ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಸಿಎಂ ಖುರ್ಚಿ ಕದನ ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಾಮಿಸಿದೆ. ಬಿಹಾರ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಹೊರ ಬಾರದ ಕಾಂಗ್ರೆಸ್‌ಗೆ ಈಗ ರಾಜ್ಯದ ಕಾಂಗ್ರೆಸ್ ನಾಯಕರ ನಡವಳಿಕೆ ತೀವ್ರ ಬೇಸರ ಉಂಟು ಮಾಡುತ್ತಿದೆ.
ಇದೀಗ ಸಿಎಂ ಕಾವೇರಿ ನಿವಾಸದಲ್ಲಿ ರಾಜಕೀಯ ಗರಿಗೆದರಿದ್ದು, ಸಚಿವರು ಶಾಸಕರುಗಳು ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ. ಕಾವೇರಿ ನಿವಾಸದಲ್ಲಿ ಸಚಿವರ ಶಾಸಕರ ದಂಡೆ ಜಮಯಿಸಿದೆ. ಸಚಿವರಾದ ಜಿ.ಪರಮೇಶ್ವರ್, ಹೆಚ್.ಸಿ ಮಹದೇವಪ್ಪ, ಸಿಂಧನೂರು ಶಾಸಕ ಸೇರಿದಂತೆ ಹಲವಾರು ಭೇಟಿ ನೀಡಿದ್ದಾರೆ.








