Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಂತಿಮ ಘಟ್ಟಕ್ಕೆ ತಲುಪಿದ ವಿಧಾನ ಪರಿಷತ್ ಚುನಾವಣೆ : ಈವರೆಗೆ ಒಟ್ಟು 221 ಶಾಸಕರಿಂದ ಮತ ಚಲಾವಣೆ!

BIG NEWS : ರಾಜ್ಯದಲ್ಲಿ ಹೋಂಸ್ಟೇ ನಿಯಂತ್ರಣಕ್ಕೆ ಸಮಗ್ರ ನೀತಿ ರೂಪಿಸಲು, ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

BREAKING : ಬಿಜೆಪಿಗೆ ಮತ ಹಾಕುವುದಾಗಿ ಶಾಸಕ ಯತ್ನಾಳ್ ಪತ್ರ : ಚುನಾವಣಾಧಿಕಾರಿಗೆ ದೂರು ನೀಡಿದ ಕಾಂಗ್ರೆಸ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಾಕ್ಷರತೆ, ಸಂಖ್ಯಾಜ್ಞಾನ(FLN) ಕಾರ್ಯಕ್ರಮ ಅನುಷ್ಠಾನ : ರಾಜ್ಯ ಸರ್ಕಾರ ಮಹತ್ವದ ಆದೇಶ
KARNATAKA

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಾಕ್ಷರತೆ, ಸಂಖ್ಯಾಜ್ಞಾನ(FLN) ಕಾರ್ಯಕ್ರಮ ಅನುಷ್ಠಾನ : ರಾಜ್ಯ ಸರ್ಕಾರ ಮಹತ್ವದ ಆದೇಶ

By kannadanewsnow57

ಬೆಂಗಳೂರು : ರಾಜ್ಯದ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ 2024-25 ನೇ ಸಾಲಿನಲ್ಲಿ ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ(FLN) ಕಾರ್ಯಕ್ರಮವನ್ನು ಅನುಷ್ಠಾನ ಮಾಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು 2026-27 ರ ವೇಳೆಗೆ ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದಲ್ಲಿ (FLN) ಪ್ರಾವಿಣತೆಯನ್ನು ಪಡೆಯುವ ಗುರಿಯನ್ನು ಉಲ್ಲೇಖ (1) ರ ಪತ್ರದಲ್ಲಿ ಈಗಾಗಲೇ ತಿಳಿಸಲಾಗಿದೆ. ಅದರಂತೆ ಈಗಾಗಲೇ ರಾಜದ ಎಲಾ ಡಯಟ್‌ಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಎಲ್ಲಾ ಶಾಲಾ ಮಕ್ಕಳು ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನವನ್ನು (FLN) ಗಳಿಸಲು ಮಾರ್ಗದರ್ಶನ ಮತ್ತು ಬೆಂಬಲ ವ್ಯವಸ್ಥೆಯನ್ನು ಶಿಕ್ಷಕರಿಗೆ ನೀಡುವ ಮೂಲಕ ಮಕ್ಕಳಲ್ಲಿ ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ (FLN) ವನ್ನು ಸಾಧಿಸಲು ಕ್ರಮ ವಹಿಸಲಾಗುತ್ತಿದೆ.

