ಬೆಂಗಳೂರು : ಇತ್ತೀಚಿಗೆ ಕೆಪಿಎಸ್ಸಿ ಅಲ್ಲಿ ಭಾರಿ ಅಕ್ರಮ ನಡೆದಿರುವ ಕುರಿತು ವರದಿಯಾಗಿತ್ತು. ಈ ವಿಚಾರವಾಗಿ ವಿಧಾನಸಭೆಯಲ್ಲಿ ಕೆಪಿಎಸ್ಸಿ ಅಕ್ರಮ ಸಂಬಂಧ ರಾಜ್ಯ ಸರ್ಕಾರ ಉತ್ತರಿಸಿದ್ದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದ್ದು ಕೆಪಿಎಸ್ಸಿ ಅಲ್ಲಿ ಮಾತ್ರ ಇದು ಸಮಸ್ಯೆಯಾಗುತ್ತಿದೆ ಆದರೆ ಕೆಇಎ ನಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಉತ್ತರಿಸಿದರು.
ಕೆಇನಲ್ಲಿ 2000 ಪ್ರಶ್ನೆ ಸಿದ್ಧಪಡಿಸಿ ಕನ್ನಡಕ್ಕೆ ಭಾಷಾಂತರ ಮಾಡಲಾಗಿದೆ. ಪ್ರಶ್ನಾವಳಿ ಮಾಡುವಾಗ 20 ರಿಂದ 30 ಪ್ರಶ್ನೆ ಆಯ್ಕೆ ಮಾಡುತ್ತಾರೆ. ಆಗಲೇ ಭಾಷಾಂತರ ಮಾಡಿರುವುದರಿಂದ ಲೋಪ ದೋಷ ಕಡಿಮೆ ಕಂಡು ಬಂದಿದೆ. ಇದನ್ನೇ ಕೆಪಿಎಸ್ಸಿಯಲ್ಲಿ ಅನುಷ್ಠಾನ ಮಾಡಲು ಚರ್ಚೆಯಾಗುತ್ತಿದೆ. ಪ್ರತಿವರ್ಷ ಇಂತಹ ತಿಂಗಳು ಇಂತಹ ದಿನ ಪರೀಕ್ಷೆ ನಡೆಸಬೇಕು ನಿಗದಿತ ದಿನದಲ್ಲಿ ಕಡ್ಡಾಯವಾಗಿ ಕೆಪಿಎಸ್ಸಿ ಪರೀಕ್ಷೆ ನಡೆಯಬೇಕು.
ಸಿ ಗ್ರೂಪ್ ಹಾಗೂ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗೆ ಯುಪಿಎಸ್ಸಿ ಮಾದರಿ ನಿರ್ದಿಷ್ಟ ದಿನದಲ್ಲಿ ಪರೀಕ್ಷೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಬರುವ ಐದು ವರ್ಷಕ್ಕೆ ಎಷ್ಟು ಹುದ್ದೆಗಳು ನೇಮಕಾತಿ ಮಾಡಲಾಗುತ್ತದೆ. ಈ ಬಗ್ಗೆ ಮುಂಗಡವಾಗಿ ಕ್ಯಾಲೆಂಡರ್ ಸಿದ್ಧಪಡಿಸಲು ಸೂಚಿಸಲಾಗಿದೆ. ಅಲ್ಲದೆ ಕೆಪಿಎಸ್ಸಿಯಲ್ಲಿ ಇನ್ನೂ ಸುಧಾರಣೆ ಮಾಡಲು ತೀರ್ಮಾನಿಸಲಾಗಿದೆ. ಸರ್ವ ಪಕ್ಷ ಸದಸ್ಯರನ್ನು ಒಳಗೊಂಡ ಸದನ ಸಮಿತಿ ಮಾಡಿ ಸುಧಾರಣೆ ಮಾಡಲಾಗುತ್ತದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಮುಂದಿನ ಅಧಿವೇಶನದೊಳಗೆ ಸದನ ಸಮಿತಿ ವರದಿ ಕೊಟ್ಟರೆ ಅದನ್ನು ಅನುಷ್ಠಾನ ಮಾಡಲು ಸರಕಾರ ಸಿದ್ಧವಿದೆ 2027 ಕ್ಕೆ ಕೆಪಿಎಸ್ ಸದಸ್ಯರ ಸಂಖ್ಯೆ 8ಕ್ಕೆ ಇಳಿಕೆ ಆಗುತ್ತದೆ ಎಂದು ಕೃಷ್ಣಭರೇಗೌಡ ಉತ್ತರಿಸಿದರು.








