಾಡದಿದ್ದರೆ ಸಬ್ಸಿಡಿ, ಕನೆಕ್ಷನ್ ಕಟ್.!

2 Mins Read

BIG NEWS : ರಾಜ್ಯ `ಸರ್ಕಾರಿ ನೌಕರರಿಗೆ’ ಭರ್ಜರಿ ಗುಡ್ ನ್ಯೂಸ್ : ಪರಿಷ್ಕೃತ `CGHS’ ದರಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಅನುಮೋದನೆ

1 Min Read

BIG NEWS : ರಾಜ್ಯ `ಸರ್ಕಾರಿ ನೌಕರರಿಗೆ’ ಬೆಳಗ್ಗೆ 10ಕ್ಕೆ ಕಡ್ಡಾಯ ಹಾಜರಾತಿ : ‘ಕರ್ತವ್ಯ’ ಆ್ಯಪ್ ಮೂಲಕ ಅಟೆಂಡೆನ್ಸ್.!

3 Mins Read
Recent News

JOB ALERT: ಭಾರತೀಯ ರೈಲ್ವೇ ಇಲಾಖೆಯಲ್ಲಿ 6,565 ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ |RRB Recruitment 2026

BIG NEWS :ಕ್ರಿಮಿನಲ್ ಕೇಸ್ ನಲ್ಲಿ ಖುಲಾಸೆಯಾದ ಮಾತ್ರಕ್ಕೆ `ಅನುಕಂಪದ ಉದ್ಯೋಗ’ದ ಹಕ್ಕು ಸಿಗಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ALERT : `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ 5 ಕೆಲಸ ಮಾಡದಿದ್ದರೆ ಸಬ್ಸಿಡಿ, ಕನೆಕ್ಷನ್ ಕಟ್.!

BIG NEWS : ರಾಜ್ಯ `ಸರ್ಕಾರಿ ನೌಕರರಿಗೆ’ ಭರ್ಜರಿ ಗುಡ್ ನ್ಯೂಸ್ : ಪರಿಷ್ಕೃತ `CGHS’ ದರಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಅನುಮೋದನೆ

State News
KARNATAKA

BIG NEWS :ಕ್ರಿಮಿನಲ್ ಕೇಸ್ ನಲ್ಲಿ ಖುಲಾಸೆಯಾದ ಮಾತ್ರಕ್ಕೆ `ಅನುಕಂಪದ ಉದ್ಯೋಗ’ದ ಹಕ್ಕು ಸಿಗಲ್ಲ: ಹೈಕೋರ್ಟ್ ಮಹತ್ವದ ತೀರ್ಪು

By kannadanewsnow57 KARNATAKA 1 Min Read

ಬೆಂಗಳೂರು: ಕ್ರಿಮಿನಲ್ ಪ್ರಕರಣದಲ್ಲಿ ಖುಲಾಸೆಯಾದ (ದೋಷಮುಕ್ತರಾದ) ತಕ್ಷಣಕ್ಕೆ ಅರ್ಜಿದಾರರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯುವ ಹಕ್ಕು ಸಿಗುವುದಿಲ್ಲ…

ALERT : `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ 5 ಕೆಲಸ ಮಾಡದಿದ್ದರೆ ಸಬ್ಸಿಡಿ, ಕನೆಕ್ಷನ್ ಕಟ್.!

BIG NEWS : ರಾಜ್ಯ `ಸರ್ಕಾರಿ ನೌಕರರಿಗೆ’ ಭರ್ಜರಿ ಗುಡ್ ನ್ಯೂಸ್ : ಪರಿಷ್ಕೃತ `CGHS’ ದರಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಅನುಮೋದನೆ

BIG NEWS : ರಾಜ್ಯ `ಸರ್ಕಾರಿ ನೌಕರರಿಗೆ’ ಬೆಳಗ್ಗೆ 10ಕ್ಕೆ ಕಡ್ಡಾಯ ಹಾಜರಾತಿ : ‘ಕರ್ತವ್ಯ’ ಆ್ಯಪ್ ಮೂಲಕ ಅಟೆಂಡೆನ್ಸ್.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.