ಬೆಂಗಳೂರು: ಅರಣ್ಯ ಸಂರಕ್ಷಣೆಯಲ್ಲಿ ತೊಡಗಿ ಹುತಾತ್ಮರಾದವರಿಗೆ ಪರಿಹಾರ ಮೊತ್ತವನ್ನು 30 ರಿಂದ 50 ಲಕ್ಷ ರೂ.ಗಳಿಗೆ ನೀಡಲಾಗುವುದು ಅಂಥ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಅವರು ಇಂದು ಅರಣ್ಯ ಇಲಾಖೆ ಕಟ್ಟಡದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹುತಾತ್ಮ ಅರಣ್ಯ ಇಲಾಖೆ ಸಿಬ್ಬಂದಿಗೆ ಗೌರವಾರ್ಪಣೆ ಹಾಗೂ ಅರಣ್ಯ ಸಚಿವ ದಿ. ಉಮೇಶ್ ಕತ್ತಿಯವರಿಗೆ ನಮನ ಸಲ್ಲಿಸಿದ ಬಳಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಅವರು ಮಾತನಾಡಿ, ನಮ್ಮ ಅರಣ್ಯ ಇಲಾಖೆಯ ಸಿಬ್ಬಂದಿ ಗಳು, ಸಾರ್ವಜನಿಕರು ಮಾಡಿರುವ ಊಹಾತೀತ ಸಾಹಸ, ಮೆರೆದಿರುವ ಶೌರ್ಯ, ದಿಟ್ಟತನಗಳನ್ನು ಮತ್ತು ಕೆಲವೊಮ್ಮೆ ಮಾಡಿರುವ ಪ್ರಾಣ ತ್ಯಾಗವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಅಂತ ತಿಳಿಸಿದರು.
ಇನ್ನೂ ಅರಣ್ಯ ಕೇವಲ ನಿಸರ್ಗದ ಒಂದು ಭಾಗವಲ್ಲ. ನಮ್ಮ ನಿಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗ. ಮಳೆ, ಬೆಳೆ, ಆಹಾರ ಮತ್ತು ಉಸಿರಾಡಲು ಶುದ್ದ ಗಾಳಿ ನೀಡುವ ಅರಣ್ಯ ದೇಶದ ಪ್ರಮುಖ ಸಂಪತ್ತು. ಅರಣ್ಯವಿಲ್ಲದ ದೇಶಗಳು ಮರಳುಗಾಡಾಗಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಅರಣ್ಯ ರಕ್ಷಣೆ ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಬೇಕು ಅಂತ ಹೇಳಿದ್ರು.