ಕಲಬುರ್ಗಿ : ಬಿಜೆಪಿಯವರು ಕ್ರಿಮಿನಲ್ ಕೆಲಸ ಮಾಡುತ್ತಾರೆ. ಅದಾದ ಮೇಲೆ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾರೆ. ಇಂತಹ ಕ್ರಿಮಿನಲ್ ಕೆಲಸಗಳನ್ನು ಮಾಡಿ ಆಮೇಲೆ ಜೈ ಶ್ರೀರಾಮ್ ಎಂದು ಕೂಗಿದರೆ ಮಾಡಿರುವ ಕೆಲಸಗಳು ಮುಚ್ಚಿ ಹೋಗುತ್ತಾ? ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿ ಆದ ತಕ್ಷಣ ಕಾನೂನು ಬರಲ್ವಾ? ಆರ್. ಅಶೋಕ್ ಸ್ವಾಮೀಜಿಯವರಿಗೆ ಈ ನೆಲದ ಕಾನೂನು ಅನ್ವಯ ಆಗಲ್ವಾ? ತಮ್ಮ ಹೇಳಿಕೆಗೆ ಖುದ್ದು ಚಂದ್ರಶೇಖರನಾಥ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿ ಸ್ವಾಮೀಜಿಯವರ ಹೇಳಿಕೆ ಸಮರ್ಥನೆ ಮಾಡಿಕೊಳ್ಳುತ್ತಿದೆ. ನಮಗೆ ಬೇರೆ ಕಾನೂನು ನಿಮಗೆ ಬೇರೆ ಕಾನೂನ?
ಬಸವಣ್ಣವರನ್ನು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹೇಡಿ ಅಂತಾರೆ. ಇದಕ್ಕೆ ಬಿಜೆಪಿಯವರು ಏನು ಹೇಳುತ್ತಾರೆ? ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಎಲ್ಲಿದ್ದಾರೆ? ಬಸವಣ್ಣ ಅಂದರೆ ನಿಮಗೆ ಅಲರ್ಜಿನ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಕ್ರಿಮಿನಲ್ ಕೆಲಸ ಮಾಡಿದೆ ಶ್ರೀರಾಮ್ ಅಂದರೆ ಮುಚ್ಚಿ ಹೋಗುತ್ತ? ಸಂವಿಧಾನ ವಿರೋಧಿ ಹೇಳಿಕೆ ನೀಡಿದರೆ ನಾವು ಸಹಿಸುವುದಿಲ್ಲ. ಸಂವಿಧಾನ ರಕ್ಷಣೆ ಮಾಡುವ ಲಕ್ಷಾಂತರ ಜನ ಬೀದಿಗೆ ಇಳಿಯುತ್ತಾರೆ. ನೇರವಾಗಿ ಸಂವಿಧಾನ ವಿರೋಧಿಸಲು ಆಗದೆ ಬಿಜೆಪಿ ಸ್ವಾಮೀಜಿಗಳನ್ನು ಬಳಸಿಕೊಳ್ಳುತಿದೆ. ಪಕ್ಷದ ನಾಯಕರು ಕೌಂಟರ್ ನೀಡಬೇಕು ಎಂದು ರಾಹುಲ್ ಸೂಚನೆ ನೀಡಿದ್ದಾರೆ.
ಸ್ವಾಮೀಜಿಗಳ ಹೇಳಿಕೆ ಇರುವುದು ಸಮರ್ಥಿಸಿಕೊಳ್ಳುತ್ತಿದ್ದಾರೆ. ನಿನ್ನೆ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ರಾಜ್ಯದ ನಾಯಕರೋಬ್ಬರಿಂದ ಈ ವಿಷಯ ಪ್ರಸ್ತಾಪವಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರು ಸಿಡಬ್ಲ್ಯೂ ಸಿ ಸಭೆಯಲ್ಲಿ ಪ್ರಸ್ತಾಪಿಸಿದರು. ಸಂವಿಧಾನದ ವಿಚಾರವಾಗಿ ಪೇಜಾವರ ಶ್ರೀ ಹೇಳಿಕೆಯನ್ನು ಪ್ರಸ್ತಾಪಿಸಿ ಚರ್ಚಿಸಲಾಗಿದೆ. ಸಂವಿಧಾನದ ತತ್ವಗಳನ್ನು ವಿರೋಧಿಸುವ ಯಾವುದೇ ಸ್ವಾಮೀಜಿ ಆಗಿರಲಿ ಕಾಂಗ್ರೆಸ್ ನಾಯಕರು ಕೌಂಟರ್ ಕೊಡಬೇಕು ಎಂದು ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ.
ಇನ್ನು ಸಂಪುಟಪ್ಪನ ಆರನೇ ಹಾಗೂ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸದ್ಯಕ್ಕೆ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಇಲ್ಲ ನನಗಿರುವ ಮಾಹಿತಿ ಪ್ರಕಾರ ಸಚಿವ ಸಂಪುಟ ವಿಸ್ತರಣೆ ಇಲ್ಲ. ಯಾರು ಏನು ಬೇಕಾದರೂ ಹೇಳಬಹುದು ಮೇಲಿಂದ ಆಗಬೇಕು ಅಲ್ವಾ? ಶಂಖದಿಂದ ಬಂದರೆ ಮಾತ್ರ ತೀರ್ಥ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.








