ಬೆಂಗಳೂರು : ಬೆಂಗಳೂರಿನಲ್ಲಿ ಡೆಂಟಲ್ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಶಸ್ವಿನಿ ತಾಯಿ ಅವರು ದೂರು ನೀಡಿದ ಹಿನ್ನೆಲೆಯಲ್ಲಿ ಕಾಲೇಜು ಪ್ರಿನ್ಸಿಪಾಲ್ ಸೇರಿದಂತೆ ಒಟ್ಟು ಐವರು ಉಪನ್ಯಾಸಕರ ವಿರುದ್ಧ FIR ದಾಖಲಾಗಿದೆ.
ಹೌದು ಬೆಂಗಳೂರಿನಲ್ಲಿ ಡೆಂಟಲ್ ಸ್ಟೂಡೆಂಟ್ ಯಶಸ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಲೇಜು ಪ್ರಿನ್ಸಿಪಾಲ್ ಸೇರಿ ಇವರು ಲೆಕ್ಚರರ್ಸ್ ವಿರುದ್ಧ fir ದಾಖಲಾಗಿದೆ ಯಶಸ್ವಿನಿ ತಾಯಿ ಅವರು ದೂರು ನೀಡಿದ ಹಿನೆಲೆಯಲ್ಲಿ ಅದರ ಅನ್ವಯ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ಬೇಸತ್ತು ಜನವರಿ 8ರಂದು ಚಂದಾಪುರದ ಮನೆಯಲ್ಲಿ ಯಶಸ್ವಿನಿ ಆತ್ಮಹತ್ಯೆಗೆ ಶರಣಾಗಿದ್ದಳು. ಯಶಸ್ವಿನಿ ಆತ್ಮಹತ್ಯೆಗೆ ಕಾಲೇಜು ಉಪನ್ಯಾಸಕರು ಕಿರುಕುಳ ನೀಡಿರುವ ಆರೋಪ ಕೇಳಿಬಂದಿತ್ತು.
ಸಹಪಾಠಿಗಳ ಮುಂದೆ ಯಶಸ್ವಿನಿ ಬಣ್ಣ ಹಾಗೂ ಡ್ರೆಸ್ ಬಗ್ಗೆ ಉಪನ್ಯಾಸಕರು ಟೀಕಿಸಿದ್ದರು. ಕಪ್ಪು ಬಣ್ಣದ ನಿನಗೆ ಡಾಕ್ಟರ್ ಆಗಬೇಕಾ ಎಂದು ಹೀಯಾಳಿಸಿದ್ದರು. ವಿದ್ಯಾರ್ಥಿನಿ ಕಣ್ಣು ನೋವು ಎಂದಿದ್ದಕ್ಕೆ ಕೊಂಕು ಮಾತನಾಡಿರುವ ಆರೋಪ ಕೇಳಿ ಬಂದಿದೆ ಸೆಮಿನಾರ್ ರೇಡಿಯೋಲೋಜಿ, ಕೇಸ್ ನೀಡದೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಉಪನ್ಯಾಸಕರ ವಿರುದ್ಧ ಕ್ರಮಕ್ಕೆ ಯಶಸ್ವಿನಿ ತಾಯಿ ಪರಿಮಳ ಒತ್ತಾಯಿಸಿದ್ದಾರೆ.








