ಮಡಿಕೇರಿ : ಮಡಿಕೇರಿಯಲ್ಲಿ ಅಡುಗೆ ಅನೀಲ ಸೋರಿಕೆಯಾಗಿ ಗ್ಯಾಸ್ ಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಮನೆಯಲ್ಲಿದ್ದ ದಂಪತಿಗಳಿಗೆ ಗಂಭೀರವಾದ ಗಾಯಗಳಾಗಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪರಾಗಿರುವ ಘಟನೆ ಮಡಿಕೇರಿಯ ಸುಂಟಿಕೊಪ್ಪದಲ್ಲಿ ನಿನ್ನೆ ನಡೆದಿದೆ.
ಸುಂಟಿಕೊಪ್ಪ 1ನೇ ವಿಭಾಗದ ನಿವಾಸಿಗಳಾದ ತಲೆ ಹೊರೆ ಕಾರ್ಮಿಕ ವಿಜಯ, ಅವರ ಪತ್ನಿ ಸಾವಿತ್ರಿ ಮನೆಯ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ವೇಳೆ ಅನಿಲ ಸೋರಿಕೆಯಾಗಿ ಏಕಾಏಕಿ ಸಿಲಿಂಡರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ನಂದಿಸಲು ಪ್ರಯತ್ನಿಸಿದ ವೇಳೆ ಈ ದಂಪತಿಗಳಿಗೆ ಗಾಯವಾಗಿದೆ. ಬೆಂಕಿ ಗಮನಿಸಿದ ಅಕ್ಕಪಕ್ಕದವರು ಸಿಲಿಂಡರ್ ಗಾಬರಿಯಿಂದ ಹೊರ ಹಾಕಿದ್ದಾರೆ. ಬಳಿಕ ದಂಪತಿಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.