ಬೆಳಗಾವಿ : ಧರ್ಮಸ್ಥಳ ವಿರುದ್ಧ ಷಡ್ಯಂತರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ ನವೆಂಬರ್ 21ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್ಐಟಿ ಪ್ರಾಥಮಿಕ ತನಿಕ ವರದಿ ಸಲ್ಲಿಸಿತ್ತು ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು ಧರ್ಮಸ್ಥಳ ಪ್ರಕರಣದ ಚಾರ್ಜ್ ಶೀಟ್ ನಾನು ನೋಡಿಲ್ಲ ಎಂದು ತಿಳಿಸಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆಗಿರುವ ವಿಚಾರವಾಗಿ ಎಸ್ ಐ ಟಿ ರಚನೆ ಮಾಡಿ ತನಿಖೆಗೆ ಆದೇಶ ನೀಡಿದ್ದೀರಿ. ಈಗ ಷಡ್ಯಂತರ ನಡೆಸಿದ ಆರು ಆರೋಪಿಗಳು ಶಾಮೀಲು ಆಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಧರ್ಮಸ್ಥಳದ ಚಾರ್ಜ್ ಶೀಟ್ ನಾನು ಇದುವರೆಗೂ ನೋಡಿಲ್ಲ ಎಂದು ತಿಳಿಸಿದರು. CLP ಸಭೆಯಲ್ಲಿ ಏನೆಲ್ಲಾ ವಿಷಯಗಳ ಬಗ್ಗೆ ಚರ್ಚೆ ಆಯ್ತು ಎಂದು ಕೇಳಿದಾಗ ಎಲ್ಲವನ್ನು ನಿಮಗೆ ಹೇಳಲು ಆಗುತ್ತಾ ಎಂದು ಪ್ರಶ್ನಿಸಿದರು.








