ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಆವರಿಸಿ ಭರ್ತಿ ಒಂದು ತಿಂಗಳು ಆಯ್ತು. ಆದರೆ ಸಮರ ಕ್ಷಿಣಿಸುವ ಲಕ್ಷಣ ಕಾಣುತ್ತಿಲ್ಲ. ಇತ್ತ ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಅಭಾವದಿಂದ ಜನರ ಪರದಾಟ ಮುಂದುವರೆದಿದೆ. ಹೀಗಿರುವಾಗ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸೌದೆ ಒಲೆ ಬಳಸುಂತೆ ಮನವಿ ಮಾಡಿದ್ದಾರೆ.
ಅಡುಗೆ ಅನೀಲ ಅಭಾವದಿಂದ ಹೋಟೆಲ್‌ಗಳು ಬಂದ್ ಆಗ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, 20% ಅಡುಗೆ ಅನಿಲ ಹೋಟೆಲ್ ಗೆ ಕೊಡ್ತಾ ಇದ್ದೀವಿ. ಹಾಸ್ಪಿಟಲ್‌ಗಳಿಗೆ 100% ಕೊಡ್ತಿದ್ದೇವೆ. ನಿನ್ನೆ ನರೇಂದ್ರ ಮೋದಿ ಹಾಗೂ ಪೆಟ್ರೋಲಿಯಂ ಸಚಿವರೊಂದಿಗೆ ಸಭೆ ಆಗಿದೆ. ಮಂಗಳವಾದಿಂದ ಇಂಪ್ಲಿಮೆಂಟ್ ಆದ್ರೆ ಹೋಟೆಲ್‌ಗಳಿಗೆ ಇನ್ನೂ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ವಾಣಿಜ್ಯ ಸಿಲಿಂಡರ್ ಸಿಗದೇ ಹೋಟೆಲ್, ಕೈಗಾರಿಕೆಗಳು ಥಂಡಾ ಹೊಡೆದಿವೆ. ಜನರು ಖಾಲಿ ಗ್ಯಾಸ್ ಸಿಲಿಂಡರ್ ಹಿಡಿದು ಏಜೆನ್ಸಿಗಳತ್ತ ಧಾವಿಸುತ್ತಿದ್ದಾರೆ. ಈ ಮಧ್ಯೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಸಿಲಿಂಡರ್ ಅಭಾವ ಇರುವುದರಿಂದ ಸೌದೆ ಒಲೆ ಬಳಸುವಂತೆ ಕರೆ ನೀಡಿದ್ದಾರೆ. ಸಿಲಿಂಡರ್ ಅಭಾವ ಇರುವುದರಿಂದ ಹಳ್ಳಿ ಭಾಗದ ಜನರು ಸೌದೆ ಒಲೆಗಳನ್ನು ಬಳಸಿ. ಬೆಂಗಳೂರು ಬಿಟ್ಟು 40 ಕಿಲೋಮೀಟರ್ ಹೋದರೆ ಸೌದೆ ಸಿಗುತ್ತೆ. ಅರಣ್ಯ ಪ್ರದೇಶದ ಹಸಿ ಮರ ಬಿಟ್ಟು ಒಣ ಕಟ್ಟಿಗೆ ಬಳಸುವಂತೆ ಅವರು ಮನವಿ ಮಾಡಿದ್ದಾರೆ.
ಸಾಧ್ಯವಾದಷ್ಟು ಹೋಟೆಲ್ ಗಳಿಗೆ ಹೆಚ್ಚುವರಿ ಸಿಲಿಂಡರ್ ಕೊಡೋಕೆ ಹೇಳಿದ್ದೇವೆ. ಮಂಗಳವಾರ ಮತ್ತೊಂದು ಸುತ್ತಿನ ಸಭೆಯಿದೆ. ಆ ದಿನ ಇನ್ನೂ ಹೆಚ್ಚುವರಿ ಸಿಲಿಂಡರ್ ಕೊಡುವ ಬಗ್ಗೆ ನಿರ್ಧಾರ ಮಾಡ್ತೀವಿ. ವಿನಾಃಕಾರಣ ಜನ ಆತಂಕಕ್ಕೆ ಒಳಗಾಗೋದು ಬೇಡ ಡೊಮೆಸ್ಟಿಕ್ ಅವರಿಗೆ ನಗರದಲ್ಲಿ 25 ದಿನಕ್ಕೆ 1 ಸಿಲಿಂಡರ್ ಕೊಡ್ತಿದ್ದೀವಿ. ಹಳ್ಳಿಗಳಲ್ಲಿ 45 ದಿನಕ್ಕೆ 1 ಸಿಲಿಂಡರ್ ಕೊಡ್ತಿದ್ದೇವೆ. ವಾಣಿಜ್ಯ ಸಿಲಿಂಡರ್ ಸಮಸ್ಯೆ ಸರಿಪಡಿಸೋಕೆ ಹೇಳಿದ್ದೇವೆ ಎಂದರು.








