ಹಾಸನ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಳೆ ಹಚ್ಚುತ್ತಿದ್ದು ಅದರ ಜೊತೆಗೆ ಡೇಂಗು ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಇದೀಗ ಹಾಸನದಲ್ಲಿ ಕಳೆದ ನಾಲ್ಕು ದಿನಗಳಲ್ಲೇ ಆರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಹೌದು ಹಾಸನ ಜಿಲ್ಲೆಯಲ್ಲಿ ಡೆಂಗ್ಯೂ ಸೋಕಿನಿಂದ ಮರಣ ಮೃದಂಗ ಬಾರಿಸುತ್ತಿದ್ದೂ, 4 ದಿನಗಳಲ್ಲಿ ಮಾರಕ ಡೆಂಗಿಗೆ 6 ಮಕ್ಕಳು ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ 5 ಹಾಗೂ ಮೈಸೂರಲ್ಲಿ 1 ಮಗು ಸಾವನ್ನಪ್ಪಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕ್ಕಮಗಳೂರು ಮೂಲದ ಒಂದು ಮಗು ಸಾವನ್ನಪ್ಪಿದೆ ಎಂದು ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನಲ್ಲಿರುವ ಹಾಸನ ಜಿಲ್ಲೆಯ ಮತ್ತೊಂದು ಮಗು ಇದೀಗ ಮೃತಪಟ್ಟಿದೆ.ಹಾಸನ ಜಿಲ್ಲೆಯ 3 ಹೊರ ಜಿಲ್ಲೆಯ 2 ಮಕ್ಕಳು ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯಲ್ಲಿ ಡೆಂಘಿ ಸೊಂಕಿನಿಂದ ಮರಣ ಮೃದಂಗ ಬಾರಿಸುತ್ತಿದೆ. ನಿನ್ನೆ ಹಾಸನದ ಸಮೃದ್ಧಿ ಎನ್ನುವ 8 ವರ್ಷದ ಮಗು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿತ್ತು ಇಂದು ಚಿಕಿತ್ಸೆ ಫಲಿಸದೇ ಸಾವನಪ್ಪಿದೆ.
ಹಾಸನದಲ್ಲಿ ನಿರಂತರವಾಗಿ ಬಿಟ್ಟು ಬಿಟ್ಟು ಮಳೆ ಬರುತ್ತಿರುವುದರಿಂದ ನಿಂತ ನೀರಿನ ಮಳೆಯೆಯಿಂದ ಸೊಳ್ಳೆಗಳು ಹೆಚ್ಚಾಗಿ ಈ ಒಂದು ಡೇಂಗು ಸೋಂಕು ಹೆಚ್ಚಳವಾಗುತ್ತಿದೆ ಎಂದು ತಿಳಿದು ಬಂದಿದೆ. ಆರೋಗ್ಯ ಅಧಿಕಾರಿಗಳು ಎಷ್ಟೇ ಜಾಗೃತಿ ಮೂಡಿಸಿದರು ಕೂಡ ಜನರು ಎಚ್ಚೆತ್ತುಕೊಳ್ಳದೆ ಇರುವುದರಿಂದ ಇಂತಹ ಅನಾಹುತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.