ತುಮಕೂರು : ತುಮಕೂರಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಶಿರಾ ರಾಷ್ಟ್ರೀಯ ಹೆದ್ದಾರಿ 48ರಲ್ಲಿ KSRTC ಮತ್ತು ಖಾಸಗಿ ಸ್ಲೀಪರ್ ಬಸ್ ನಡುವೆ ಭೀಕರ ಅಪಘಾತವಾಗಿದೆ. ಈ ದುರ್ಘಟನೆಯಲ್ಲಿ ಹಾವೇರಿ ಮತ್ತು ಗದಗ ಮೂಲದ ಇಬ್ಬರು ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದು, 35 ಮಂದಿ ಗಾಯಗೊಂಡಿದ್ದಾರೆ.
ಮೃತರನ್ನು ಹಾವೇರಿ ಮೂಲದ ಪ್ರವೀಣ್ ಕೃಷ್ಣಪ್ಪ (28) ಮತ್ತು ಗದಗ ಮೂಲದ ಸಂಗೀತಾ (16) ಎಂದು ಗುರುತಿಸಲಾಗಿದೆ. ಅಪಘಾತವಾಗಿರುವ ಎರಡೂ ಬಸ್ಗಳು ಬೆಂಗಳೂರಿಗೆ ಬರುತ್ತಿದ್ದವು ಎನ್ನಲಾಗಿದ್ದು ಹೆದ್ದಾರಿಯ ಮೂರನೇ ಲೇನ್ನಿಂದ ಏಕಾಏಕಿ ಎರಡನೇ ಲೇನ್ಗೆ ಖಾಸಗಿ ಬಸ್ ಬಂದಿರೋದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಈ ವೇಳೆ ಮತ್ತೊಂದು ಲೇನ್ನಲ್ಲಿ ವೇಗವಾಗಿ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಯಂತ್ರಣ ತಪ್ಪಿ ಖಾಸಗಿ ಬಸ್ನ ಹಿಂಭಾಕ್ಕೆ ಗುದ್ದಿದೆ. ಪರಿಣಾಮ ಖಾಸಗಿ ಬಸ್ನ ಹಿಂಬದಿ ಸೀಟ್ಗಳಲ್ಲಿದ್ದ ಇಬ್ಬರು ಪ್ರಾಣಬಿಟ್ಟಿದ್ದಾರೆ. ಬೇಜವಾಬ್ದಾರಿ ಚಾಲನೆ ಹಿನ್ನಲೆ ಘಟನೆ ಸಂಬಂಧ ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪತ್ಯೇಕ ಪ್ರಕರಣಗಳು ದಾಖಲಾಗಿವೆ.