2024-25 ನೇ ಸಾಲಿನಲ್ಲಿ ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (FLN) ಕಾರ್ಯಕ್ರಮವನ್ನು ಇನ್ನೂ ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡುವ ಸಂಬಂಧ ಉಲ್ಲೇಖ (2) ರಂತೆ ರಾಜ್ಯ ಮಟ್ಟದಲ್ಲಿ ವಿವಿಧ ಸರದೆ ಅಧಿಕಾರಿಗಳು ಮತ್ತು ಶಿಕ್ಷಕರಿಗೆ 02 ದಿನಗಳ ವಿಚಾರ ಗೋಷಿಯನ್ನು ನಡೆಸಲಾಯಿತು. ಸದರಿ ವಿಚಾರ ಗೋಷ್ಠಿಯಲ್ಲಿ ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ (FLN) ಕಾರ್ಯಕ್ರಮವನ್ನು ಡಯಟ್ ಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವೆ ಬಗ್ಗೆ ಜಿಲ್ಲಾ, ತಾಲ್ಲೂಕು ಮತ್ತು ಶಾಲಾ ಹಂತಗಳಲ್ಲಿ ಕಂಡು ಬಂದ ಧನಾತಕ ಮತ್ತು ಋಣಾತ್ಮಕ ಅಂಶಗಳೊಂದಿಗೆ ವಿವಿಧ ಸೆರದ ಅಧಿಕಾರಿಗಳು ಮತ್ತು ಶಿಕ್ಷಕರೊಂದಿಗೆ ಚರ್ಚಿಸಿ ಜಿಲ್ಲಾ ಹಂತದಿಂದ ಶಾಲಾ ಹಂತದವರೆಗೆ ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ (FLN) “ಕಾರ್ಯಕ್ರಮವನ್ನು ಅನುಷ್ಠಾನ ಮಾಡುವ ಕುರಿತು ಎಲ್ಲರ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.

