Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : 2 ಭಾರತೀಯ ಹಡಗುಗಳ ಮೇಲೆ ಅಮೆರಿಕ ಕ್ಷಿಪಣಿ ದಾಳಿ : 21 ಸಿಬ್ಬಂದಿಗಳ ರಕ್ಷಣೆ, ಮೂವರು ನಾಪತ್ತೆ!

BREAKING: ನಾಮಪತ್ರ ತಿರಸ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್!

ರಾಜ್ಯದ ಮಹಿಳೆಯರೇ ಗಮನಿಸಿ : `ಗೃಹಲಕ್ಷ್ಮಿ’ ಹಣ ಪಡೆಯಲು ಇನ್ಮುಂದೆ ಈ ದಾಖಲೆಗಳು ಕಡ್ಡಾಯ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದಲ್ಲಿ `ಮರ್ಯಾದೆ ಗೇಡು ಹತ್ಯೆ’ ತಡೆಗೆ ಕರಡು ಮಸೂದೆ : ಜೀವಾವಧಿ ಜೈಲು, 5 ಲಕ್ಷ ರೂ. ವರೆಗೆ ದಂಡ ಫಿಕ್ಸ್.!
KARNATAKA

BIG NEWS: ರಾಜ್ಯದಲ್ಲಿ `ಮರ್ಯಾದೆ ಗೇಡು ಹತ್ಯೆ’ ತಡೆಗೆ ಕರಡು ಮಸೂದೆ : ಜೀವಾವಧಿ ಜೈಲು, 5 ಲಕ್ಷ ರೂ. ವರೆಗೆ ದಂಡ ಫಿಕ್ಸ್.!

By kannadanewsnow57
vidhana soudha
vidhana soudha

ಬೆಂಗಳೂರು: ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆ ಎಸೆಗುವವರಿಗೆ ಜೀವಾವಧಿ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿ ದಂಡ ವಿಧಿಸುವ ಮಸೂದೆ ಕರಡು ಸಿದ್ಧಪಡಿಸಲಾಗಿದ್ದು, ಶೀಘ್ರವೇ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಇತ್ತೀಚೆಗೆ ಗರ್ಭಿಣಿ ಮಾನ್ಯಾ ಪಾಟೀಲ್ ಅವರನ್ನು ತಂದೆಯೇ ಹತ್ಯೆ ಮಾಡಿದ್ದ ಪ್ರಕರಣ ದೇಶಾದ್ಯಂತ ಗಮನಸೆಳೆದಿದ್ದು, ಅಮಾನವೀಯ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗಳನ್ನು ತಡೆಯಲು ಪ್ರತ್ಯೇಕ ಕಾಯ್ದೆ ಜಾರಿಗೆ ತರಬೇಕೆಂಬ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಮದುವೆ ಮತ್ತು ಸಂಗಾತಿ ಆಯ್ಕೆಯ ಸ್ವಾತಂತ್ರ್ಯ ಗೌರವ ಮತ್ತು ಸಂಪ್ರದಾಯದ ಹೆಸರಲ್ಲಿ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿಷೇಧ ಮಸೂದೆ 2026 ಕರಡು ರೂಪಿಸಿದೆ.

ಮರ್ಯಾದೆಗೇಡು ಹತ್ಯೆ ತಡೆಗೆ ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ತರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಹೆಚ್‌.ಸಿ ಮಹದೇವಪ್ಪ ಹೇಳಿದರು.

ಮರ್ಯಾದೆಗೇಡು ಹತ್ಯೆ ನಡೆದ ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮಕ್ಕೆ ಗುರುವಾರ (ಜ.1) ಭೇಟಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಏಳು ತಿಂಗಳ ಗರ್ಭಿಣಿ ಹೆಣ್ಣು ಮಗಳನ್ನು ಅವರ ಕುಟುಂಬಸ್ಥರೇ ಕೊಲೆ ಮಾಡಿರುವುದು ಮನುಷ್ಯತ್ವ ವಿರೋಧಿ. ಯಾವುದೇ ಧರ್ಮ, ಜಾತಿ ಇರಲಿ ಇದು ನೊಂದು ತಲೆ ತಗ್ಗಿಸುವಂತಹ ಘಟನೆ ಎಂದು ಸಚಿವರು ಹೇಳಿದರು.

