ಬೆಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು ಯಾವ ಅಭ್ಯರ್ಥಿಗೆ ಯಾವ ಕ್ಷೇತ್ರದಲ್ಲಿ ಟಿಕೇಟಿ ನೀಡಿದರೆ ಗೆಲ್ಲಬಹುದೆಂಬ ಲೆಕ್ಕಾಚಾರದಲ್ಲಿ ತೊಡಗಿವೆ ಇದರ ಮಧ್ಯ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ನಾನು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂಬ ಅಭಿಪ್ರಾಯಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂದುಕೊಂಡಿದ್ದೆ, ಸದ್ಯ ನಾನು ಸ್ಪರ್ಧೆ ಮಾಡಬಾರದೆಂದು ಅಭಿಪ್ರಾಯಕ್ಕೆ ಬಂದಿದ್ದೇನೆ. ಹಲವೆಡೆ ಸಚಿವರ ಸ್ಪರ್ಧೆ ಅನಿವಾರ್ಯತೆ ಇದೆ ಅಂತ ತಿಳಿಸುತ್ತಾರೆ.ನನ್ನ ಹೆಸರು ಬಂದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದರು.
ಅಗತ್ಯವಿದ್ದರೆ ಸಚಿವರು ಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ.ಇನ್ನು ಯಾವ ಕ್ಷೇತ್ರಕ್ಕೂ ಅಭ್ಯರ್ಥಿ ಫೈನಲ್ ಆಗಿಲ್ಲ.ಶಿವಮೊಗ್ಗ ಕ್ಷೇತ್ರಕ್ಕೆ ಮಾತ್ರ ಕೆಪಿಸಿಸಿ ಅಧ್ಯಕ್ಷರು ಅಭ್ಯರ್ಥಿ ಹೇಳಿದ್ದಾರೆ. ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರನ್ನು ಕಣಕ್ಕೆ ಇಳಿಸುತ್ತೇವೆ ಎಂದು ಹೇಳಿದ್ದಾರೆ.ಅದು ಫೈನಲ್ ಆಗಿರಬಹುದೇನೋ ಗೊತ್ತಿಲ್ಲ ಎಂದು ಸಚಿವ ಕೆ ಎನ್ ರಾಜಣ್ಣ ತಿಳಿಸಿದರು.
ಮಾಜಿ ಸಂಸದ ಮುದ್ದಹನುಮಗೌಡರು ಸಚಿವ ಕೆ ಎನ್ ರಾಜಣ್ಣ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು ಮುಂದೆ ಹನುಮಗೌಡರ ಜೊತೆ ರಾಜಕೀಯ ಮಾತುಕತೆ ನಡೆದಿಲ್ಲ.ಅಷ್ಟೇ ಅಲ್ಲ ಯಾರು ಬೇಕಾದರೂ ಪಕ್ಷಕ್ಕೆ ಬರಲಿ ಸೋಮಣ್ಣ ಕಾಂಗ್ರೆಸ್ ಸೇರ್ತಾರೆ ಅನ್ನುವ ಊಹಾಪೋಹ ಇದೆ. ಸೋಮಣ್ಣಗೆ ಟಿಕೆಟ್ ಕೊಡುತ್ತಾರೆ ಎಂಬ ಚರ್ಚೆಯು ಆಗುತ್ತಿದೆ.ಶಾಸಕ ಟಿಬಿ ಜಯಚಂದ್ರ ತಮ್ಮ ಪುತ್ರನಿಗೆ ಟಿಕೆಟ್ ಕೇಳಿದ್ದಾರೆ ಶಾಸಕ ಟಿಬಿ ಜಯಚಂದ್ರ ಮಗನಿಗೆ ಅವಕಾಶ ಕೊಟ್ಟರೆ ಕೊಡಲಿ ಎಂದು ತಿಳಿಸಿದರು.