1. ಇಲಾಖೆಯ ಎಲ್ಲಾ ಶೈಕ್ಷಣಿಕ ಕಾರ್ಯಕರ್ತರು ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ (FLN) ಅರಿವನ್ನು ಹೊಂದುವುದು ಬಹು ಮುಖ್ಯವಾದ ಕಾರ್ಯ ಹಾಗೂ ಅಪೇಕ್ಷಣೀಯವಾಗಿದೆ.
2. ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (FLN) ಸಾಧಿಸಬೇಕಾದ ಮಕ್ಕಳನ್ನು ಹಂತವಾರು ಗುರುತಿಸಿ ವೈಯಕ್ತಿಕ ಯೋಜನೆಯನ್ನು ಮಕ್ಕಳವಾರು ಸಿದ್ದಪಡಿಸಿಕೊಳ್ಳುವುದು,
3. ಶಿಕ್ಷಕರೇ ಮಕ್ಕಳ ಪ್ರಗತಿಯ ಕ್ರಿಯಾಶೀಲಾ ನಿರ್ಣಾಯಕರಾಗಿದ್ದು ಅವರ ಮೂಲಕವೇ ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ (FLN) ಅನುಷ್ಠಾನಗೊಳಿಸುವುದು.
4. ಮಕ್ಕಳ ವೈಯಕ್ತಿಕ ಕಲಿಕೆ ಮತ್ತು ಮೌಲ್ಯಾಂಕನದಲ್ಲಿ ಪೋಷಕರು, ಸಮುದಾಯವನ್ನು ಪ್ರಮುಖ ಭಾಗೀದಾರರನ್ನಾಗಿ ಮಾಡಿಕೊಳ್ಳುವುದು.
5. ಪ್ರತೀ ಶಾಲೆಯಲ್ಲಿಯೂ ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ (FLN) ಕ್ರಿಯಾ ಯೋಜನೆಯನ್ನು ತಯಾರಿಸಿ ವಿವಿಧ ಹಂತಗಳಲ್ಲಿ (ಕ್ಲಸ್ಟರ್, ಬ್ಲಾಕ್ ಹಾಗೂ ಜಿಲ್ಲಾ) ಕ್ರೂಢೀಕೃತ ಕ್ರಿಯಾ ಯೋಜನೆಯಾಗಿ ಮಾರ್ಪಾಡು ಮಾಡಿಕೊಳ್ಳುವುದು.
6. ಎಲ್ಲಾ ಶೈಕ್ಷಣಿಕ ಜಿಲ್ಲೆಯ ಅನುಷ್ಠಾನಾಧಿಕಾರಿಗಳು ತಾವು ಕ್ರಿಯಾಶೀಲರಾಗಿ ಶಾಲೆಗಳನ್ನು ಗುಣಾತ್ಮಕವಾಗಿ ಕ್ರಿಯಾ ಶೀಲಗೊಳಿಸಲು ಜಿಲ್ಲಾ ಮಟ್ಟದಲ್ಲಿ ಉಪಕ್ರಮಗಳನ್ನು ರೂಪಿಸುವುದು.
7. ಪ್ರಾಥಮಿಕ ಹಂತದಿಂದ ಆರಂಭಿಸಿ 10 ನೇ ತರಗತಿಯ ವರೆಗೂ ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ (FLN) ಸಾಧಿಸಲು ಉಪಕ್ರಮಗಳನ್ನು ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತಗಳಲ್ಲಿ ರೂಪಿಸಿ ಅನುಷ್ಠಾನಗೊಳಿಸುವುದು.
8. ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ (FLN) ಬಗ್ಗೆ ಉತ್ತಮ ಸಾಧನೆ ಮಾಡಿದ ಎಲ್ಲಾ ಹಂತದ ಶಿಕ್ಷಕರನ್ನು ಮತ್ತು ಅಧಿಕಾರಿಗಳನ್ನು ವಿವಿಧ ಹಂತಗಳಲ್ಲಿ ಗುರುತಿಸಿ ಪ್ರಶಂಸಿಸುವುದು.
9. ಮೇಲಿನ ಎಲ್ಲಾ ಅಂಶಗಳನ್ನು ಅನುಷ್ಠಾನಗೊಳಿಸಿ 2024-25 ರ ಶೈಕ್ಷಣಿಕ ವರ್ಷದ ಅಂತ್ಯಕ್ಕೆ ಕನಿಷ್ಠ ಶೇಕಡ 90 ರಷ್ಟು ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ (FLN) ಪ್ರಗತಿಯನ್ನು ಸಾಧಿಸುವುದು.
ಈ ಮೇಲಿನ ಎಲ್ಲಾ ನಿರ್ಣಯಗಳನ್ನು ಜಿಲ್ಲಾ, ತಾಲ್ಲೂಕು, ಕ್ಲಸ್ಟರ್ ಮತ್ತು ಶಾಲಾ ಹಂತಗಳಲ್ಲಿ ಅನುಷ್ಠಾನ ಮಾಡುವುದು.
2024-25 ನೇ ಸಾಲಿಗೆ ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ (FLN) ಸಾಧಿಸಬೇಕಾದ ಮಕ್ಕಳ ಮಾಹಿತಿಗಳನ್ನು ಜೂನ್ ಮಾಹೆಯಲ್ಲಿ ತರಗತಿ, ಶಾಲೆ, ಕ್ಲಸ್ಟರ್, ತಾಲ್ಲೂಕು ಮತ್ತು ಜಿಲ್ಲಾವಾರು ತಮ್ಮದೇ ಆದ ಮಾನದಂಡಗಳನ್ನು ಬಳಸಿ ಮಕ್ಕಳನ್ನು ಗುರುತಿಸುವುದು. ಗುರುತಿಸಿದ ಮಕ್ಕಳಿಗೆ ಕ್ರಿಯಾ ಯೋಜನೆಯನ್ನು ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ಸಿದ್ಧಪಡಿಸಿ ಅನುಷ್ಠಾನಗೊಳಿಸುವುದು ಹಾಗೂ ಅನುಪಾಲಿಸುವುದು.

 

BIG NEWS: Implementation of literacy numeracy (FLN) programme in all schools in the state: State government
Share. Facebook Twitter LinkedIn WhatsApp Email

Related Posts

ಅಂತಿಮ ಘಟ್ಟಕ್ಕೆ ತಲುಪಿದ ವಿಧಾನ ಪರಿಷತ್ ಚುನಾವಣೆ : ಈವರೆಗೆ ಒಟ್ಟು 221 ಶಾಸಕರಿಂದ ಮತ ಚಲಾವಣೆ!

