ಉಡುಪಿ : ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆಯ ವೇಳೆ ಅರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡುಗಳು ರದ್ದಾಗಿರುವ ಕುರಿತಾಗಿ, ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಅರ್ಹ ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಯಾವುದೇ ರೀತಿಯ ಅನ್ಯಾಯ ಮಾಡಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದರು.
ಉಡುಪಿಯ ಕೊಲ್ಲೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಈ ಕುರಿತಂತೆ ಹೇಳಿಕೆ ನೀಡಿದ್ದು, ಯಾರ್ಯಾರ ಕಾರ್ಡ್ ವಜಾ ಮಾಡಿದ್ದಾರೆ ಪಟ್ಟಿ ಕೊಡಬೇಕು ಎಂದು ಈಗಾಗಲೇ ಆಯಾ ಜಿಲೆಗಳ ಮಂತ್ರಿಗಳಿಗೆ ಸೂಚಿಸಲಾಗಿದೆ. ಯಾರು ಬಿಪಿಎಲ್ ಕಾರ್ಡ್ ಗಳಿಗೆ ಅರ್ಹರಿದ್ದಾರೋ ಅದನ್ನು ಸರಿ ಮಾಡಿ ಮರು ಅರ್ಜಿ ಸಲ್ಲಿಸಬೇಕು. ಅರ್ಹರಿಗೆ ನ್ಯಾಯ ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತದೆ ಯಾರು ಕೂಡ ಭಯಪಡಬಾರದು ಎಂದು ತಿಳಿಸಿದರು.
ಬಿಪಿಎಲ್ ಅರ್ಹರಿಗೆ ಸರ್ಕಾರ ಅನ್ಯಾಯ ಆಗೋಕೆ ನಮ್ಮ ಪಕ್ಷ ಸರ್ಕಾರ ಬಿಡುವುದಿಲ್ಲ. ನಾವು ಈಗಾಗಲೇ ಮಂತ್ರಿಗಳಿಗೆ ಹೇಳಿದ್ದೇವೆ ಅದರ ಪಟ್ಟಿ ಕೊಡಬೇಕು ಎಂದು ಹೇಳಿದ್ದೇವೆ. ಅದಕ್ಕೆ ನಮ್ಮ ಗ್ಯಾರಂಟಿಗಳ ಸಮಿತಿ ಇದೆ. ರಚನೆ ಮಾಡಿದ್ದೇವೆ. ಅಲ್ಲದೆ ರಾಜ್ಯಮಟ್ಟದ ಸಮಿತಿ ಕೂಡ ಇದೆ ಅವರೆಲ್ಲ ಕೂಡ ಅದನ್ನು ನೋಡಿಕೊಂಡು ನ್ಯಾಯ ಕೊಡುವ ಕೆಲಸ ನಮ್ಮ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಎರಡೂ ಮಾಡುತ್ತದೆ ಯಾರು ಭಯಪಡುವ ಅಗತ್ಯವಿಲ್ಲ ಎಂದರು.