ಯಾದಗಿರಿ : ಕಳೆದ ಒಂದು ವರ್ಷಗಳಿಂದ ಹೊರಗುತ್ತಿಗೆ ನೌಕರರು ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಒಂದು ವರ್ಷದಿಂದಲೂ ಆರೋಗ್ಯ ಇಲಾಖೆ ವೇತನ ಮಾಡಿಲ್ಲ ಎಂದು ಹೊರಗುತ್ತಿಗೆ ನೌಕರರು ಪರದಾಡುತ್ತಿರುವ ಘಟನೆ ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ.
ಹೌದು ಹೊರ ಗುತ್ತಿಗೆ ನೌಕರರಿಗೆ ವೇತನ ಪಾವತಿಸದ ಆರೋಗ್ಯ ಇಲಾಖೆಯು ಕಳೆದ 1 ವರ್ಷದಿಂದ ವೇತನ ಪಾವತಿಸಿಲ್ಲ. ವೇತನ ಇಲ್ಲದೆ ಸದ್ಯ ಹೊರಗುತ್ತಿಗೆ ನೌಕರರು 1 ವರ್ಷ ಕೆಲಸ ಮಾಡಿದ್ದಾರೆ. ಸ್ಯಾಲರಿ ಇಲ್ಲದೆ ನೌಕರರು ಪರದಾಡುತ್ತಿದ್ದಾರೆ.
ಕುಟುಂಬ ನಿರ್ವಹಣೆಗೆ ಇದೀಗ ಕಷ್ಟ ಎದುರಿಸುತ್ತಿದ್ದಾರೆ.
ಕೆಲಸ ಮಾಡಿದರು ಒಂದು ವರ್ಷದಿಂದ ವೇತನ ಪಾವತಿ ಮಾಡಿಲ್ಲ. ಸುಮಾರು 5 ಕೋಟಿ ವೇತನ ಬಾಕಿ ಉಳಿಸಿಕೊಂಡ ಆರೋಗ್ಯ ಇಲಾಖೆಯು ಹೊರಗುತ್ತಿಗೆ ನೌಕರರು 1 ವರ್ಷದಿಂದ ಕೆಲಸ ಮಾಡಿದರೂ ವೇತನ ಪಾವತಿಸಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಈ ನಡೆಯಿಂದ ಯಾದಗಿರಿಯಲ್ಲಿ ಹೊರಗುತ್ತಿಗೆ ನೌಕರರು ಪರದಾಟ ನಡೆಸುತ್ತಿದ್ದಾರೆ.
ಈ ಕುರಿತು ಯಾದಗಿರಿ ಡಿಎಚ್ಒ ಡಾಕ್ಟರ್ ಮಹೇಶ್ ಅವರು ಪ್ರತಿಕ್ರಿಯೆ ನೀಡಿ, ತಾಂತ್ರಿಕ ಸಮಸ್ಯೆಯಿಂದಾಗಿ ಗುತ್ತಿಗೆ ನೌಕರರಿಗೆ ವೇತನ ಆಗಿಲ್ಲ. ಹಾಗಾಗಿ ಇನ್ನೂ ಒಂದೆರಡು ದಿನಗಳಲ್ಲಿ ಹೊರ ಗುತ್ತಿಗೆ ನೌಕರದಾರರಿಗೆ ವೇತನ ಪಾವತಿಸಲಾಗುತ್ತದೆ. ಎಂದು ಮಹೇಶ್ ಸ್ಪಷ್ಟಪಡಿಸಿದರು. ಕೇವಲ ಯಾದಗಿರಿ ಜಿಲ್ಲೆ ಅಷ್ಟೇ ಅಲ್ಲದೆ ರಾಜ್ಯದ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ನೌಕರರ ಒಟ್ಟು 21 ಕೋಟಿ ವೇತನ ಪಾವತಿಸದೆ ಆರೋಗ್ಯ ಇಲಾಖೆ ಬಾಕಿ ಉಳಿಸಿಕೊಂಡಿದೆ ಎಂದು ತಿಳಿದು ಬಂದಿದೆ.