2 Mins Read

BIG NEWS : ರಾಜ್ಯದಲ್ಲಿ ಹೋಂಸ್ಟೇ ನಿಯಂತ್ರಣಕ್ಕೆ ಸಮಗ್ರ ನೀತಿ ರೂಪಿಸಲು, ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

2 Mins Read

BREAKING : ಬಿಜೆಪಿಗೆ ಮತ ಹಾಕುವುದಾಗಿ ಶಾಸಕ ಯತ್ನಾಳ್ ಪತ್ರ : ಚುನಾವಣಾಧಿಕಾರಿಗೆ ದೂರು ನೀಡಿದ ಕಾಂಗ್ರೆಸ್

2 Mins Read
Recent News

ಅಂತಿಮ ಘಟ್ಟಕ್ಕೆ ತಲುಪಿದ ವಿಧಾನ ಪರಿಷತ್ ಚುನಾವಣೆ : ಈವರೆಗೆ ಒಟ್ಟು 221 ಶಾಸಕರಿಂದ ಮತ ಚಲಾವಣೆ!

BIG NEWS : ರಾಜ್ಯದಲ್ಲಿ ಹೋಂಸ್ಟೇ ನಿಯಂತ್ರಣಕ್ಕೆ ಸಮಗ್ರ ನೀತಿ ರೂಪಿಸಲು, ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

BREAKING : ಬಿಜೆಪಿಗೆ ಮತ ಹಾಕುವುದಾಗಿ ಶಾಸಕ ಯತ್ನಾಳ್ ಪತ್ರ : ಚುನಾವಣಾಧಿಕಾರಿಗೆ ದೂರು ನೀಡಿದ ಕಾಂಗ್ರೆಸ್

SHOCKING : ಮನೆಯ ಹೊರಗೆ, ಬೆಡ್ ರೂಮ್ ನಲ್ಲೂ `CCTV’ ಅಳವಡಿಸಿದ್ದ ಪಾಪಿ ಪತಿ : ಮದುವೆಯಾಗಿ 48 ದಿನಗಳಲ್ಲೇ ನವವಿವಾಹಿತೆ ಆತ್ಮಹತ್ಯೆ.!

State News
KARNATAKA

ಅಂತಿಮ ಘಟ್ಟಕ್ಕೆ ತಲುಪಿದ ವಿಧಾನ ಪರಿಷತ್ ಚುನಾವಣೆ : ಈವರೆಗೆ ಒಟ್ಟು 221 ಶಾಸಕರಿಂದ ಮತ ಚಲಾವಣೆ!

By ಸುರೇಶ್‌ KARNATAKA 2 Mins Read

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಸ್ಥಾನಗಳಿಗೆ ಇಂದು (ಗುರುವಾರ) ವಿಧಾನಸೌಧದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಬೆಳಿಗ್ಗೆಯಿಂದಲೇ ಶಾಸಕರು ಸರದಿಯಲ್ಲಿ ಬಂದು…

BIG NEWS : ರಾಜ್ಯದಲ್ಲಿ ಹೋಂಸ್ಟೇ ನಿಯಂತ್ರಣಕ್ಕೆ ಸಮಗ್ರ ನೀತಿ ರೂಪಿಸಲು, ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

BREAKING : ಬಿಜೆಪಿಗೆ ಮತ ಹಾಕುವುದಾಗಿ ಶಾಸಕ ಯತ್ನಾಳ್ ಪತ್ರ : ಚುನಾವಣಾಧಿಕಾರಿಗೆ ದೂರು ನೀಡಿದ ಕಾಂಗ್ರೆಸ್

BIG NEWS : ರೇಣುಕಾ ಸ್ವಾಮಿ ಕೊಲೆ ಕೇಸ್ : ಹೈಕೋರ್ಟ್ ನಲ್ಲಿರುವ ಪ್ರಕರಣದಿಂದ ನಿವೃತ್ತಿಯಾದ ದರ್ಶನ್ ಪರ ವಕೀಲ ಸುನಿಲ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.