ಬೆಂಗಳೂರು : ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ಜನರು ಯಾವುದಕ್ಕೂ ಹೆದರದೆ ಚಿಕನ್ ಖರೀದಿಗೆ ಮುಗಿಬಿದ್ದಿದ್ದು ಇನ್ನೂ ಚಿಕ್ಕಬಳ್ಳಾಪುರದಲ್ಲಿ ಚಿಕನ್ ಕಡೆ ಮುಖ ಮಾಡದ ಜನರು, ಮಟನ್ ಖರೀದಿಯಲ್ಲಿ ತೊಡಗಿದ್ದಾರೆ. ಹಾಗಾಗಿ ಚಿಕ್ಕಬಳ್ಳಾಪುರದಲ್ಲಿ 70 ರೂಪಾಯಿ ಚಿಕನ್ ರೇಟ್ ಕಡಿಮೆಯಾಗಿದ್ದು, ಮಟನ್ ಗೆ ಫುಲ್ ಡಿಮ್ಯಾಂಡ್ ಆಗಿದ್ದು ಮಟನ್ ಗೆ ಕೆಜಿಗೆ ರೂ.50 ಏರಿಕೆಯಾಗಿದೆ.
ಹೌದು ಹಕ್ಕಿಜ್ವರ ಭೀತಿ ಹಿನ್ನೆಲೆ ಚಿಕನ್ ಬದಲು ಮಟನ್ ಗೆ ಮೊರೆ ಹೋದ ಜನರು. ಮಾಂಸ ಪ್ರೀಯರಿಂದ ಚಿಕನ್ ಬದಲು ಇದೀಗ ಮಟನ್ ಖರೀದಿ ಭರಾಟೆ ಜೋರಾಗಿದೆ. ಚಿಕನ್ ಬಗ್ಗೆ ಕೇಳಿದರೆ ಬೆಚ್ಚಿ ಬೀಳುತ್ತಿದ್ದಾರೆ ಚಿಕ್ಕಬಳ್ಳಾಪುರ ಜನತೆ. ಚಿಕನ್ ರೇಟ್ 70 ರೂ. ಇಳಿಕೆಯಾಗಿದ್ದು, 270 ರೂ. ಇದ್ದ ಚಿಕನ್ ದರ ಇದೀಗ 200 ರೂ. ತಲುಪಿದೆ. ಅದೇ ರೀತಿಯಾಗಿ ಮಟನ್ ಬಲೆ ರೂ.50 ಏರಿಕೆಯಾಗಿದೆ. ಪ್ರತಿ ಕೆಜಿ ಚಿಕನ್ ಗೆ 20 ರೂಪಾಯಿ ಆಗಿದ್ದು ಪ್ರತಿ ಕೆಜಿ ಮಟನ್ ಗೆ ರೂ. 50 ಏರಿಕೆಯಾಗಿದೆ. ನಾಟಿ ಕೋಳಿಗಳನಂತು ಯಾರು ಕೂಡ ಕೇಳುತ್ತಿಲ್ಲ ಚಿಕನ್ ಬದಲು ಮಟನ್ ಗೆ ಡಿಮ್ಯಾಂಡ ಹೆಚ್ಚಾಗಿದೆ.
ಕೋಳಿ ಮಾಂಸಕ್ಕೆ ಬೇಡಿಕೆ ಕಡಿಮೆ ಆಗುತ್ತಿದ್ದಂತೆಯೇ ಬೆಲೆ ಕೂಡಾ ದಿಢೀರ್ ಕುಸಿತವಾಗಿದೆ. ಜನರು ಮೀನು ಸೇರಿ ಇತರ ಬದಲಿ ಮಾಂಸಗಳನ್ನು ಖರೀಸುತ್ತಿದ್ದು, ಕೋಳಿ ಮಾರಾಟಗಾರರಿಗೆ ಭಾರಿ ಮಾಂಸ ನಷ್ಟ ಉಂಟಾಗಿದೆ. ಸದ್ಯ ಕೋಳಿ ಬೆಲೆಯಲ್ಲಿ ತೀವ್ರ ಕುಸಿತವಾಗಿದೆ. ಬಾಯ್ಸರ್‌ಕೋಳಿ ಬೆಲೆ ಕೇಜಿಗೆ ₹270ಗಳಿಂದ ಕ200ಕ್ಕೆ ಇಳಿದಿದೆ. ಆದರೂ ಮಾರಾಟ ಕಡಿಮೆಯಾಗಿದೆ. ಗ್ರಾಮಾಂತರದಲ್ಲಿ ಬೆಲೆ ಪ್ರತಿ ಕೇಜಿಗೆ ₹240 ರಿಂದ ₹180ಕ್ಕೆ ಇಳಿದಿವೆ.