ಕಲಬುರ್ಗಿ : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದೂರದ ಬೆಂಗಳೂರು, ಧಾರವಾಡಕ್ಕೆ ತೆರಳಲು ಆಗಲ್ಲ ಹಾಗಾಗಿ ಕಲಬುರ್ಗಿಯಲ್ಲೇ ತುಂಬು ಗರ್ಭಿಣಿಗೆ ಪರೀಕ್ಷೆ ಬರೆಯಲು ಅವಾಕಾಶ ಕಲ್ಪಿಸಿ ಎಂದು KPSC ಗೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತಂತೆ ಕಲಬುರ್ಗಿಯವರಾದ ಮಹಾಲಕ್ಷ್ಮಿ ಎಂಬುವವರು ತುಂಬು ಗರ್ಭಿಣಿಯಾಗಿದ್ದು, ಕಲಬುರ್ಗಿಯಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಎಂದು KPSC ಗೆ ಮನವಿ ಮಾಡಿದ್ದರು. ಆದರೆ KPSC ಒಬ್ಬರೋಗೋಸ್ಕರ ಈ ವ್ಯವಸ್ಥೆ ಕಲ್ಪಿಸಲು ಆಗಲ್ಲ ಎಂದು ತಿಳಿಸಿತ್ತು. ಹಾಗಾಗಿ ಮಹಾಲಕ್ಷ್ಮಿ ಅವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಚಿಮ್ಮಕೂಡ ಸುಮಲತಾ ಅವರು KPSC ಗೆ ನಿರ್ದೇಶನ ನೀಡಿದ್ದಾರೆ.