ಬೆಂಗಳೂರು : ನಿನ್ನೆ ನಡೆದ ಚಾಂಪಿಯನ್ಸ್ ಟ್ರೊಫಿ ಸೆಮಿ ಫೈನಲ್ ಮ್ಯಾಚ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಭಾರತವು ಚಾಂಪಿಯನ್ಸ್ ಟ್ರೋಫಿ 2025 ಕ್ಕೆ ಅರ್ಹತೆ ಪಡೆದಿದೆ. ಮೆನ್ ಇನ್ ಬ್ಲೂ ತಂಡವು ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಗೆ ಪ್ರವೇಶಿಸಿತು.
ಭಾರತ ಫೈನಲ್ ತಲುಪಿದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭಾರತ ತಂಡಕ್ಕೆ ಅಭಿನಂದನೆ ತಿಳಿಸಿದ್ದು, ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಬ್ಲೂ ಬಾಯ್ಸ್ ಅದ್ಭುತ ಆಟದಿಂದ ಭಾರತ ಇಂದು ಗೆಲವು ಸಾಧಿಸಿದೆ. ಫೈನಲ್ ನಲ್ಲೂ ಹೀಗೆ ಆಡಿ ಐಸಿಸಿ ಚಾಂಪಿಯನ್ ಟ್ರೊಫಿ ಕಪ್ ಗೆಲ್ಲಲಿ ಎಂದು ಡಿಕೆ ಶಿವಕುಮಾರ್ ಟೀಂ ಇಂಡಿಯಾಗೆ ಶುಭ ಹಾರೈಸಿದ್ದಾರೆ.
265 ರನ್ಗಳ ಗುರಿ ಬೆನ್ನತ್ತಿದ ಭಾರತ ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಪರಿಸ್ಥಿತಿಯನ್ನು ನಿಯಂತ್ರಿಸಿ 91 ರನ್ಗಳ ಅಮೂಲ್ಯ ಜೊತೆಯಾಟವನ್ನು ನೀಡಿದರು. ಶ್ರೇಯಸ್ 45 ರನ್ ಗಳಿಸಿ ನಿರ್ಗಮಿಸಿದ ನಂತರ, ಅಕ್ಷರ್ ಪಟೇಲ್ 27 ರನ್ ಗಳಿಸಿ ಸ್ಕೋರ್ ಬೋರ್ಡ್ ಅನ್ನು ಟಿಕ್ ಮಾಡಲು ಸಹಾಯ ಮಾಡಿದರು.
ಮತ್ತೊಂದೆಡೆ, ಕೊಹ್ಲಿ ತಮ್ಮ ಟೆಂಪ್ಲೇಟ್ ಅನ್ನು ಬದಲಾಯಿಸಲಿಲ್ಲ ಮತ್ತು ಐದು ಬೌಂಡರಿಗಳ ಸಹಾಯದಿಂದ ಅವರು 84 ರನ್ ಗಳಿಸಿದರು.ನಂತರ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಕ್ರಮವಾಗಿ 42* ಮತ್ತು 28 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು.
Our brilliant Boys in Blue have stormed into the finals of Champions Trophy 2025 with a fantastic win against Australia!
Congratulations to our team for this comprehensive victory, and I wish you good luck for the finals!#ChampionsTrophy2025 pic.twitter.com/VRuq6ACVgQ
— DK Shivakumar (@DKShivakumar) March 4, 2025