ಬೆಂಗಳೂರು : ಬೆಂಗಳೂರಿನಲ್ಲಿ ಕೇರಳ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ, ಬೆಂಗಳೂರಿನ ನಂದಿನಿ ಲೇಔಟ್ ಪೋಲಿಸರಿಂದ ಸೌಗೇಶ್ ಮತ್ತು ಅಲ್ತಾಫ್ ಎಂಬ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ..
ಹೈಡ್ರೋ ಗಾಂಜಾ ತರಿಸಿ ಸ್ಥಳೀಯರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. 5.75 ಕೋಟಿ ರೂಪಾಯಿ ಮೌಲ್ಯದ 5 ಕೆಜಿ 700 ಗ್ರಾಂ ಹೈಡ್ರೋ ಗಾಂಜಾವನ್ನು ಇದೀಗ ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳದಲ್ಲಿ ಆರೋಪಿಗಳು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಬಂಧಿತರ ವಿರುದ್ಧ ಕೇರಳದಲ್ಲಿ ಸಹ ಎನ್.ಡಿಪಿಎಸ್ ಕೇಸ್ ದಾಖಲಾಗಿದೆ. ನಂದಿನಿ ಲೇಔಟ್ ಠಾಣೆ ಪೋಲೀಸರಿಂದ ಮುಂದುವರೆದಿದೆ.








