ಬೆಂಗಳೂರು : ಇತ್ತೀಚಿಗೆ ನಗರದ ಹೊರವಲಯದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಡಬಲ್ ಮರ್ಡರ್ ಮಾಡಿರುವ ಆರೋಪಿಯನ್ನು ಈ ಹಿಂದೆ ಪ್ರಕರಣವೊಂದರಲ್ಲಿ ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಜೈಲಿಂದ ಬಿಡಿಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.
ಹೌದು ಆರೋಪಿಯನ್ನು ಸುರೇಶ್ ಎಂದು ಗುರುತಿಸಲಾಗಿದ್ದು, ದುನಿಯಾ ವಿಜಯ್ ದಸೆಯಿಂದ ಜೈಲಿನಿಂದ ಹಿರ ಬಂದು, ಮಾರ್ಕೆಟ್ ನಲ್ಲಿ ಕೊತ್ತಂಬರಿ ಸೊಪ್ಪು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಬಳಿಕ ಬಸ್ ಸರ್ವೀಸ್ ಶೆಡ್ ನಲ್ಲೂ ಕೆಲಸ ಮಾಡಿಕೊಂಡು ಇದ್ದ. ಈ ವೇಳೆ ಗುಜರಿ ಮಾರುವ ವಿಚಾರಕ್ಕೆ ಗಲಾಟೆಯಾಗಿದೆ.
ಕೊಲೆಯಾದ ನಾಗೇಶ್ ಮತ್ತು ಮಂಜುನಾಥ್, ‘ನೀನು ಕಳ್ಳ, ಕೊಲೆಗಾರ’ ಅಂತಾ ಹೀಯಾಳಿಸಿದ್ದರು. ನವೆಂಬರ್ 8 ರಂದು ಈ ಜೋಡಿ ಕೊಲೆಯಾಗಿತ್ತು. ಕೊಲೆ ಮಾಡಿ, ಸುರೇಶ ಎಸ್ಕೇಪ್ ಆಗಿದ್ದ. ಕೊಲೆಯಾದ ನಾಗೇಶ್ ಹಾಗೂ ಮಂಜುನಾಥ, ಸದಾ ಸುರೇಶನನ್ನು ಹೀಯಾಳಿಸುತ್ತಿದ್ದರಂತೆ. ನೀನು ಕುಳ್ಳ, ನಿನ್ನ ಮೇಲೆ ಹಪವು ಪೊಲೀಸ್ ಕೇಸುಗಳಿವೆ ಎಂದು. ಕುಳ್ಳ ಎಂದು ರೇಗಿಸುತ್ತಿದ್ದ ವಿಚಾರಕ್ಕೆ ಕೋಪಗೊಂಡ ಸುರೇಶ್ ಇಬ್ಬರಿಗೂ ರಾಡ್ ನಿಂದ ಹೊಡೆದಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.ಇದೀಗ ಮತ್ತೆ ಆತನನ್ನು ಅರೆಸ್ಟ್ ಮಾಡಿದ್ದಾರೆ.
ಆರೋಪಿ ಹಿನ್ನೆಲೆ?
ಬಾಗಲೂರು ಡಬಲ್ ಮರ್ಡರ್ ಆರೋಪಿ ಸುರೇಶ್ಗೆ ಈ ಹಿಂದೆ ಪ್ರಕರಣವೊಂದರಲ್ಲಿ ಶ್ಯೂರಿಟಿ ಹಣ ನೀಡಿ ದುನಿಯಾ ವಿಜಯ್ ಬಿಡಿಸಿದ್ದರು. ಈ ಹಿಂದೆ ಡಬಲ್ ಮರ್ಡರ್ ಕೇಸ್ ಹಾಗೂ ರೇಪ್ ಕೇಸಲ್ಲಿ ಆರೋಪಿ ಸುರೇಶ್ ಜೈಲು ಸೇರಿದ್ದ. 10 ವರ್ಷ ಶಿಕ್ಷೆ ಅನುಭವಿಸಿದ್ದ ಅಪರಾಧಿಗೆ ಶ್ಯೂರಿಟಿ ಹಣ ನೀಡಲು ಯಾರೂ ಇರಲಿಲ್ಲ. ಈ ಸಮಯದಲ್ಲಿ ಒಂದಷ್ಟು ಅಪರಾಧಿಗಳಿಗೆ ತಲಾ ಮೂರು ಲಕ್ಷದಂತೆ ಶ್ಯೂರಿಟಿ ಹಣವನ್ನು ನಟ ವಿಜಯ್ ಕಟ್ಟಿದ್ದರು. ಈ ವೇಳೆ ಸುರೇಶ್ಗೂ ಕೂಡ ಮೂರು ಲಕ್ಷ ಶ್ಯೂರಿಟಿ ಹಣ ನೀಡಿ ಜೈಲಿಂದ ಬಿಡುಗಡೆಗೊಳಿಸಿದ್ದರು.