ಕೊಲೆಯಾದ ಮಾನ್ಯಾ ಮತ್ತು ಆಕೆಯ ಗಂಡ ಇಬ್ಬರೂ ವಯಸ್ಕರು. ಅವರಿಗೆ ಕಾನೂನು ಬದ್ದವಾಗಿ ಮದುವೆಯಾಗುವ ಸ್ವಾತಂತ್ರ್ಯ ಇತ್ತು. ಅದರು ಅವರ ಮೂಲಭೂತ ಹಕ್ಕು. ಇಲ್ಲಿ ಆ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಅಂಬೇಡ್ಕರ್ ಅವರು ಮದುವೆ ಹೆಣ್ಣಿನ ಇಚ್ಚೆಗೆ ಅನುಗುಣವಾಗಿ ನಡೆಯಬೇಕು, ಬಲವಂತವಾಗಿ ನಡೆಯಬಾರದು ಎಂದಿದ್ದಾರೆ. ಈ ಕೊಲೆಗೆ ಕಾರಣರಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ನಾವೆಲ್ಲ ಸಚಿವರು ಸೂಚಿಸಿದ್ದೇವೆ. ಇದು ದಲಿತ ದೌರ್ಜನ್ಯದ ಪ್ರಕರಣವೂ ಹೌದು. ನಾವು ಇತ್ತೀಚೆಗಷ್ಟೇ ಚಳಿಗಾಲದ ಅಧಿವೇಶನದಲ್ಲಿ ಸಾಮಾಜಿಕ ಬಹಿಷ್ಕಾರದ ವಿರುದ್ದ ಕಾನೂನು ರೂಪಿಸಿದ್ದೇವೆ ಎಂದರು ಹೇಳಿದರು.

BIG NEWS: Draft bill to prevent 'honour killings' in the state: Life imprisonment fine up to Rs. 5 lakh fixed.!
Share. Facebook Twitter LinkedIn WhatsApp Email

Related Posts

ರಾಜ್ಯದ ಮಹಿಳೆಯರೇ ಗಮನಿಸಿ : `ಗೃಹಲಕ್ಷ್ಮಿ’ ಹಣ ಪಡೆಯಲು ಇನ್ಮುಂದೆ ಈ ದಾಖಲೆಗಳು ಕಡ್ಡಾಯ.!

2 Mins Read

ನಿರುದ್ಯೋಗಿಗಳೇ ಎಚ್ಚರ : ಮನೆಯಿಂದಲೇ ಕೆಲಸ ಕೊಡುತ್ತೇವೆಂದು ₹10 ಕೋಟಿ ದೋಚಿದ ಖತರ್ನಾಕ್ ದಂಪತಿ.!

2 Mins Read

BREAKING : ಬೆಂಗಳೂರಿನ ವಾಹನ ಸವಾರರ ಗಮನಕ್ಕೆ : ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್ | Bengaluru Traffic

2 Mins Read
Recent News

BREAKING : 2 ಭಾರತೀಯ ಹಡಗುಗಳ ಮೇಲೆ ಅಮೆರಿಕ ಕ್ಷಿಪಣಿ ದಾಳಿ : 21 ಸಿಬ್ಬಂದಿಗಳ ರಕ್ಷಣೆ, ಮೂವರು ನಾಪತ್ತೆ!

BREAKING: ನಾಮಪತ್ರ ತಿರಸ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್!

ರಾಜ್ಯದ ಮಹಿಳೆಯರೇ ಗಮನಿಸಿ : `ಗೃಹಲಕ್ಷ್ಮಿ’ ಹಣ ಪಡೆಯಲು ಇನ್ಮುಂದೆ ಈ ದಾಖಲೆಗಳು ಕಡ್ಡಾಯ.!

ನಿರುದ್ಯೋಗಿಗಳೇ ಎಚ್ಚರ : ಮನೆಯಿಂದಲೇ ಕೆಲಸ ಕೊಡುತ್ತೇವೆಂದು ₹10 ಕೋಟಿ ದೋಚಿದ ಖತರ್ನಾಕ್ ದಂಪತಿ.!

State News
KARNATAKA

ರಾಜ್ಯದ ಮಹಿಳೆಯರೇ ಗಮನಿಸಿ : `ಗೃಹಲಕ್ಷ್ಮಿ’ ಹಣ ಪಡೆಯಲು ಇನ್ಮುಂದೆ ಈ ದಾಖಲೆಗಳು ಕಡ್ಡಾಯ.!

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯ ಹಣ ಪಡೆಯಲು ಈಗ ಹೊಸ ನಿಯಮಗಳನ್ನು…

ನಿರುದ್ಯೋಗಿಗಳೇ ಎಚ್ಚರ : ಮನೆಯಿಂದಲೇ ಕೆಲಸ ಕೊಡುತ್ತೇವೆಂದು ₹10 ಕೋಟಿ ದೋಚಿದ ಖತರ್ನಾಕ್ ದಂಪತಿ.!

BREAKING : ಬೆಂಗಳೂರಿನ ವಾಹನ ಸವಾರರ ಗಮನಕ್ಕೆ : ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್ | Bengaluru Traffic

BREAKING : ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು : ರೌಡಿಶೀಟರ್ ಕಾಲಿಗೆ ಪೊಲೀಸ್ ಫೈರಿಂಗ್.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.