ಬೆಂಗಳೂರು : ವಿವಿಧ ಇಲಾಖೆಗಳ ಅಧಿಕೃತ ಪತ್ರ ವ್ಯವಹಾರಗಳಲ್ಲಿ “ಡಾ॥ ಬಿ.ಆರ್. ಅಂಬೇಡ್ಕರ್ ವೀದಿ” ಎಂಬ ವಿಳಾಸವನ್ನು ಬಳಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಸರ್ಕಾರದ ಸಚಿವಾಲಯವು ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಟ್ಟಡಗಳು ಡಾ॥ ಬಿ.ಆರ್. ಅಂಬೇಡ್ಕರ್ ವೀದಿಯಲ್ಲಿದೆ.
ವಿವಿಧ ಇಲಾಖೆಗಳ ಅಧಿಕೃತ ಪತ್ರವ್ಯವಹಾರಗಳಲ್ಲಿ “ಡಾ॥ ಬಿ.ಆರ್. ಅಂಬೇಡ್ಕರ್ ವೀದಿ” ಎಂಬ ವಿಳಾಸವನ್ನು ಬಳಸದೇ ಕೈಬಿಟ್ಟಿರುವುದು ಸರ್ಕಾರದ ಗೆಮನಕ್ಕೆ ಬಂದಿದೆ. ಗೌರವಾನ್ವಿತ ನಾಯಕರು ಹಾಗೂ ಭಾರತದ ಸಂವಿಧಾನ ಶಿಲ್ಪಿ ಆಗಿರುವ ಡಾ|| ಬಿ.ಆರ್. ಅಂಬೇಡ್ಕರ್ ರವರ ಹೆಸರಿನ ವೀದಿಯನ್ನು ಅಧಿಕೃತ ಪತ್ರ ವ್ಯವಹಾರಗಳ ವಿಳಾಸದಲ್ಲಿ ಬಳಸದಿರುವುದು ಅಪೂರ್ಣ ಹಾಗೂ ಅಸಮಂಜಸವಾಗುತ್ತದೆ. ಆದ್ದರಿಂದ, ಕರ್ನಾಟಕ ಸರ್ಕಾರ ಸಚಿವಾಲಯದ ಎಲ್ಲಾ ಅಧಿಕೃತ ಪತ್ರ ವ್ಯವಹಾರಗಳಲ್ಲಿ “ಡಾ॥ ಬಿ.ಆರ್. ಅಂಬೇಡ್ಕರ್ ವೀದಿ” ಎಂದು ವಿಳಾಸವನ್ನು ನಮೂದಿಸಬೇಕೆಂದು ಈ ಮೂಲಕ ತಿಳಿಸಿದೆ.
ಕರ್ನಾಟಕ ಸರ್ಕಾರ ಸಚಿವಾಲಯದ ಎಲ್ಲಾ ಇಲಾಖೆಗಳು ಈ ನಿರ್ದೇಶನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅನುಸರಿಸಲು ಈ ಮೂಲಕ ತಿಳಿಸಿದೆ.