ಬೆಂಗಳೂರು : ಎಚ್ ಡಿ ಕುಮಾರಸ್ವಾಮಿ ವಿರುದ್ಧದ ಹಲಗೆವಡೆಯರಹಳ್ಳಿ ಡನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟಿಗೆ ಹೆಚ್‍ಡಿ ಕುಮಾರಸ್ವಾಮಿ ಗೈರಾಗಿದ್ದಾರೆ. ಹಾಜರಾತಿಯಿಂದ ವಿನಾಯಿತಿ ಕೋರಿ ಹೆಚ್‍ಡಿ ಕುಮಾರಸ್ವಾಮಿ ಪರ ವಕೀಲರು ಅರ್ಜಿ ಸಲ್ಲಿಸಿದ್ದು ಕುಮಾರಸ್ವಾಮಿ ಪರ ವಕೀಲರ ಅರ್ಜಿಗೆ ಕೋರ್ಟ್ ಇದೀಗ ಅಸಮಾಧಾನ ಹೊರಹಾಕಿದೆ.
ಫೆಬ್ರವರಿ 7ರ್ಲ್ ರಂದು ಸಭೆ ಇತ್ತು ಎಂದು ಸುಳ್ಳು ಕಾರಣ ನೀಡಿದ್ದೀರಿ ವಿಕಸಿತ್ ಭಾರತ ಸಭೆಗೆ ಹಾಜರಿ ಎಂದು ಕೋರ್ಟಿಗೆ ಸುಳ್ಳು ಹೇಳಿದ್ದೀರಿ. ಕೋಲಾರದಲ್ಲಿ ಸುದ್ದಿಗೋಷ್ಠಿ ನಡೆಸಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ನೈಜ ಕಾರಣ ನೀಡಿದರೆ ಪರಿಗಣಿಸುತ್ತೇವೆ, ಸುಳ್ಳು ದಾಖಲೆ ನೀಡಿದರೆ ಪರಿಶೀಲನೆಗೆ ಒಳಪಡಿಸುತ್ತೇನೆ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ ಜಡ್ಜ್ ಸಂತೋಷ ಗಜಾನನ ಭಟ್ ಎಚ್ಚರಿಕೆ ನೀಡಿದ್ದಾರೆ.








